ಲಖನೌ: ವಿಕೆಟ್ ಕೀಪರ್ ಧ್ರುವ್ ಜುರೇಲ್ ಅವರ ಅಜೇಯ ಶತಕ (112*) ಮತ್ತು ದೇವದತ್ತ ಪಡಿಕ್ಕಲ್ ಅವರ ಅಜೇಯ 86 ರನ್ಗಳ ನೆರವಿನಿಂದ ಭಾರತ ‘ಎ’ ತಂಡ, ಆಸ್ಟ್ರೇಲಿಯಾ ಎ ವಿರುದ್ಧದ ನಾಲ್ಕು ದಿನಗಳ ಕ್ರಿಕೆಟ್ ‘ಟೆಸ್ಟ್’ ಪಂದ್ಯದ ಮೂರನೇ ದಿನವಾದ ಗುರುವಾರ 4 ವಿಕೆಟ್ಗೆ 403 ರನ್ ಗಳಿಸಿತು.

ಆಸ್ಟ್ರೇಲಿಯಾ ಎ ತಂಡ ಮೊದಲ ಇನಿಂಗ್ಸ್ನಲ್ಲಿ 6 ವಿಕೆಟ್ಗೆ 532 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ಡ್ ಮಾಡಿಕೊಂಡಿತ್ತು. ಇನ್ನು ಒಂದು ದಿನದ ಆಟ ಉಳಿದಿದ್ದು ಪಂದ್ಯ ಡ್ರಾ ಹಾದಿಯಲ್ಲಿದೆ.

1 ವಿಕೆಟ್ಗೆ 116 ರನ್ಗಳೊಡನೆ ದಿನದಾಟ ಮುಂದುವರಿಸಿದ ಆತಿಥೇಯ ತಂಡ ನಿನ್ನೆಯ ಅಜೆಯ ಆಟಗಾರ ಎನ್.ಜಗದೀಶನ್ (64) ಅವರನ್ನು 137 ರನ್ ಆಗಿದ್ದಾಗ ಕಳೆದುಕೊಂಡಿತು. ರಾತ್ರಿಯ ಮಳೆಯಿಂದಾಗಿ ಪಂದ್ಯ ತಡವಾಗಿ ಆರಂಭವಾಯಿತು. ಲಂಚ್ ಮೊದಲು ಅರ್ಧ ಗಂಟೆಯ ಆಟವಷ್ಟೇ ಸಾಧ್ಯವಾಗಿತ್ತು.

ಲಂಚ್ ನಂತರ ಬಿ.ಸಾಯಿ ಸುದರ್ಶನ್ (73) ಮತ್ತು ನಾಯಕ ಶ್ರೇಯಸ್ ಅಯ್ಯರ್ (8) ಅವರು 9 ರನ್ಗಳ ಅಂತರದಲ್ಲಿ ನಿರ್ಗಮಿಸಿದಾಗ ತಂಡದ ಮೊತ್ತ 4 ವಿಕೆಟ್ಗೆ 222. ಈ ವೇಳೆ ಪಡಿಕ್ಕಲ್ ಅವರ ಜೊತೆಗೂಡಿದ ಜುರೆಲ್ ಬಿರುಸಿನ ಆಟವಾಡಿ ತಂಡಕ್ಕೆ ಆಸರೆಯಾದರು. ಮುರಿಯದ ಐದನೇ ವಿಕೆಟ್ಗೆ ಇವರಿಬ್ಬರು 181 ರನ್ ಸೇರಿಸಿ ಆಸ್ಟ್ರೇಲಿಯಾ ಎ ತಂಡಕ್ಕೆ ಯಶಸ್ಸು ನಿರಾಕರಿಸಿದರು.

ಆಕ್ರಮಣಕಾರಿಯಾಗಿ ಆಡಿದ ಜುರೆಲ್ 132 ಎಸೆತಗಳ ಇನಿಂಗ್ಸ್ನಲ್ಲಿ ಹತ್ತು ಬೌಂಡರಿ, ನಾಲ್ಕು ಸಿಕ್ಸರ್ಗಳನ್ನು ಬಾರಿಸಿದರೆ, ತಾಳ್ಮೆಯಿಂದ ಆಡಿದ ದೇವದತ್ತ 178 ಎಸೆತಗಳನ್ನು ಎದುರಿಸಿ ಎಂಟು ಬೌಂಡರಿಗಳನ್ನು ಹೊಡೆದಿದ್ದಾರೆ.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಆಸ್ಟ್ರೇಲಿಯಾ ಎ: 98 ಓವರುಗಳಲ್ಲಿ 6 ವಿಕೆಟ್ಗೆ 532 ಡಿ; ಭಾರತ: 103 ಓವರುಗಳಲ್ಲಿ 4 ವಿಕೆಟ್ಗೆ 403 (ಎನ್.ಜಗದೀಶನ್ 64, ಸಾಯಿ ಸುದರ್ಶನ್ 73, ದೇವದತ್ತ ಪಡಿಕ್ಕಲ್ ಔಟಾಗದೇ 86, ಧ್ರುವ್ ಜುರೇಲ್ ಔಟಾಗದೇ 113)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.