ಬುಧವಾರ, ಏಪ್ರಿಲ್ 14, 2021
24 °C

ಕನ್ನಡ ಪಠ್ಯಪುಸ್ತಕ ಪೂರೈಕೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ಆಂಧ್ರಪ್ರದೇಶದ ಗಡಿ ಜಿಲ್ಲೆಗಳಲ್ಲಿನ ಕನ್ನಡ ಶಾಲೆಗಳಿಗೆ ಸಕಾಲದಲ್ಲಿ ಕನ್ನಡ ಪಠ್ಯಪುಸ್ತಕಗಳನ್ನು ಪೂರೈಕೆ ಮಾಡುವಂತೆ ಇಲ್ಲಿನ ಕನ್ನಡ ಕ್ರಿಯಾ ಸಮಿತಿ ಸದಸ್ಯರ ನಿಯೋಗ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಲ್ಲಿ ಮನವಿ ಮಾಡಿದೆ.ಈಚೆಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಶೆಟ್ಟರ್ ಅವರನ್ನು ಭೇಟಿ ಮಾಡಿದ ನಿಯೋಗವು `ಪ್ರಜಾವಾಣಿ~ಯಲ್ಲಿ ಅ. 28ರಂದು ಪ್ರಕಟಗೊಂಡಿರುವ `ಕೃಪಣತೆಯಲ್ಲಿ ಕರ್ನಾಟಕ ಸರ್ಕಾರ ಮೀರಿಸುವವರು ಯಾರಿದ್ದಾರೆ?~ ಎಂಬ ಲೇಖನವನ್ನು ಉಲ್ಲೇಖಿಸಿ ಈ ಮನವಿ ಸಲ್ಲಿಸಿದೆ.ಆಂಧ್ರಪ್ರದೇಶದ ಕರ್ನೂಲು, ಮೆಹಬೂಬನಗರ, ಮೆಡಕ್, ಅನಂತಪುರ ಹಾಗೂ ಕರೀಂನಗರ ಜಿಲ್ಲೆಗಳ ಗ್ರಾಮಗಳಲ್ಲಿ ಈಗಲೂ ಕನ್ನಡ ಮಾಧ್ಯಮ ಶಾಲೆಗಳಿವೆ. ಕರ್ನೂಲು ಜಿಲ್ಲೆಯೊಂದರಲ್ಲಿಯೇ 11 ಸಾವಿರ ಮಕ್ಕಳು ಕನ್ನಡ ಶಾಲೆಗಳಲ್ಲಿ ಓದುತ್ತಿದ್ದಾರೆ. ಆದರೆ ಈ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಪಠ್ಯಪುಸ್ತಕಗಳು ಪೂರೈಕೆಯಾಗುತ್ತಿಲ್ಲ.

ಪ್ರತಿ ವರ್ಷ ಶಾಲೆಗಳು ಆರಂಭಗೊಳ್ಳುವ ಪೂರ್ವದಲ್ಲಿಯೇ ಪುಸ್ತಕಗಳನ್ನು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ನಿಯೋಗ ಮನವಿ ಮಾಡಿದೆ. ಪಠ್ಯಪುಸ್ತಕಗಳ ಜೊತೆಗೆ ಕನ್ನಡ ಮಾಧ್ಯಮದಲ್ಲಿ ಓದುವ ವಿದ್ಯಾರ್ಥಿಗಳಿಗೆ ಸೈಕಲ್‌ಗಳನ್ನು ಸಹ ಪೂರೈಸಬೇಕು ಎಂದೂ ನಿಯೋಗ ಒತ್ತಾಯಿಸಿದೆ.ಸಮಿತಿಯ ಕಾರ್ಯದರ್ಶಿ ಅಲ್ಲಮಪ್ರಭು ಬೆಟ್ಟದೂರು, ಮುಖಂಡರಾದ ಎಚ್.ಎಸ್.ಪಾಟೀಲ, ಸೂರ್ಯಕಾಂತ ಗುಣಕಿಮಠ ನಿಯೋಗದಲ್ಲಿದ್ದರು ಎಂದು ಪ್ರಕಟಣೆ ತಿಳಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.