ಕರಣ್ ಜೋಹರ್ ನಿರ್ದೇಶನದ ‘ಉಂಗ್ಲಿ’ ಮತ್ತು ರಾಧಿಕಾ ರಾವ್ ನಿರ್ದೇಶನದ ‘ಐ ಲವ್ ಎನ್ವೈ’ ಚಿತ್ರಗಳು ನಿಗದಿತ ಸಮಯಕ್ಕೆ ಬಿಡುಗಡೆಯಾಗದಿರುವುದಕ್ಕೆ ನಟಿ ಕಂಗನಾ ರನೋಟ್ಗೆ ನಿರಾಶೆ ಏನೂ ಕಾಡುತ್ತಿಲ್ಲವಂತೆ. ಈ ಚಿತ್ರಗಳ ಬಿಡುಗಡೆ ದಿನಾಂಕ ಪದೇಪದೇ ಮುಂದೆ ಹೋಗುತ್ತಿರುವುದರ ಬಗ್ಗೆ ಕಂಗನಾ ಮಾತನಾಡಿದ್ದಾರೆ.

‘ಐ ಲವ್ ನ್ಯೂ ಇಯರ್ ರೊಮ್ಯಾಂಟಿಕ್, ಕಾಮಿಡಿ ಸಿನಿಮಾ. ಈ ಚಿತ್ರವನ್ನು ರಾಧಿಕಾ ರಾವ್ ಮತ್ತು ವಿನಯ್ ಸಪ್ರು ನಿರ್ದೇಶಿಸಿದ್ದಾರೆ. ಸನ್ನಿ ದೇವಲ್ ಜತೆ ನಾಯಕಿಯಾಗಿ ಕಾಣಿಸಿಕೊಂಡಿದ್ದೇನೆ. ಈ ಚಿತ್ರವನ್ನು 2013ರ ಫೆಬ್ರುವರಿಯಲ್ಲಿ ಬಿಡುಗಡೆ ಮಾಡಬೇಕು ಎಂದು ತೀರ್ಮಾನಿಸಲಾಗಿತ್ತು. ಆದರೆ, ಆ ತಿಂಗಳು ಅದು ಬಿಡುಗಡೆಯಾಗಲಿಲ್ಲ. ನಂತರ ‘... ಎನ್ವೈ’ ಚಿತ್ರವನ್ನು ಏಪ್ರಿಲ್ನಲ್ಲಿ ಬಿಡುಗಡೆ ಮಾಡುವುದು ಎಂದು ತೀರ್ಮಾನಿಸಲಾಯಿತು. ಆಗಲೂ ಚಿತ್ರ ತೆರೆಕಾಣಲಿಲ್ಲ. ಅಲ್ಲಿಂದ ಸೆಪ್ಟೆಂಬರ್ಗೆ, ಆನಂತರ ಡಿಸೆಂಬರ್ನಲ್ಲಿ ಬಿಡುಗಡೆ ಮಾಡಲಾಗುವುದು ಎಂದರು. ಆದರೆ, 2013 ಕಳೆದು 2014 ಬಂದರೂ ಚಿತ್ರ ಇನ್ನೂ ತೆರೆಕಂಡಿಲ್ಲ.

ಈ ಚಿತ್ರದ ಬಿಡುಗಡೆ ದಿನಾಂಕವನ್ನು ಪದೇಪದೇ ಮುಂದೂಡುತ್ತಿರುವುದಕ್ಕೆ ನಿರ್ದಿಷ್ಟ ಕಾರಣ ತಿಳಿದಿಲ್ಲ. ಆದರೆ, ಈ ಚಿತ್ರದ ಟ್ರೇಲರ್ಗೆ ಸಿಕ್ಕ ಅತ್ಯಂತ ಕಡಿಮೆ ಪ್ರತಿಕ್ರಿಯೆ ಹಾಗೂ ಸನ್ನಿ ದೇವಲ್ ಈಚೆಗೆ ಅಭಿನಯಿಸಿದ ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡದೇ ಇರುವುದು ‘ಐ ಲವ್ ..’ ಚಿತ್ರ ಬಿಡುಗಡೆಗೊಳ್ಳದೇ ಇರಲು ಪ್ರಮುಖ ಕಾರಣ ಎನಿಸುತ್ತದೆ.

ಇನ್ನು, ಕರಣ್ ಜೋಹರ್ ನಿರ್ದೇಶನದ ‘ಉಂಗ್ಲಿ’ ಚಿತ್ರದಲ್ಲಿ ನಾನು, ಇಮ್ರಾನ್ ಹಶ್ಮಿ, ಸಂಜಯ್ ದತ್, ನೇಹಾ ಧುಪಿಯಾ, ರಣ್ದೀಪ್ ಹೂಡಾ ಮೊದಲಾದವರು ನಟಿಸಿದ್ದೇವೆ. ಈ ಚಿತ್ರ ಕೂಡ 2013ರಲ್ಲೇ ತೆರೆ ಕಾಣಬೇಕಿತ್ತು.

ಕರಣ್ ಜೋಹರ್ ‘ಉಂಗ್ಲಿ’ ಚಿತ್ರ 2013ರ ಮೇ 23ಕ್ಕೆ ತೆರೆಕಾಣಲಿದೆ ಎಂದು ಟ್ವೀಟ್ ಮಾಡಿದ್ದರು. ಆದರೆ, ಈ ಚಿತ್ರ ಕೂಡ ಈವರೆಗೂ ಬಿಡುಗಡೆಯಾಗಿಲ್ಲ. ಹಾಗಾಗಿ, ಈ ಎರಡೂ ಚಿತ್ರಗಳೂ ಇಂದಿಗೂ ಡಬ್ಬಿಯಲ್ಲಿಯೇ ಇವೆ.

ಅಭಿನಯಿಸಿರುವ ಈ ಎರಡು ಚಿತ್ರಗಳು ಬಿಡುಗಡೆಯಾಗಿಲ್ಲ ಎಂದು ನಾನೇನು ನಿರಾಶಳಾಗಿಲ್ಲ. ನಟಿಸಿದ್ದಕ್ಕೆ ನಿಗದಿತ ಸಂಭಾವನೆ ಯನ್ನಂತೂ ಪಡೆದುಕೊಂಡಿದ್ದೇನೆ. ಹಾಗಾಗಿ, ನಾನು ಸೇಫ್. ಇನ್ನು ಆ ಚಿತ್ರಗಳು ಬಿಡುಗಡೆಯಾಗಿಲ್ಲ ಎಂದು ನಾನ್ಯಾಕೆ ಕೊರಗಲಿ’.
ಅಂದಹಾಗೆ, ಕಂಗನಾ ರನೋಟ್ ಸದಕ್ಕೆ ‘ಕ್ವೀನ್’ ಚಿತ್ರವನ್ನು ಮುಗಿಸಿದ್ದಾರೆ. ಈ ಚಿತ್ರ ಮಾರ್ಚ್ 7ರಂದು ತೆರೆಗೆ ಬರಲು ಸಿದ್ಧವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.