ಪ್ರತಿಭಾ ರಾಘವೇಂದ್ರ, ನಟಿ, ನಿರ್ದೇಶಕಿ ಹಾಗೂ ಸಂಘಟಕಿಯಾಗಿ ಕನ್ನಡ ರಂಗಭೂಮಿಯಲ್ಲಿ ಗಮನಾರ್ಹ ಹೆಸರು. ಅಲ್ಪ ಅವಧಿಯಲ್ಲಿ 30 ನಾಟಕಗಳಲ್ಲಿ ನಟನೆ, 12 ನಾಟಕಗಳ ನಿರ್ದೇಶನ ಮಾಡಿರುವ ಪ್ರತಿಭಾವಂತೆ. `ಸ್ಪಂದನ~ ತಂಡ ಕಟ್ಟಿ, ಹಲವು ಪ್ರಸಿದ್ಧ ರಂಗತಂಡ- ನಿರ್ದೇಶಕರೊಂದಿಗೆ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಕೆಲವು ಪ್ರಸಿದ್ಧ ಕಥೆಗಳನ್ನು ರಂಗರೂಪಕ್ಕೆ ಅಳವಡಿಸಿದ್ದಾರೆ.

ನಾಟಕ, ನಿರ್ಮಾಣ, ಪ್ರದರ್ಶನ, ಅತಿಥಿ ನಾಟಕಗಳ ಪ್ರದರ್ಶನ, ಶಾಲಾ-ಕಾಲೇಜುಗಳಲ್ಲಿ ರಂಗತರಬೇತಿ ಶಿಬಿರ, ರಂಗಭೂಮಿ ಕುರಿತು ಹಲವು ಕಾರ್ಯಕ್ರಮ ಮಾಡುತ್ತಾ ಬಂದಿದ್ದಾರೆ. ಮಕ್ಕಳಿಗೆ ಕಳೆದ ಮೂರು ವರ್ಷಗಳಿಂದ ಸಾಗರದಲ್ಲಿ `ಚೈತ್ರಮೇಳ~ ಎಂಬ ಹೆಸರಿನಲ್ಲಿ ಬೇಸಿಗೆ ರಂಗ ತರಬೇತಿ ಶಿಬಿರ ನಡೆಸುತ್ತಾ ಬಂದಿದ್ದಾರೆ.

ಹಲವು ರಾಜ್ಯಮಟ್ಟದ ಹಾಗೂ ರಾಷ್ಟ್ರಮಟ್ಟದ ನಾಟಕ ಸ್ಪರ್ಧೆಗಳಲ್ಲಿ ಅಭಿನಯಕ್ಕಾಗಿ ಪ್ರತಿಭಾ ಅವರಿಗೆ ಆನೇಕ ಬಹುಮಾನಗಳು ಸಂದಿವೆ. ಕಳೆದ ವರ್ಷ ಉಡುಪಿಯಲ್ಲಿ ನಡೆದ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಪ್ರತಿಭಾ ನಿರ್ದೇಶಿಸಿ, ನಟಿಸಿದ `ಕರಿಭಂಟ~ ನಾಟಕಕ್ಕೆ ಆರು ಪ್ರಶಸ್ತಿಗಳು ಬಂದಿವೆ. ಇದರಲ್ಲಿ ನಿರ್ದೇಶನ ಮತ್ತು ನಟನೆಗಾಗಿ ಪ್ರತಿಭಾ ಪ್ರಥಮ ಸ್ಥಾನ ಪಡೆದಿದ್ದಾರೆ.

* ನಟಿ ಅಥವಾ ನಿರ್ದೇಶಕಿ ಎಂಬ ರಿಯಾಯ್ತಿ ಇಟ್ಟುಕೊಂಡು ನಾಟಕ ನೋಡಬೇಕೆ?
- ಖಂಡಿತ ಈ ಪೂರ್ವಾಗ್ರಹ ಇರಬೇಕಾಗಿಲ್ಲ. ಯಾವುದೇ ನಾಟಕ ಇರಲಿ; ಗುಣಮಟ್ಟ ಬೇಕು. ಇಂತಹ ಮಾನದಂಡಗಳು ಪ್ರೇಕ್ಷಕ ವರ್ಗಕ್ಕೆ ಖಂಡಿತ ಇರಬಾರದು. ಆದರೆ, ರಂಗಭೂಮಿಯಲ್ಲಿ ಒಂದು ತಂಡವಾಗಿ ಕೆಲಸ ಮಾಡಲು ಈ ಮನೋಭಾವ ಬೇಕಾಗುತ್ತದೆ. ಅರ್ಧ ಹಳ್ಳಿ, ಅರ್ಧ ಪೇಟೆ ರೀತಿಯ ಸಾಗರದಂತ ಊರಿನಲ್ಲಿ ಇಂತಹದೊಂದು ರಿಯಾಯ್ತಿಯನ್ನು ಕಲಾವಿದರಿಂದ ನಾನು ನಿರೀಕ್ಷಿಸುತ್ತೇನೆ.

* ನಾಟಕ ಎಂದರೆ ನಟಿ, ನಟ ಪ್ರಧಾನ ಎಂಬ ಮಾತು ಹೋಗಿ ಈಗ ನಿರ್ದೇಶಕ ಪ್ರಧಾನವಾಗಿದೆ. ನಟಿ ಮತ್ತು ನಿರ್ದೇಶಕಿಯೂ ಆಗಿ ನಿಮ್ಮ ಪ್ರತಿಕ್ರಿಯೆ?
ಸಿದ್ಧಮಾದರಿ ನಾಟಕಗಳಲ್ಲಿ ನಟಿ, ನಟ ಇಂದಿಗೂ ಪ್ರಮುಖರೇ; ಇಂತಹ ನಟ, ನಟಿ ಈ ನಾಟಕದಲ್ಲಿ ಅಭಿನಯಿಸುತ್ತಾರೆಂದರೆ ಇಂದಿಗೂ ಸಾವಿರಾರು ಜನ ಸೇರುವ ಸಂದರ್ಭಗಳು, ಸನ್ನಿವೇಶಗಳಿವೆ. ಆದರೆ, ಕಾವ್ಯ, ಕಥೆ ಮತ್ತಿತರ ಸಾಹಿತ್ಯ ಪ್ರಕಾರಗಳನ್ನು ರಂಗರೂಪಕ್ಕೆ ತರುವಾಗ ನಿರ್ದೇಶಕ ಪ್ರಮುಖನಾಗುತ್ತಾನೆ. ಆತ ತನ್ನ ಸೃಜನಶೀಲತೆಯಿಂದ ರಂಗಭಾಷೆಗೆ ಅಭಿನಯದ ರೂಪ ಕೊಡುತ್ತಾನೆ. ಆತನ ರಂಗಕೃತಿ ಅಂತಿಮವಾಗಿ ರಂಗದಲ್ಲಿ ಸಾರ್ಥಕಗೊಳ್ಳುವುದು ನಟ, ನಟಿಯರ ನಟನೆಯಿಂದ ಮಾತ್ರ. ಒಂದು ನಾಟಕದ ಯಶಸ್ಸಿನ ಹಿಂದೆ ಆ ಇಡೀ ತಂಡದ ಶ್ರಮ ಇರುತ್ತದೆ.

* ಇಂದಿನ ರಂಗಭೂಮಿಯಲ್ಲಿ ಸ್ತ್ರೀ ಎದುರಿಸುವ ಸವಾಲುಗಳೇನು?
ಎಲ್ಲ ಕ್ಷೇತ್ರದಲ್ಲಿರುವಂತೆ ರಂಗಭೂಮಿಯಲ್ಲೂ ಸಮಸ್ಯೆ- ಸವಾಲುಗಳಿವೆ. ಹಿಂದೆ ಇರುವಷ್ಟು ಸಮಸ್ಯೆಗಳು ಇಲ್ಲದಿದ್ದರೂ ರಂಗಭೂಮಿಯಲ್ಲಿ ಹೆಣ್ಣುಮಕ್ಕಳನ್ನು ನೋಡುವ ದೃಷ್ಟಿಕೋನ ಬದಲಾಗಿದೆ. ಸಾಕಷ್ಟು ಪ್ರತಿಭಾವಂತರು ಕಲಾವಿದೆಯರು ಇಂದು ರಂಗಭೂಮಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ನಟನೆ, ನಿರ್ದೇಶನ ವಿಭಾಗಗಳಲ್ಲಿ ಅಂತಹ ಗಂಭೀರ ಸಮಸ್ಯೆಗಳಿಲ್ಲದಿದ್ದರೂ ಸಂಘಟನೆ ವಿಚಾರದಲ್ಲಿ ಇಂದು ಮಹಿಳೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾಳೆ.

* ನಾಟಕ ತಂಡದ ವ್ಯವಸ್ಥಾಪಕಿಯಾಗಿ ತಮ್ಮ ಅನುಭವಗಳೇನು?
ಹಣಕಾಸಿನ ನಿರ್ವಹಣೆ ಬಹಳ ಕಷ್ಟದ್ದು. ಅಲ್ಲಿ, ಇಲ್ಲಿ ಓಡಾಡಿ ಹಣ ಸಂಗ್ರಹಿಸುವುದು ಗಂಡಸರಿಗೆ ಸುಲಭ. ಹೆಂಗಸಿಗೆ ಕಷ್ಟ. ತಂಡ ಕಟ್ಟಲು ತಾಯಿತನ ಬೇಕು. ತ್ಯಾಗದಿಂದ ಸುಖ ಕಾಣುವ ಮನಸ್ಥಿತಿ ಬೇಕು. ತಂಡದ ಸದಸ್ಯರೆಲ್ಲರೂ ಸಮಾನ ಮನಸ್ಕರಿರಬೇಕು.

* ಕುಟುಂಬದ ಜತೆ ರಂಗಭೂಮಿ ನಿರ್ವಹಣೆ ಹೇಗೆ?
ನಾಟಕ, ಉಸಿರು ಇದ್ದ ಹಾಗೆ; ಎಷ್ಟೇ ಆರೋಗ್ಯ ಸರಿ ಇಲ್ಲ ಎಂದರೂ ಸಂಜೆ ನಾಟಕದ ರಿಸರ್ಹಲ್ ಇದೆ ಎಂದರೆ ಆರೋಗ್ಯ ಸರಿಯಾಗಿ ಬಿಡುತ್ತದೆ. ಆಸಕ್ತಿ ಇದ್ದರೆ ಎಲ್ಲ ಸಮಸ್ಯೆ-ಸವಾಲುಗಳನ್ನು ಎದುರಿಸಲು ಸಾಧ್ಯ ಎನ್ನುವುದು ಅನುಭವ. ಇದಕ್ಕೆ ಕುಟುಂಬದ ಸಹಕಾರವೂ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.