ಶನಿವಾರ, ಜೂನ್ 19, 2021
21 °C

ಕನಸುಗಳಿಗೆ ಬಣ್ಣ ತುಂಬುತ್ತಾ...

–ಪೃಥ್ವಿರಾಜ್ ಎಂ.ಎಚ್. Updated:

ಅಕ್ಷರ ಗಾತ್ರ : | |

ನನ್ನ ನೋಡು...

ಅವರು ಮೂವರು ಗೆಳತಿಯರು. ಮನೆಯಲ್ಲಿ ಬಿಸಿ ಬಿಸಿ ಕಾಫಿ ಹೀರುತ್ತ ತಾವು ಕಟ್ಟುತ್ತಿರುವ ನೂತನ ಸಂಸ್ಥೆಗೆ ಹೆಸರು ಹುಡುಕುತ್ತಿದ್ದರು. ಇವರಲ್ಲಿ ಒಬ್ಬರಿಗೆ ಎರಡು ವರ್ಷದ ಮಗು ಇತ್ತು. ಅದು ರಂಪಾಟ ಮಾಡುತ್ತಿತ್ತು. ಆಗ, ಹೇ ಪುಟ್ಟ ಇಲ್ಲಿ ನೋಡು, ನನ್ನ ನೋಡು ಎಂದು ಯುವತಿಯೊಬ್ಬರು ಮಗುವಿನ ರಂಪಾಟ ನಿಲ್ಲಿಸಲು ಪ್ರಯತ್ನಿಸುತ್ತಿದ್ದರು. ಕೂಡಲೇ ನನ್ನ ನೋಡು ಎಂಬ ಶಬ್ದವನ್ನು ಗ್ರಹಿಸಿದ ಶೀತಲ್‌ ಪ್ರಕಾಶ್‌ ತಮ್ಮ ಪ್ರಕಾಶನ ಸಂಸ್ಥೆಗೆ ‘ನನ್ನ ನೋಡು’ (Look It’s Me) ಎಂದು ಹೆಸರಿಟ್ಟರು.ಇದು ಚೆನ್ನೈ ಮೂಲದ ಮೂವರು  ಗೆಳತಿಯರು ಕಟ್ಟಿದ ಮಕ್ಕಳ ಪುಸ್ತಕ ಪ್ರಕಾಶನ ಸಂಸ್ಥೆ. ಶಿವಾನಿ ನಾರಾಯಣ್‌, ಶಿರಿನ್‌ ವಾಟ್ವಾನಿ ಮತ್ತು ಶೀತಲ್‌ ಪ್ರಕಾಶ್‌ ಇದರ  ಪಾಲುದಾರರು.  ಮೂರರಿಂದ ಆರು ವರ್ಷದೊಳಗಿನ ಮಕ್ಕಳ ಪುಸ್ತಕಗಳನ್ನು ಮಾತ್ರ ಇಲ್ಲಿ ಪ್ರಕಟಿಸಲಾಗುತ್ತಿದೆ. ಚಿತ್ರ ಸಹಿತ ಚಿಕ್ಕ ಚಿಕ್ಕ ಕಥೆಗಳು, ಎರಡು ಅಥವಾ ನಾಲ್ಕು ಸಾಲಿನ ಪದ್ಯಗಳಿರುವ ಪುಸ್ತಕಗಳು ಲಭ್ಯ.ಶೀತಲ್‌ ಪ್ರಕಾಶ್‌ಗೆ ಕಥೆ ಹೇಳುವುದೆಂದರೆ ತುಂಬಾ ಪ್ರೀತಿ. ತನ್ನ  ಮಗುವಿಗೆ ಕಥೆ ಅಥವಾ ಜೋಗುಳ ಹಾಡಿ ಮಲಗಿಸುವುದು ನಿತ್ಯದ ಕೆಲಸ.

ದೇಶದ ಎಲ್ಲಾ ಮಕ್ಕಳು ಕಥೆ ಅಥವಾ ಜೋಗುಳ ಕೇಳಿ ಮಲಗಬೇಕು ಎಂಬುದು ಶೀತಲ್‌ ಬಯಕೆ. ಆದರೆ ಎಲ್ಲರಿಗೂ ಕಥೆ ಅಥವಾ ಹಾಡಲು ಬರಬೇಕಲ್ಲ? ಅಂತಹವರ ಅನುಕೂಲಕ್ಕಾಗಿಯೇ ಮಕ್ಕಳ ಪುಸ್ತಕ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿದ್ದು ಎನ್ನುತ್ತಾರೆ ಶೀತಲ್‌. ಶೀತಲ್‌ ಗೆಳತಿಯರೊಂದಿಗೆ ಸೇರಿ ಕಥೆ, ಪದ್ಯ ರಚಿಸುವುದು ಮಾತ್ರವಲ್ಲದೇ ಪುಸ್ತಕ ವಿನ್ಯಾಸವನ್ನೂ ಮಾಡುತ್ತಾರೆ. ಮಕ್ಕಳ ಮನೋಸ್ಥಿತಿಯ ಅನುಸಾರ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ. 

www.lookitsme.orgಲೀನಾ ಮಲ್ಲಿಕ್‌

ದೆಹಲಿಯ ನಿರ್ಭಯ ಅತ್ಯಾಚಾರ ಪ್ರಕರಣದ ಬಳಿಕ ಗುರ್‌ಗಾಂವ್‌ನಲ್ಲಿ ಹುಟ್ಟಿಕೊಂಡಿದ್ದೇ ರಾತ್ರಿ ಸಮಯದಲ್ಲಿ ಊಟ ಸರಬರಾಜು ಮಾಡುವ ‘ಬ್ಯಾಟ್‌ಮನ್‌ಡೆಲಿರಿ’ ಕಂಪೆನಿ.

ಮಹಿಳೆಯರಿಗೆ ರಾತ್ರಿ ಸಮಯದಲ್ಲಿ ತುರ್ತಾಗಿ ಬೇಕಾಗಿರುವ ಔಷಧಿ, ನ್ಯಾಪ್‌ಕಿನ್‌, ಹಾಲು ಮತ್ತು ಬೇಕರಿ ತಿನಿಸುಗಳನ್ನು ಸರಬರಾಜು ಮಾಡಲಾಗುತ್ತಿತ್ತು. ರಾತ್ರಿ ಇಡೀ ಒಂದೋ ಎರಡೋ ಆರ್ಡರ್‌ಗಳು ಮಾತ್ರ ಸಿಗುತ್ತಿದ್ದವು. ಇದರಿಂದ ಕಂಪೆನಿ ಆರಂಭವಾಗಿ ಮೂರೇ ತಿಂಗಳಿಗೆ ಮುಚ್ಚುವ ಪರಿಸ್ಥಿತಿ ಎದುರಾಯಿತು.ಈ ಹಂತದಲ್ಲಿ ನಾವು ಬ್ಯಾಟ್‌ಮನ್ ಡೆಲಿವರಿಗೆ ಪರಿಚಯಿಸಿದ್ದು ಊಟವನ್ನು. ರಾತ್ರಿ 9 ರಿಂದ ಬೆಳಿಗ್ಗೆ 5 ಗಂಟೆಯವರೆಗೆ ಗ್ರಾಹಕರ ಮನೆ ಬಾಗಿಲಿಗೆ ಊಟ ಸರಬರಾಜು ಮಾಡುವ ವ್ಯವಸ್ಥೆಯನ್ನು ಆರಂಭಿಸಿದೆವು. ನಿತ್ಯ 600 ರಿಂದ 700 ಆರ್ಡರ್‌ಗಳು ಬರಲಾರಂಭಿಸಿದವು. ವಾರಾಂತ್ಯದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಆರ್ಡರ್‌ಗಳು ಬರುತ್ತಿವೆ. ನಷ್ಟದ ಹಾದಿಯಲ್ಲಿದ್ದ ಕಂಪೆನಿ ಕೆಲವೇ ದಿನಗಳಲ್ಲಿ ಉತ್ತಮ ಲಯ ಕಂಡುಕೊಂಡಿತು. ಇದೀಗ ದೆಹಲಿ ಮತ್ತು ಗುರ್‌ಗಾಂವ್‌ನಲ್ಲಿ ಹತ್ತು ಕೌಂಟರ್‌ಗಳಿಂದ ಊಟ ಸರಬರಾಜು ಮಾಡಲಾಗುತ್ತಿದೆ ಎನ್ನುತ್ತಾರೆ ಸಂಸ್ಥಾಪಕಿ ಲೀನಾ.ಇಲ್ಲಿ ಸಾಮಾನ್ಯವಾಗಿ 11 ಗಂಟೆಗೆ ಹೊಟೇಲ್‌ಗಳು ಬಂದ್‌ ಆಗುತ್ತವೆ. ಈ ಸಮಯದಲ್ಲಿ ಊಟ ಸಿಗದೆ ಉಪವಾಸ ಮಲಗಬೇಕಾಗುತ್ತಿತ್ತು. ಬ್ಯಾಟ್‌ಮನ್‌ ಆಗಮನದಿಂದ ಉಪವಾಸ ಮಾಡುವುದು ತಪ್ಪಿದಂತಾಯಿತು ಎನ್ನುತ್ತಾರೆ ಗ್ರಾಹಕ ಸ್ವರೂಪ್‌. ಊಟ, ಔಷಧಿ ಮಾತ್ರವಲ್ಲದೇ ನಿರೋಧ್‌ಗಳಿಗೂ ಆರ್ಡರ್‌ಗಳು ಬರುತ್ತಿವೆ. ಅವುಗಳನ್ನು ಕೂಡ ಸರಬರಾಜು ಮಾಡುತ್ತೇವೆ ಎಂದು ಲೀನಾ ನಗುತ್ತಾರೆ. ಕಾನೂನು ಚೌಕಟ್ಟಿನ ಅಡಿಯಲ್ಲೇ ನಮ್ಮ ಕಂಪೆನಿ ಕೆಲಸ ಮಾಡುತ್ತಿದೆ. ರಾತ್ರಿ ಸರಬರಾಜಿಗಾಗಿ ವಿಶೇಷ ಪರವಾನಿಗೆ ಪಡೆಯಲಾಗಿದೆ. ಬ್ಯಾಟ್‌ಮನ್‌ ಕೃಪೆಯಿಂದ  ಗುರ್‌ಗಾಂವ್‌ ಮತ್ತು ದೆಹಲಿ ಜನರು ಉಪವಾಸ ಮಾಡುತ್ತಿಲ್ಲ ಹಾಗೂ ಮಹಿಳೆಯರಿಗೂ ಧೈರ್ಯ ಬಂದಿದೆ ಎನ್ನುತ್ತಾರೆ ಲೀನಾ. www.batmandelivers.comಅಮೀನ್ ರಶೀದ್

ಭಾರತದ ಹಳ್ಳಿಯ ಯಾವುದೇ ಮೂಲೆಯಲ್ಲಿ ಕುಳಿತು ಅಮೆರಿಕದ ನ್ಯೂಯಾರ್ಕ್‌ ಸಿಟಿಯ ಶಾಪಿಂಗ್‌ ಕಾಂಪ್ಲೆಕ್ಸ್‌ವೊಂದರಿಂದ ಒಂದು ಸೂಜಿಯನ್ನು ತರಿಸಿಕೊಳ್ಳಬಹುದು! ಇದಕ್ಕೆ ನಿಮ್ಮ ಬಳಿ ಮೊಬೈಲ್‌ ಫೋನ್‌ ಮತ್ತು ಆನ್‌ಲೈನ್‌ ಬ್ಯಾಂಕಿಂಗ್‌ ನೆಟ್‌ವರ್ಕ್‌ ಇದ್ದರೆ ಸಾಕು.ಹೌದು, ಇದನ್ನು ಸಾಧ್ಯವಾಗಿಸಿದವರು  ಕೊಚ್ಚಿ ಮೂಲದ ಯುವಕ ಅಮೀನ್ ರಶೀದ್‌ ಮತ್ತು ಗೆಳೆಯರು. ಕ್ಲೌಡ್‌ ತಂತ್ರಜ್ಞಾನ ಬಳಸಿಕೊಂಡು ಮೊಬೈಲ್‌ನಲ್ಲಿ ಶಾಪಿಂಗ್‌ ಅಪ್ಲಿಕೇಶನ್‌ಗಳನ್ನು ತಯಾರಿಸಿದ ಹೆಗ್ಗಳಿಕೆ ಇವರದ್ದು.ರಶೀದ್‌, ಸಲ್ಮಾನ್‌ ಮತ್ತು ಮ್ಯಾಥ್ಯೂ ಎಂಜಿನಿಯರಿಂಗ್‌ ಪದವೀಧರರು. ಮೂವರು ಟಾಟಾ ಸಂಸ್ಥೆಯ ಸಂಶೋಧನಾ ಕೇಂದ್ರದಲ್ಲಿ ತರಬೇತಿ ಪಡೆದವರು. ಇವರಿಗೆ ಖಾಸಗಿ ಕಂಪೆನಿಗಳ ಕೈಕೆಳಗೆ ಕೆಲಸ ಮಾಡುವುದು ಇಷ್ಟವಾಗಲಿಲ್ಲ. ಹಾಗಾಗಿ ಮೊಬೈಲ್‌ ಅಪ್ಲಿಕೇಶನ್‌ಗಳನ್ನು ತಯಾರಿಸುವ ಕಂಪೆನಿಯನ್ನು ಆರಂಭಿಸಿದರು. ಅದೇ ಮೊಸಿಯಾನ್‌ ಟೆಕ್‌ಲ್ಯಾಬ್‌ ಪ್ರೈ. ಲಿಮಿಟೆಡ್‌. ‘ಇ–ಕಾಮರ್ಸ್ ಶಾಪಿಂಗ್‌ ಭಾರತದ ಮಹಾನಗರಗಳಲ್ಲಿ ಚಾಲ್ತಿಯಲ್ಲಿದ್ದರೂ ಅದು ಮೊಬೈಲ್‌ ಅಪ್ಲಿಕೇಶನ್‌ನಲ್ಲಿ ಲಭ್ಯವಿಲ್ಲ.ಕೇವಲ ಒಂದೆರಡು ಕಂಪೆನಿಗಳು ಈ ಸೇವೆಯನ್ನು ನೀಡುತ್ತಿವೆ. ಹಾಗಾಗಿ ಒಬ್ಬ ಸಾಮಾನ್ಯ ವ್ಯಕ್ತಿ ಮೊಬೈಲ್‌ ಮೂಲಕವೇ ತಾನು ಕುಳಿತಲ್ಲಿಗೆ ಬೇಕಾದುದನ್ನು ತರಿಸಿಕೊಳ್ಳುವ ತಂತ್ರಜ್ಞಾನವನ್ನು ವಿಂಡೋಸ್‌ ಮತ್ತು ಆಂಡ್ರಾಯಿಡ್‌ನಲ್ಲಿ ರೂಪಿಸಿದ್ದೇವೆ’ ಎನ್ನುತ್ತಾರೆ ರಶೀದ್‌. ಮೆಟ್ರೋಸ್ಟ್ರೀಟ್‌ ಎಂಬ ಮಾರುಕಟ್ಟೆ ಜಾಲತಾಣ ರೂಪಿಸಿ ಅದರಲ್ಲಿ ಎಲ್ಲಾ ಬಗೆಯ ಶಾಪಿಂಗ್‌ ತಾಣಗಳ ಮಾಹಿತಿ ನೀಡಲಾಗಿದೆ. ಗ್ರಾಹಕರು ತಮಗೆ ಬೇಕಾದ ವಸ್ತುಗಳನ್ನು  ಮೆಟ್ರೋಸ್ಟ್ರೀಟ್‌ಗೆ ಲಾಗಿನ್‌ ಆಗಿ ತರಿಸಿಕೊಳ್ಳಬಹುದು.  www.mocioun.org

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.