ಶುಕ್ರವಾರ, ಮೇ 14, 2021
29 °C

ಕಡಿಮೆ ಖರ್ಚಿನಲ್ಲಿ ಆರೋಗ್ಯ ಸೇವೆಯ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲಹಂಕ: ಉಪನಗರದಲ್ಲಿ ಡಾ. ಅಗರವಾಲ್ ಕಣ್ಣಿನ ಆಸ್ಪತ್ರೆಯ ನೂತನ ಶಾಖೆಯನ್ನು ಶಾಸಕ ಎಸ್.ಆರ್.ವಿಶ್ವನಾಥ್  ಉದ್ಘಾಟಿಸಿದರು.ಬಡವರಿಗೆ ಉಚಿತವಾಗಿ ಕಣ್ಣಿನ ತಪಾಸಣೆ ಮತ್ತು ಕಡಿಮೆ ಖರ್ಚಿನಲ್ಲಿ ಶಸ್ತ್ರಚಿಕಿತ್ಸೆ ನೀಡಬೇಕೆಂದು ಆಸ್ಪತ್ರೆಯ ಮುಖ್ಯಸ್ಥರಿಗೆ ಮನವಿ ಮಾಡಿದರು.ಆಸ್ಪತ್ರೆಯ ಅಧ್ಯಕ್ಷ ಪ್ರೊ. ಅಮರ್ ಅಗರವಾಲ್, ಭಾರತದಲ್ಲಿ ಒಟ್ಟು 47 ಅಗರವಾಲ್ ಕಣ್ಣಿನ ಆಸ್ಪತ್ರೆಗಳಿದ್ದು, ಬೆಂಗಳೂರಿನಲ್ಲಿ ಇದು 6ನೇ ಶಾಖೆಯಾಗಿದೆ. ಮುಂದಿನ ಮೂರು ವರ್ಷಗಳೊಳಗೆ ರಾಜ್ಯದ ವಿವಿಧೆಡೆ ಇನ್ನೂ 15 ಶಾಖೆಗಳನ್ನು ತೆರೆಯುವ ಗುರಿ ಇದೆ. ಎಲ್ಲ ವರ್ಗದ ಜನರಿಗೂ ಕಡಿಮೆ ಖರ್ಚಿನಲ್ಲಿ ಆರೋಗ್ಯ ಸೇವೆ ಒದಗಿಸುವುದು ನಮ್ಮ ಧ್ಯೇಯ ಎಂದರು.ಬಿಬಿಎಂಪಿ ಸದಸ್ಯ ಎಂ.ಮುನಿರಾಜು, ಬಿಜೆಪಿ ಮುಖಂಡ ಡಾ. ಶಶಿಕುಮಾರ್, ಆಸ್ಪತ್ರೆಯ ನಿರ್ದೇಶಕರಾದ ಎಸ್.ರಾಜಗೋಪಾಲ್, ಡಾ. ಸುಧಾ, ವೈದ್ಯಕೀಯ ನಿರ್ದೇಶಕಿ ಡಾ. ನೀರಾ ಕಂಜಾನಿ ಮೊದಲಾದವರು ಉಪಸ್ಥಿತರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.