ಮಂಗಳವಾರ, ಜನವರಿ 28, 2020
25 °C

ಕನ್ನಡವೇ ಆದ್ಯತೆಯಾಗಲಿ: ಚಂಪಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಡವೇ ಆದ್ಯತೆಯಾಗಲಿ: ಚಂಪಾ

ಪೀಣ್ಯದಾಸರಹಳ್ಳಿ: ಮಕ್ಕಳು ಮಾತೃ­ಭಾಷೆ­ಯನ್ನು ಕಲಿತಾಗ ಮಾತ್ರ ಅವರ ಆಲೋಚನೆ, ವಿಚಾರಗಳಿಂದ ಪ್ರತಿಭೆ ಬೆಳಕಿಗೆ ಬರುತ್ತದೆ ಎಂದು ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಅಭಿಪ್ರಾಯಪಟ್ಟರು.ಟಿ.ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ, ಪ್ರತಿಭಾ ಪುರ­ಸ್ಕಾರ, ಸಾಧಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಶಾಸಕ ಎಸ್.ಮುನಿರಾಜು ಮಾತ­ನಾಡಿ ಕನ್ನಡ ನಾಡಿಗೆ ಯಾವ ಭಾಷೆ­ಯವರು ಬಂದರೂ ಮೊದಲು ಅವರಿಗೆ ಕನ್ನಡ ಕಲಿಸಬೇಕು ನಮ್ಮ ಭಾಷೆಯ ವ್ಯಾಮೋಹ ಹೆಚ್ಚಿನ ರೀತಿಯಲ್ಲಿ ಬೆಳೆಯುವಂತೆ ಮಾಡಬೇಕು ಎಂದರು.ಚಲನಚಿತ್ರ ನಟ ರಮೇಶ್‌ ಭಟ್‌, ನಗರ ಜಿಲ್ಲಾ ಕಸಾಪ ಅಧ್ಯಕ್ಷ ಟಿ. ತಿಮ್ಮೇಶ್‌, ಭೈರ­ಮಂಗಲ ರಾಮೇಗೌಡ, ದಾಸರಹಳ್ಳಿ ಕಸಾಪ ಅಧ್ಯಕ್ಷ ವೈ.ಬಿ. ಎಚ್‌. ಜಯದೇವ್‌ ಹಾಜರಿದ್ದರು.

ಪ್ರತಿಕ್ರಿಯಿಸಿ (+)