ಕಣ್ಮನ ಸೆಳೆಯುವ ಅಪರೂಪದ ಪತಂಗ

7

ಕಣ್ಮನ ಸೆಳೆಯುವ ಅಪರೂಪದ ಪತಂಗ

Published:
Updated:
ಕಣ್ಮನ ಸೆಳೆಯುವ ಅಪರೂಪದ ಪತಂಗ

ಕಾರ್ಗಲ್: ಶರಾವತಿ ಕಣಿವೆ ಪ್ರದೇಶದಲ್ಲಿ ಮಳೆ ಮತ್ತು ಬಿಸಿಲಿನ ಕಾಲಮಾನಗಳ ಬದಲಾವಣೆಯ ನಡುವೆ ಬಹುಅಪರೂಪದ ಅಸಹಜ ಗಾತ್ರದ ಪತಂಗಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಿದೆ. ಇವುಗಳು ಜತೆಜತೆಗೆ ಜೋಡಿಯಾಗಿ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದೆ. ಸುಂದರ ಹೂವುಗಳ ಮೇಲೆ ಕೂರುತ್ತಾ ಹಾರಿ ಹೋಗುವುದನ್ನು ಪರಿಸರಾಸಕ್ತರು ಕುತೂಹಲದಿಂದ ನೋಡಿ ಮನತಣಿಸಿಕೊಳ್ಳುತ್ತಿದ್ದಾರೆ.ಪ್ರಕೃತಿಯಲ್ಲಿ ನಿರಂತರವಾಗಿ ನಡೆಯುವ ಜೀವ-ಜಗತ್ತಿನ ವಿಸ್ಮಯಗಳಲ್ಲಿ ಚಿಟ್ಟೆಯ ಸಂಕುಲಗಳು ಒಂದು ಭಾಗವಾಗಿದೆ ಎಂದು ಶರಾವತಿ ವನ್ಯಜೀವಿ ಅಭಯಾರಣ್ಯದ ವಲಯಾರಣ್ಯಾಧಿಕಾರಿ ಆರ್.ಡಿ. ಪುಟ್ನಳ್ಳಿ ಹೇಳುತ್ತಾರೆ.ಮಳೆ ಮತ್ತು ಬಿಸಿಲು ಜತೆಜತೆಯಾಗಿ ಬರುವಾಗ ಅರಳಿ ನಿಂತ ಹೂವುಗಳು ಈ ಪತಂಗಗಳನ್ನು ಆಕರ್ಷಿಸುತ್ತವೆ. ಈ ಸಂದರ್ಭದಲ್ಲಿ ಚಿಟ್ಟೆ ಸಂತತಿಗಳು ಪ್ರಕೃತಿಯ ಸಹಜ ಕರೆಗಳಲ್ಲಿ ಭಾಗಿಯಾಗಿ ವಂಶವೃದ್ಧಿಯಲ್ಲಿ ತೊಡಗುವುದು ಅವುಗಳ ಜೀವನ ಕ್ರಮದ ಭಾಗ ಎನ್ನುತ್ತಾರೆ ಅವರು.ಅಪರೂಪದ ಈ ಪತಂಗಗಳು ಕೀಟವರ್ಗಕ್ಕೆ ಸೇರಿದ್ದಾಗಿದ್ದು, ಜಗತ್ತಿನಲ್ಲಿ ಸುಮಾರು 24 ಸಾವಿರ ಜಾತಿ ಚಿಟ್ಟೆ ಪ್ರಬೇಧಗಳು ಇದೆ ಎಂಬುದನ್ನು ಅಮೆರಿಕಾದ ಸಂಶೋಧಕರು ಅಂತರ್ಜಾಲದಲ್ಲಿ ದೃಢಪಡಿಸಿದ್ದಾರೆ ಎಂದು ಪರಿಸರ ಪ್ರೇಮಿ ನರೇಂದ್ರ ರಾಜ್ ಪಟೇಲ್ ತಿಳಿಸುತ್ತಾರೆ.ಶರಾವತಿ ಕಣಿವೆಯಲ್ಲಿ ಕಂಡುಬರುವ ಅಪರೂಪದ ಬೃಹತ್ ಪತಂಗಗಳಿಗೆ `ಸಿಲ್ವರ್‌ಸ್ಪಾಟೆಡ್ ಇನ್‌ಸೆಕ್ಟ~ ಎಂಬುದು ವೈಜ್ಞಾನಿಕ ಹೆಸರಾಗಿದೆ. ಇವುಗಳು ಹೆಚ್ಚಾಗಿ ಕೊಡಚಾದ್ರಿ ಬೆಟ್ಟಗಳ ತಪ್ಪಲಿನಲ್ಲಿ ಇರುವ ಕೊಲ್ಲೂರು ಚಿಟ್ಟೆವನದಲ್ಲಿ ಕಂಡು ಬರುತ್ತದೆ ಎಂದು ಅವರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry