ರಾಯ್ಪುರ, (ಛತೀಸ್ಗಢ) (ಐಎಎನ್ಎಸ್): ಕಣ್ಣು ಪೊರೆ ಶಸ್ತ್ರಚಿಕಿತ್ಸೆಗಾಗಿ ಸೆಪ್ಟೆಂಬರ್ 30 ರಂದು ಛತೀಸ್ಗಢದಲ್ಲಿ ಸರ್ಕಾರ ನಡೆಸಿದ ಆರೋಗ್ಯ ಶಿಬಿರದಲ್ಲಿ 13ಕ್ಕೂ ಅಧಿಕ ಜನರು ದೃಷ್ಟಿ ಕಳೆದುಕೊಳ್ಳುವುದರೊಂದಿಗೆ 24 ಜನರು ತೊಂದರೆಗೆ ಒಳಗಾಗಿದ್ದಾರೆ ಎಂದು ಭಾನುವಾರ ಅಧಿಕೃತ ಮೂಲಗಳಿಂದ ತಡವಾಗಿ ತಿಳಿದುಬಂದಿದೆ.

ಶಿಬಿರದಲ್ಲಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಗಾದ ಬಹುತೇಕರಲ್ಲಿ ಕಣ್ಣಿನಲ್ಲಿ ಊತ ಕಂಡುಬಂದಿದ್ದು, ಕಣ್ಣುಗಳಿಂದ ಕೀವು ಸುರಿಯುತ್ತಿರುವುದು ತಿಳಿದು ಬಂದಿದೆ. ಜಿಲ್ಲೆಯ ವೈದ್ಯಾಧಿಕಾರಿಗಳ ತಂಡ ತೊಂದರೆಗೆ ಒಳಗಾದವರನ್ನು ಸಂಪರ್ಕಿಸಿ ಅವರಿಗೆ ಪ್ರಾಥಮಿಕ ಚಿಕಿತ್ಸೆಯನ್ನು ನೀಡುತ್ತಿದೆ~ ಎಂದು ದುರ್ಗಾ ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿಗಳು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

13ಜನರು ದೃಷ್ಟಿ ಕಳೆದುಕೊಂಡಿದ್ದಾರೆ ಎಂದು ದೂರುಗಳು ಬಂದಿದ್ದು ಅವರೆಲ್ಲರನ್ನು ದುರ್ಗಾ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ದುರ್ಗಾ ಜಿಲ್ಲೆಯ 120 ಕಿ.ಮಿ ದೂರದಲ್ಲಿರುವ ಬಾಲೂದ್ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಿಬಿರದಲ್ಲಿ ಅಸಮರ್ಪಕ ತರಬೇತಿ ಪಡೆದ ವೈದ್ಯರು ನಡೆಸಿದ ಶಸ್ತ್ರಚಿಕಿತ್ಸೆಯ ನಂತರ 11 ವೃದ್ಧರು ದೃಷ್ಟಿ ಕಳೆದುಕೊಂಡಿದ್ದಾರೆ. ಇದನ್ನು ಮನಗೊಂಡ ಸರ್ಕಾರ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

~ಈ ನಡುವೆ ಕಣ್ಣುಗಳನ್ನು ಕಳೆದುಕೊಂಡವರ ದೂರುಗಳು ಹೆಚ್ಚಾಗುತ್ತಿದೆ. ಇದೊಂದು ಗಂಭೀರ ವಿಷಯವಾಗಿದ್ದು ಈ ಬಗ್ಗೆ ತನಿಖೆ ನಡೆಸಿ, ಸಂಬಂಧಪಟ್ಟವರ ವಿರುದ್ಧ ಸೂಕ್ರ ಕ್ರಮ ಕೈಗೊಳ್ಳಲಾಗುವುದು~ ಎಂದು ಆರೋಗ್ಯ ಸೇವಾ ನಿರ್ದೆಶಕರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.