ಶುಕ್ರವಾರ, ಮೇ 14, 2021
31 °C

ಓದುಗರ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎನ್. ಮನು ಚಕ್ರವರ್ತಿ ಅವರು ಬರೆದ `ಬೆಳ್ಳಿ ತೆರೆಯ ಕಪ್ಪುಕಲೆ~ (ಸಾ.ಪು. ಏ.4) ಲೇಖನ ಇಂದಿನ ಕನ್ನಡ ಚಲನಚಿತ್ರರಂಗಕ್ಕೆ ರಾಜ್ಯ ಸರ್ಕಾರ ನೀಡುತ್ತಿರುವ ಮನ್ನಣೆ ಯಾವ ರೀತಿಯದ್ದು ಎಂಬುದನ್ನು ತೋರಿಸಿಕೊಟ್ಟಿತು. ಲೇಖಕರು ಈ ಬಾರಿ ಪ್ರಶಸ್ತಿ ಪಡೆಯದೇ ಹೋದ ಚಲನಚಿತ್ರಗಳ ಬಗ್ಗೆ ಕಾಳಜಿಯಿಂದ ಬರೆದದ್ದು ಇಷ್ಟವಾಯಿತು. ಇಂಥ ಲೇಖನಗಳ ಅಗತ್ಯ ಇಂದು ಹೆಚ್ಚಿದೆ.

ಎನ್.ಲಕ್ಷ್ಮೀಕಾಂತ, ಮೈಸೂರು

`ಎಲ್ಲರಂತಲ್ಲ ಎಲ್ಲಪ್ಪ~ ಲೇಖನ ಓದಿ ಕಣ್ಣಿನಲ್ಲಿ ನೀರು ಬಂತು. ಇಂಥ ವೀರಯೋಧನ ಹೆಸರು ಜನರಿಗೆ ಅಪರಿಚಿತವಾಗಿ ಹೋಗಿದ್ದು ವಿಷಾದಕರ. ಎಲ್ಲಪ್ಪ ಅವರ ಸಾಧನೆಯ ಬಗ್ಗೆ ಪಠ್ಯಪುಸ್ತಕಗಳಲ್ಲಿ ಬರಬೇಕು. ಆಗ ಮಾತ್ರ ಬ್ರಿಟೀಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ ಮಡಿದ ವೀರಯೋಧನಿಗೆ ಗೌರವ ಸಲ್ಲುತ್ತದೆ.

ನಳಿನಾ ಎಂ.ಬಿ, ಹೊಳೆನರಸೀಪುರ

ಈ ಬಾರಿಯ ಚಿತ್ರರೂಪಕದಲ್ಲಿ ಜೋಸೆಫ್ ಮಲ್ಲೋರ್ಡ್ ವಿಲಯಮ್ ಟರ್ನರ್ ಕಲಾಕೃತಿ ಮೂಡಿಬಂದು ಖುಷಿ ನೀಡಿತು. ಅವರ ಚಿತ್ರವನ್ನು ಅತಿಸೂಕ್ಷ್ಮವಾಗಿ ಗಮನಿಸಿದಾಗ ಮಾತ್ರ ಬಣ್ಣಗಳ ಹಿಂದೆ ಅಡಗಿರುವ ರೂಪಗಳು ಹೊರಗೆ ಬರುತ್ತವೆ. ಇಂಥ ಅದ್ಭುತ ಕಲಾಕೃತಿಯನ್ನು ಕೆಲವೇ ಕೆಲವು ಬಣ್ಣಗಳನ್ನು ಬಳಸಿ ರಚಿಸಿದ ಮಲ್ಲೋರ್ಡ್‌ಗೆ ವಂದನೆಗಳು. ಇಂಥ ಶ್ರೇಷ್ಠ ಕಲಾವಿದರ ಬಗ್ಗೆ ತಿಳಿಸಿಕೊಡುತ್ತಿರುವ ಸಾಪ್ತಾಹಿಕ ಪುರವಣಿಯ ಕೆಲಸ ಶ್ಲಾಘನೀಯ.

ಮಲ್ಲಿಕಾರ್ಜುನ. ಎಚ್, ರಾಣೆಬೆನ್ನೂರು

`ಅಂಚೆ ಕನ್ನಡಿಯಲ್ಲಿ ಗುರುದೇವ~ (ಎನ್. ಜಗನ್ನಾಥ ಪ್ರಕಾಶ್) ಲೇಖನ ರವೀಂದ್ರ ನಾಥ್ ಟ್ಯಾಗೋರ್ ಅವರಿಗೆ ಅಂಚೆ ಚೀಟಿ ಮೂಲಕ ದೇಶ ವಿದೇಶದಲ್ಲಿ ದೊರೆತ ಗೌರವದ ಬಗ್ಗೆ ಅರಿವು ಮೂಡಿಸಿತು. ಇಂಥ ಲೇಖನಗಳು ಓದುಗರಲ್ಲಿ ಕುತೂಹಲ ಹುಟ್ಟಿಸುವುದರೊಂದಿಗೆ ವಿದ್ಯಾರ್ಥಿಗಳಿಗೆ ಆಕರಗಳಾಗಿ ನೆರವಾಗುತ್ತವೆ.

ಪುಣ್ಯವತಿ.ಜಿ.ಟಿ, ದಾವಣಗೆರೆ

ಡಾ.ಮೊಗಳ್ಳಿ ಗಣೇಶ್ ಅವರ `ರೇಶಿಮೆಹುಳ~ ಕತೆ ಓದಿ ರೇಶಿಮೆ ಸೀರೆಗಳ ಬಗ್ಗೆ ಬೇಸರ ಹುಟ್ಟಿತು. ಕತೆಯಲ್ಲಿ ಬರುವ ಕೆಂಚನ ಕತೆ ಆಧುನಿಕ ಜೀತಪದ್ಧತಿಯನ್ನು ಪ್ರತಿನಿಧಿಸುವಂತಿದೆ.

ಶಿವು, ಚಿತ್ರದುರ್ಗ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.