ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಗಾಂಧಿನಗರ ವಲಯ ವ್ಯಾಪ್ತಿಯಲ್ಲಿ ಶೇ 22.75ರ ಅನುದಾನದಡಿ ಕೈಗೆತ್ತಿಕೊಂಡಿರುವ ಪರಿಶಿಷ್ಟರ ಮನೆಗಳ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲು ವಸತಿ ಯೋಜನೆಗೆ ಸಂಬಂಧಿಸಿದ ನಕಲು ಪ್ರತಿಗಳನ್ನು ವಿಚಾರಣೆಗೆ ಇಟ್ಟುಕೊಂಡು ಮೂಲ ಕಡತಗಳನ್ನು ವಾಪಸು ನೀಡುವಂತೆ ಕೋರಿ ಬಿಬಿಎಂಪಿ ಆಯುಕ್ತ ಎಂ.ಕೆ. ಶಂಕರಲಿಂಗೇಗೌಡ ಅವರು ಸಿಐಡಿ ಪೊಲೀಸ್ ಮಹಾ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

ಆದರೆ, ಹಗರಣಕ್ಕೆ ಸಂಬಂಧಿಸಿದ ಯಾವುದೇ ಮೂಲ ಕಡತಗಳನ್ನು ಪಾಲಿಕೆಗೆ ವಾಪಸು ನೀಡಲು ಸಾಧ್ಯವಿಲ್ಲ ಎಂದು ಸಿಐಡಿ ಡಿಜಿಪಿ ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ಮೂಲ ಕಡತ ವಾಪಸು ನೀಡುವ ಮೂಲಕ ಬಡ ವರ್ಗದ ಜನರ ಮನೆ ನಿರ್ಮಾಣಕ್ಕೆ ಸಹಕರಿಸಬೇಕೆಂದು ಗಾಂಧಿನಗರ ಶಾಸಕ ದಿನೇಶ್ ಗುಂಡೂರಾವ್ ಮನವಿಯನ್ನು ಸಿಐಡಿ ಪೊಲೀಸರು ತಿರಸ್ಕರಿಸಿದ್ದಾರೆ.

ಪಾಲಿಕೆ ವ್ಯಾಪ್ತಿಯ ಗಾಂಧಿನಗರ, ಮಲ್ಲೇಶ್ವರ ಹಾಗೂ ರಾಜರಾಜೇಶ್ವರಿನಗರ ವಲಯಗಳ ಕಾಮಗಾರಿಗಳಲ್ಲಿ ನಡೆದಿರುವ 1539 ಕೋಟಿ ರೂಪಾಯಿಗಳ ಅವ್ಯವಹಾರದ ತನಿಖೆಗಾಗಿ ಸಿಐಡಿ ಪೊಲೀಸರು ಸಂಬಂಧಪಟ್ಟ ಕಡತಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಸಿಐಡಿ ಪೊಲೀಸರು ವಶಪಡಿಸಿಕೊಂಡಿರುವ ಕಡತಗಳಲ್ಲಿ ಶೇ 22.75ರ ಅನುದಾನದಡಿ ಕೈಗೆತ್ತಿಕೊಂಡಿರುವ ಮನೆಗಳ ನಿರ್ಮಾಣಕ್ಕೆ ಸಂಬಂಧಿಸಿದ ಕಡತಗಳು ಕೂಡ ಸೇರಿವೆ.

ಅಂದಿನಿಂದ ಗಾಂಧಿನಗರ ವ್ಯಾಪ್ತಿಯ ನಾಲ್ಕು ವಾರ್ಡ್ಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ ಕಾರ್ಯಕ್ರಮಗಳಡಿ ಕೈಗೆತ್ತಿಕೊಂಡಿರುವ ಸುಮಾರು 500 ಮನೆಗಳ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದೆ.

ಸದ್ಯಕ್ಕೆ ಅತಂತ್ರ ಸ್ಥಿತಿಯಲ್ಲಿರುವ ಫಲಾನುಭವಿಗಳಿಗೆ ಶೀಘ್ರ ಮನೆಗಳನ್ನು ನಿರ್ಮಿಸಿಕೊಡಲು ಮಾನವೀಯ ದೃಷ್ಟಿಯಿಂದ ವಸತಿ ನಿರ್ಮಾಣಕ್ಕೆ ಸಂಬಂಧಿಸಿದ ಎಲ್ಲ ಕಡತಗಳ ನಕಲು ಪ್ರತಿಗಳನ್ನು ವಿಚಾರಣೆಗಾಗಿ ಇಟ್ಟುಕೊಂಡು ಮೂಲ ಕಡತಗಳನ್ನು ವಾಪಸು ನೀಡುವಂತೆ ಕೋರಿ ಮಾ. 3ರಂದು ನಡೆದ ಪಾಲಿಕೆ ಸಭೆಯಲ್ಲಿ ಶಾಸಕ ದಿನೇಶ್ ಗುಂಡೂರಾವ್ ಒತ್ತಾಯಿಸಿದ್ದರು.

ಅದಕ್ಕೆ ಪೂರಕವಾಗಿ ಸ್ಪಂದಿಸಿದ ಆಯುಕ್ತ ಎಂ.ಕೆ. ಶಂಕರಲಿಂಗೇಗೌಡ ಮಾರ್ಚ್ 5ರಂದು ಸಿಐಡಿ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದು ಗಾಂಧಿನಗರ ವಲಯಕ್ಕೆ ಸೀಮಿತವಾದ ಅಂದರೆ, ಶೇ 22.75ರ ಅನುದಾನದಡಿ ಕೈಗೆತ್ತಿಕೊಂಡ ಮನೆಗಳ ನಿರ್ಮಾಣಕ್ಕೆ ಸಂಬಂಧಿಸಿದ ಎಲ್ಲ ಕಡತಗಳ ಮೂಲ ಕಡತಗಳನ್ನು ಕಚೇರಿಗೆ ಹಿಂತಿರುಗಿಸುವಂತೆ ಕೋರಿದ್ದರು.

ಮೂಲ ಕಡತ ನೀಡಲು ಸಾಧ್ಯವಿಲ್ಲ: `ಗಾಂಧಿನಗರ ವಲಯಕ್ಕೆ ಸಂಬಂಧಿಸಿದ ಮನೆಗಳ ನಿರ್ಮಾಣಕ್ಕೆ ಸಂಬಂಧಿಸಿದ ಮೂಲ ಕಡತಗಳನ್ನು ಪಾಲಿಕೆಗೆ ವಾಪಸು ನೀಡಲು ಸಾಧ್ಯವಿಲ್ಲ~ ಎಂದು ಸಿಐಡಿ ಡಿಐಜಿ ರೂಪಕ್ಕುಮಾರ್ ದತ್ತ `ಪ್ರಜಾವಾಣಿ~ಗೆ ತಿಳಿಸಿದರು.

ಈ ಸಂಬಂಧ ಪಾಲಿಕೆ ಆಯುಕ್ತರು ಬರೆದಿರುವ ಪತ್ರದ ಬಗ್ಗೆ ಪ್ರತಿಕ್ರಿಯೆ ಬಯಸಿದಾಗ, `ಆಯುಕ್ತರು ಬರೆದಿರುವ ಪತ್ರ ನನಗೆ ಇನ್ನೂ ತಲುಪಿಲ್ಲ. ಪತ್ರ ತಲುಪಿದ ನಂತರ ಪರಿಶೀಲಿಸಿ ಬೇಕಾದರೆ ನಕಲು ಪ್ರತಿಗಳನ್ನು ಪಾಲಿಕೆಗೆ ನೀಡಲಾಗುವುದು.

ಆದರೆ, ಮೂಲ ಕಡತಗಳನ್ನು ವಾಪಸು ನೀಡಲು ಸಾಧ್ಯವಿಲ್ಲ~ ಎಂದು ಸ್ಪಷ್ಟಪಡಿಸಿದರು.

`ಮೂಲ ಕಡತಗಳನ್ನು ನಾವು ನ್ಯಾಯಾಲಯಕ್ಕೆ ನೀಡಬೇಕಾಗುತ್ತದೆ. ಹೀಗಾಗಿ, ಯಾವುದೇ ಮೂಲ ಕಡತಗಳನ್ನು ವಾಪಸು ನೀಡಲು ಸಾಧ್ಯವಿಲ್ಲ. ಮೂಲ ಕಡತಗಳನ್ನು ಏಕೆ ಕೇಳುತ್ತಿದ್ದಾರೋ ನನಗೆ ಅರ್ಥವಾಗುತ್ತಿಲ್ಲ~ ಎಂದು ಪ್ರಶ್ನಿಸಿದರು.

`ಕಾಮಗಾರಿ ನಡೆಯದೇ ಗುತ್ತಿಗೆದಾರರಿಗೆ ಹಣ ಪಾವತಿಸಿರುವುದು ಹಾಗೂ ಕಳಪೆ ಕಾಮಗಾರಿಗಳಿಗೂ ಬಿಲ್ ಪಾವತಿಸಿರುವುದಕ್ಕೆ ಸಂಬಂಧಿಸಿದ ಕಡತಗಳು ನಮ್ಮ ಬಳಿ ಇವೆ. ಹೀಗಾಗಿ, ಮೂಲ ಕಡತಗಳನ್ನು ಪಾಲಿಕೆಗೆ ಹಸ್ತಾಂತರಿಸುವ ಅವಶ್ಯಕತೆ ಉದ್ಭವಿಸುವುದಿಲ್ಲ. ಬೇಕಾದರೆ, ನಕಲು ಪ್ರತಿಗಳನ್ನು ನೀಡುವ ಕುರಿತು ಪರಿಶೀಲಿಸಲಾಗುವುದು~ ಎಂದು ದತ್ತ ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.