ಮುಂಡರಗಿ: ದೇಶದಾದ್ಯಂತ ಹೋಳಿ ಹುಣ್ಣಿಮೆ ಅಥವಾ ಕೆಲವು ಭಾಗಗಳಲ್ಲಿ ರಂಗ ಪಂಚಮಿಗಳಂದು -ಎಲ್ಲರೂ ಸಡಗರ ಸಂಭ್ರಮದಿಂದ ಬಣ್ಣದ ಓಕು ಳಿಯಾಡುವುದು ಸಾಮಾನ್ಯ. ಆದರೆ ಮುಂಡರಗಿ ಪಟ್ಟಣದಲ್ಲಿ ಮಾತ್ರ ಓಕುಳಿಯಾಟವನ್ನು ನಿಷೇಧಿಸಲಾಗಿದ್ದು, ಬಣ್ಣದಾಟವಾಡಬೇಕು ಎಂದು ಹಾತೊರೆಯುವ ಈಗಿನ ತಲೆಮಾರಿನ ಯುವಕ ಯುವತಿಯರಿಗೆ ತೀರ್ವ ನಿರಾಸೆ ಉಂಟು ಮಾಡುತ್ತಲಿದೆ.
ಪಟ್ಟಣದ ಹಿಂದುಗಳ ಮನೆಗಳಲ್ಲಿ ಸಾಮಾನ್ಯವಾಗಿ ಹೋಳಿ ಹುಣ್ಣಿಮೆ ಯಂದು ಪೂಜೆ ಹಾಗೂ ಮತ್ತಿತರ ಧಾರ್ಮಿಕ ವಿಧಿ ವಿಧಾನಗಳನ್ನು ಆಚ ರಿಸಲಾಗುತ್ತದೆ.

ಹೋಳಿಹುಣ್ಣಿಮೆಯ ನಿಮಿತ್ತ ಮನೆಯಲ್ಲಿ ವಿವಿಧ ಬಗೆಯ ಸಿಹಿಯೂಟವನ್ನೂ ತಯಾರಿಸಲಾಗು ತ್ತದೆ. ಆದರೆ ಓಕುಳಿಯಾಟ, ಬಣ್ಣ ಎರೆಚಾಟ, ಕಾಮ ದಹನಗಳು ಮಾತ್ರ ನಿಷಿದ್ಧ. ಇದೆಕ್ಕೆಲ್ಲ ಕಾರಣ ಪಟ್ಟಣದ ಕನಕರಾಯನ ಗುಡ್ಡದಲ್ಲಿ ನೆಲೆಸಿರುವ ಲಕ್ಷ್ಮೀಕನಕನರಸಿಂಹ ದೇವರು!.

ಲಕ್ಷ್ಮೀಕನಕ ನರಸಿಂಹ ದೇವರು ನೆಲೆಸಿರುವ ಭಾಗಗಳಲ್ಲಿ ಓಕುಳಿಯಾಟ ವನ್ನು ಸಾಮಾನ್ಯವಾಗಿ ನಿಷೇಧಿಸಲಾಗಿ ರುತ್ತದೆ ಎಂದು ಹೇಳಲಾಗುತ್ತಿದ್ದು, ಅದಕ್ಕೆ ನಿಖರವಾದ ಕಾರಣಗಳು ಮಾತ್ರ ತಿಳಿದುಬಂದಿಲ್ಲ.

ತುಂಬಾ ಪ್ರಾಚೀನ ಕಾಲದಿಂದಲೂ ಮುಂಡರಗಿ ಕನಕರಾಯನ ಗುಡ್ಡದ ಮೇಲೆ ಲಕ್ಷ್ಮೀ ಕನಕ ನರಂಸಿಂಹನ ದೇವಾಲಯವಿದ್ದು, ನಾಡಿನ ನಾನಾ ಭಾಗಗಳ ಭಕ್ತರು ದೇವರಿಗೆ ಭಯ ಭಕ್ತಿಯಿಂದ ನಡೆದು ಕೊಳ್ಳುತ್ತಾರೆ.

ಈ ಕಾರಣದಿಂದ ಮುಂಡರಗಿ ಹಾಗೂ ಮುಂಡರಗಿ ಪುರಸಭೆ ವ್ಯಾಪ್ತಿಗೆ ಒಳಪಡುವ ಶಿರೋಳ, ಬ್ಯಾಲ ವಾಡಿಗೆ, ರಾಮೇನಹಳ್ಳಿ ಗ್ರಾಮಗಳಲ್ಲಿ ಇಂದಿಗೂ ಓಕುಳಿಯಾಡುವುದನ್ನು ನಿಷೇಧಿಸಲಾಗಿದೆ.

ಅದರ ಜೊತೆಗೆ ತಾಲ್ಲೂಕಿನ ರಾಮೇ ನಹಳ್ಳಿ, ಬಸಾಪುರ, ಬೆಣ್ಣಿಹಳ್ಳಿ, ಶಿರೋಳ, ಹಾರೋಗೇರಿ, ಬ್ಯಾಲ ವಾಡಗಿ ಸೇರಿದಂತೆ ಕೆಲವು ಗ್ರಾಮ ಗಳಲ್ಲಿಯೂ ಹಲವಾರು ವರ್ಷಗಳಿಂದ ಬಣ್ಣದಾಟವಾಡುವುದಿಲ್ಲ. ತಮ್ಮ ಊರುಗಳಲ್ಲಿ ಓಕುಳಿಯಾಡಿ ಬಣ್ಣ ಹಾಕಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳಲು ವಿವಿಧ ಗ್ರಾಮಗಳ ಜನರು ಹೋಳಿ ಹುಣ್ಣಿಮೆ ಹಾಗೂ ರಂಗಪಂಚಮಿ ಗಳಂದು ಮುಂಡರಗಿಗೆ ಬಂದು ಸಂಜೆ ಯವರೆಗೂ ಮೊಕ್ಕಾಂ ಹೂಡುತ್ತಾರೆ.

ಈ ಕುರಿತು ಮುಂಡರಗಿ ಭೀಮ ರಾವ್ ವಂಶಜರಾದ ವಿ.ಎಲ್.ನಾಡ ಗೌಡ್ರ ಮಾತನಾಡಿ, ’ಲಕ್ಷ್ಮೀ ಕನಕನರ ಸಿಂಹ ದೇವರ ಜಾತ್ರೆಯು ಹೋಳಿ ಹುಣ್ಣಿಮೆ ಮರುದಿನದಿಂದ 9ದಿನಗಳ ಕಾಲ ನಿರಂತರವಾಗಿ ನಡೆಯುತ್ತದೆ. ಸರ್ವಧರ್ಮಿಯರು ಸೇರಿ ವಿಜೃಂಭಣೆಯಿಂದ ಜಾತ್ರೆಯನ್ನು ಆಚರಿಸುತ್ತಿರು ವುದರಿಂದ ಕಳೆದ ಹಲವಾರು ದಶಕ ಗಳಿಂದ ಈ ಭಾಗದಲ್ಲಿ ಓಕುಳಿಯಾಡು ವುದನ್ನು ನಿಲ್ಲಿಸಲಾಗಿದೆ. ಹಲವು ದಶಕಗಳಿಂದ ಈ ಸಂಪ್ರದಾಯ ನಡೆದು ಕೊಂಡು ಬರುತ್ತಿದ್ದು ಈಗಲೂ ಅದು ಮುಂದುವರಿದಿದೆ. ಇದರಿಂದ ಯಾರಿಗೂ ತೊಂದರೆಯಾಗಿಲ್ಲ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.