ನಿರೂಪಣೆ ಒಂದು ಕಲೆ. ಮಾತಿನ ಲಹರಿ ಹರಿಬಿಡುವ ನಿರೂಪಕ ಕಾರ್ಯಕ್ರಮದ ಇತಿಮಿತಿಯನ್ನರಿಯದ ಭಾಷಣಕಾರನಾಗಬಾರದು. ನಿರೂಪಕನ ಮಾತುಗಳು ಕಾರ್ಯಕ್ರಮದ ಸ್ವರೂಪಕ್ಕೆ ಸೀಮಿತವಾಗಿರಬೇಕು. ನಿಜ. ನಿರೂಪಣೆಯಲ್ಲಿ ಮಾತೇ ಬಂಡವಾಳ.

ಹಾಗಂತ ಅತಿಯಾದರೆ ಅಮೃತವೂ ವಿಷವೆಂಬಂತೆ ಅದು ಸಭಿಕರಿಗೆ ರೇಜಿಗೆ ಹುಟ್ಟಿಸುತ್ತದೆ. ಇದು ಒಂದು ಸಾರ್ವಜನಿಕ ಕಾರ್ಯಕ್ರಮದ ನಿರೂಪಣೆಗೆ ಸೀಮಿತವಲ್ಲ. ರೇಡಿಯೊ, ಟೀವಿ ವಾಹಿನಿಗಳ ನಿರೂಪಣೆಯಲ್ಲೂ ನಿರೂಪಕರು ಕಟ್ಟುಪಾಡುಗಳನ್ನು ಹಾಕಿಕೊಳ್ಳಬೇಕು. ಇವು ನಾನು ನಿರೂಪಕಿಯಾಗಿ ನನ್ನ ಅನುಭದಲ್ಲಿ ಕಂಡುಕೊಂಡ ಸಂಗತಿಗಳು.

ನಮ್ಮದು ವೈವಿಧ್ಯಮಯ ಭಾಷೆಗಳನ್ನಾಡುವ ರಾಜ್ಯ. ಇಲ್ಲಿ ಒಂದೊಂದು ಪ್ರದೇಶದಲ್ಲಿ ಒಂದೊಂದು ಬಗೆಯ ಕನ್ನಡವಿದೆ. ನನ್ನ ಹುಟ್ಟೂರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ.

ಹಾಗೆಂದು ನಿರೂಪಕಿಯಾಗಿ ನಾನು ಮಲೆನಾಡ ಭಾಷೆಯನ್ನೇ ಬಳಸಿದರೆ ಜನರಿಗೆ ಅರ್ಥವಾಗುವುದಿಲ್ಲ. ಎಲ್ಲಾ ಪ್ರದೇಶದ ಜನರೂ ಸುಲಭವಾಗಿ ಗ್ರಹಿಸುವಂತಹ ಭಾಷೆ ಬಳಸಬೇಕು.

ಯಾವುದೋ ಒಂದು ಬಗೆಯ ಕಾರ್ಯಕ್ರಮಕ್ಕೆ ಸೀಮಿತವಾದರೆ ನಿರೂಪಕ/ಕಿ ಎಂಬ ಅಸ್ಮಿತೆ ಸಿಗುವುದಿಲ್ಲ. ಬಹುಭಾಷೆಗಳಲ್ಲಿ ಪ್ರಸಾರವಾಗುವ ಶ್ರೀ ಶಂಕರ ವಾಹಿನಿಯಲ್ಲಿ ಮೂರು ವರ್ಷಗಳಿಂದ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದೇನೆ.

ನನ್ನ ನಿರೂಪಣೆಯ `ಭಕ್ತಿ ಸಿಂಚನ~ ಕಾರ್ಯಕ್ರಮ ಇದೀಗ ಒಂದು ಸಾವಿರ ಕಂತುಗಳನ್ನು ಮುಟ್ಟುತ್ತಿದೆ. ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ ನನ್ನ ನಿರೂಪಣೆ ಸೀಮಿತವಲ್ಲ. ವಾಹಿನಿಯಲ್ಲಿ ಪ್ರಸಾರವಾಗುವ ಸಂಗೀತ, ಭಜನೆ, ಅಡುಗೆ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳನ್ನೂ ನಡೆಸಿಕೊಟ್ಟಿದ್ದೇನೆ. ಹಿನ್ನೆಲೆ ಧ್ವನಿಯನ್ನೂ ನೀಡಿದ್ದೇನೆ.

ನಿರೂಪಣೆಗೆ ಕಾಲಿರಿಸಿದ್ದು ಎಸ್ಎಸ್ಎಲ್ಸಿಯಲ್ಲಿ ಓದುತ್ತಿದ್ದಾಗ. ಆಗ ಏನನ್ನಾದರೂ ಸಾಧಿಸಬೇಕೆಂಬ ತುಡಿತ ನನ್ನಲ್ಲಿತ್ತು. ಆಗಲೇ ಸ್ಥಳೀಯ ಪತ್ರಿಕೆಗಳಲ್ಲಿ ನನ್ನ ಹಲವಾರು ಕವನಗಳು, ಲೇಖನಗಳು ಪ್ರಕಟವಾಗಿದ್ದವು. ಸಂಪ್ರದಾಯಸ್ಥ ಕುಟುಂಬದಲ್ಲಿದ್ದ ಸಾಹಿತ್ಯ ಪ್ರೀತಿ ನನ್ನಲ್ಲಿ ಓದಿನ ಗೀಳನ್ನು ಹುಟ್ಟಿಸಿತು.

ಅದು ಬರವಣಿಗೆಗೂ ಪ್ರೇರಣೆ ನೀಡಿತು. ಸಾಹಿತ್ಯ ಮಾತ್ರವಲ್ಲ ಸಂಗೀತ, ಕ್ರೀಡೆ, ಪರಿಸರ, ರಾಜಕೀಯ ಹೀಗೆ ವಿವಿಧ ಕ್ಷೇತ್ರಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಬೆಳೆಯಿತು. ನಿರೂಪಕಿಗೆ ಅಗತ್ಯವಾದ ಭಾಷೆಯ ಮೇಲಿನ ಹಿಡಿತ, ಸ್ಥಿಮಿತತೆಯನ್ನು ನನ್ನಲ್ಲಿ ಬೆಳೆಸಿದ್ದು ಈ ಆಸಕ್ತಿಯೇ. ನಿರೂಪಕರಾಗಿ ಬೆಳೆಯಲು ಈ ಜ್ಞಾನಗಳು ಅತ್ಯಗತ್ಯ.

ಎಫ್ಎಂಗಳಲ್ಲಿ ಮಾತಿನ ಮಳೆಯಲ್ಲಿ ಎಲ್ಲವೂ ಮುಳುಗಿ ಹೋಗುತ್ತವೆ. ಜನರೂ ಸಹ. ಒಂದು ಗಂಭೀರ ವಿಷಯದ ಮಧ್ಯೆ ನಿರೂಪಕರ ತರಲೆ ತುಂಟಾಟಗಳು ಬೆರೆತಿರುತ್ತವೆ. ಅಲ್ಲಿ ಹಾಡು ಪ್ರಧಾನ.

ಹೀಗಾಗಿ ಆಡಿದ ಮಾತುಗಳೆಲ್ಲಾ ಜನರ ಒಂದು ಕಿವಿ ಒಳಹೊಕ್ಕು ಇನ್ನೊಂದು ಕಿವಿಯಿಂದ ಜಾರಿಹೋಗುತ್ತವೆ. ಆದರೆ ಬೇರೆ ವಾಹಿನಿಗಳಲ್ಲಿ ಹಾಗಲ್ಲ. ನಮ್ಮ ಮಾತುಗಳು ಜನರ ಮನದಲ್ಲಿ ಹೊಕ್ಕು ಅವರಲ್ಲಿ ಗಂಭೀರ ಚಿಂತನೆಗೆ ಕಾರಣವಾಗಬೇಕು.

ಹಾಗೆ ಆದಾಗಲೇ ನಿರೂಪಕ/ಕಿಯ ಶ್ರಮ ಸಾರ್ಥಕವಾಗುವುದು. ನಿರೂಪಣೆಯ ಕಲೆಗೆ ಕನ್ನಡದಲ್ಲಿ ಭದ್ರ ನೆಲೆ ನೀಡಿದವರು ಅಪರ್ಣಾ. ನಿರೂಪಕಿಯಾಗುವ ನನ್ನ ಕನಸಿಗೆ ಅವರೇ ಸ್ಫೂರ್ತಿ. ಅವರಿಂದ ಹಲವು ಸಲಹೆಗಳನ್ನು ತೆಗೆದುಕೊಂಡಿದ್ದೇನೆ. ತೆಗೆದುಕೊಳ್ಳುತ್ತಲೇ ಇದ್ದೇನೆ.

ಅವರನ್ನು ಶ್ರೀ ಶಂಕರ ವಾಹಿನಿಗಾಗಿ ಸಂದರ್ಶನ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಪಾಲಿನ ಮರೆಯಲಾಗದ ದಿನ. ಸಿ. ಅಶ್ವತ್ಥ್, ದೊಡ್ಡರಂಗೇಗೌಡ, ದಿವ್ಯಾ ರಾಘವನ್, ಪ್ರೊ.ಕೃಷ್ಣಮೂರ್ತಿ, ಶಮಿತಾ ಮಲ್ನಾಡ್ ಮುಂತಾದವರನ್ನು ಸಂದರ್ಶಿಸುವ ಸೌಭಾಗ್ಯವೂ ನನ್ನದಾಗಿದೆ.

ಭದ್ರಾವತಿ ಆಕಾಶವಾಣಿಯಲ್ಲಿ ಹಲವು ಬಾರಿ ಕವನ ವಾಚನ ಮಾಡಿದ್ದೆ. ಚಿಕ್ಕವಯಸ್ಸಿನಲ್ಲೇ ನಿರೂಪಕಿಯಾಗುವ ಅವಕಾಶ ನನಗೆ ಒಲಿದು ಬಂತು. ತೀರ್ಥಹಳ್ಳಿ, ಸಾಗರ, ಹೊಸನಗರ, ಶಿವಮೊಗ್ಗ, ಬಾಗಲಕೋಟೆ, ಬೆಂಗಳೂರು ಹೀಗೆ ವಿವಿಧೆಡೆ ಹಲವು ಕಾರ್ಯಕ್ರಮಗಳನ್ನು ನಡೆಸಿಕೊಟ್ಟೆ.

ಪಿಯುಸಿಯಲ್ಲಿ ಓದುತ್ತಿದ್ದಾಗ 2003ರಲ್ಲಿ ಶಿವಮೊಗ್ಗದಲ್ಲಿ ನಡೆದ `ಚಂದನೋತ್ಸವ~ ಕಾರ್ಯಕ್ರಮದ ನಿರೂಪಣೆಯ ಅವಕಾಶ ಅಚಾನಕ್ಕಾಗಿ ದೊರಕಿತು. ಮೊದಲ ಬಾರಿಗೆ ಕ್ಯಾಮೆರಾ ಎದುರು ನಿಂತ ಅನುಭವ.

ಅದು ಚಂದನ ವಾಹಿನಿಯಲ್ಲಿ ನೇರಪ್ರಸಾರವಾಯಿತು. ಈ ಕಾರ್ಯಕ್ರಮದ ಬಳಿಕ ಹಲವು ಅವಕಾಶಗಳು ಅರಸಿ ಬಂದವು. ಆದರೆ ಓದು ಮುಗಿಸುವ ಗುರಿ ಎದುರಿಗೆ ಇದ್ದಿದ್ದರಿಂದ ಅವುಗಳನ್ನು ನಿರಾಕರಿಸಿದೆ.

ಎರಡು ವರ್ಷ ಶಿವಮೊಗ್ಗದ `ನಾವಿಕ~ ಪತ್ರಿಕೆಗೆ ವರದಿಗಾರ್ತಿಯಾಗಿ ಕೆಲಸ ಮಾಡಿದೆ. ಶಿವಮೊಗ್ಗದ ಸಿಟಿ ಕೇಬಲ್ನ ಮೊದಲ ವಾರ್ತಾವಾಚಕಿ ನಾನು ಎಂಬ ಹೆಮ್ಮೆ ನನ್ನದು.

ಬಳಿಕ ಪಯಣ ಬೆಳೆಸಿದ್ದು ಬೆಂಗಳೂರಿಗೆ. ಹೊಸದಾಗಿ ಪ್ರಾರಂಭವಾಗುತ್ತಿದ್ದ ಶ್ರೀ ಶಂಕರ ವಾಹಿನಿಯಲ್ಲಿ ಕಾರ್ಯಕ್ರಮ ನಿರೂಪಕಿಯಾಗಿ ಸೇರಿಕೊಂಡೆ. ಅದು ನನ್ನ ಮತ್ತೊಂದು ಮನೆ.

ಇಲ್ಲಿನ ಮೊದಲ ನೇರಪ್ರಸಾರದ ಕಾರ್ಯಕ್ರಮದ ನಿರೂಪಕಿಯೂ ನಾನೇ ಎಂಬ ಮತ್ತೊಂದು ಹೆಮ್ಮೆಯೂ ನನಗಿದೆ. ಧಾರಾವಾಹಿಯೊಂದರ ಮುಖ್ಯ ಪಾತ್ರಕ್ಕೆ ಕಂಠದಾನ ಮಾಡಿದ್ದೇನೆ. ಕಂಠದಾನ ಮಾಡುವಾಗ ಆ ಪಾತ್ರವೇ ನಾವಾಗಬೇಕು. ಇದು ನನಗೆ ಖುಷಿ ನೀಡಿದ ಅನುಭವ.

ಕನ್ನಡದ ನಿರೂಪಕಿಯಾಗಿ ಕನ್ನಡ ಭಾಷೆಯ ಲಾಲಿತ್ಯ, ಘನತೆಯನ್ನು ಕಾಪಾಡುವುದು ನನ್ನ ಜವಾಬ್ದಾರಿ. ಪದಪುಂಜಗಳ ಜೋಡಣೆ, ಮಹಾಪ್ರಾಣ, ಅಲ್ಪಪ್ರಾಣ, ವ್ಯಾಕರಣಗಳ ಬಳಕೆಯಲ್ಲಿ ನಿರೂಪಕರು ಹೆಚ್ಚು ನಿಗಾ ವಹಿಸಬೇಕು. ಪಟಪಟನೆ ಮಾತುದುರಿಸುವ ಭರದಲ್ಲಿ ಭಾಷೆಯ ಮೇಲಿನ ಪ್ರಹಾರವಾಗದಂತೆ ಎಚ್ಚರಿಕೆ ಇರಬೇಕು. ಒಂದು ವಿಷಯವನ್ನು ಆದಷ್ಟು ಸರಳವಾಗಿ ವಿವರಿಸುವ ಕೌಶಲ್ಯ ಅಗತ್ಯ.

ಮಾತಿನ ಕುಶಲತೆ ಎಲ್ಲರಲ್ಲಿಯೂ ಇರುತ್ತದೆ. ಆದರೆ ಅದಕ್ಕೆ ಸಾಣೆ ಹಿಡಿದು ಸುಂದರ ರೂಪ ನೀಡುವುದು ನಮ್ಮ ಅಧ್ಯಯನಶೀಲತೆ, ಬರವಣಿಗೆ, ಜ್ಞಾನ ದಾಹ. ಮಾತಿನಲ್ಲೇ ಮನೆಕಟ್ಟುವ ನಮಗೆ ಈ ಅಂಶಗಳೇ ಅದನ್ನು ದೃಢವಾಗಿ ನಿಲ್ಲಿಸುವ ಕಂಬಗಳು.

ಕಳೆದ ಮೂರು ವರ್ಷದಿಂದ ಶ್ರೀ ಶಂಕರ ವಾಹಿನಿಯಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಸಂಧ್ಯಾ ಅಜಯ್ಕುಮಾರ್ ಬಹುಮುಖ ಪ್ರತಿಭೆ. ಕವಯತ್ರಿ, ಪತ್ರಕರ್ತೆ ಹೀಗೆ ಹಲವು ಕ್ಷೇತ್ರಗಳಲ್ಲಿ ತೊಡಗಿಕೊಂಡವರು.

ನಿರೂಪಕಿಯಾಗಿ ಸುಮಾರು 10 ವರ್ಷದ ಅನುಭವ ಇವರಿಗಿದೆ. ನಿರೂಪಕರಿಗೆ ಮಾತು ಹಿತಮಿತವಾಗಿರಬೇಕು ಎನ್ನುವ ಇವರು ಮಾತಾಡಿದಾಗ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.