ಮಂಡ್ಯ: ಕನ್ನಡ ಸಾಹಿತ್ಯ ಪರಿಷತ್ತನ್ನು ಮೂರು ವರ್ಷಗಳ ಅವಧಿಗೆ ಮುನ್ನಡೆಸಲು ಅದರ ಸಾರಥಿಯ ಆಯ್ಕೆಗೆ ಚುನಾವಣೆ ಪ್ರಕ್ರಿಯೆ ಆರಂಭವಾಗಿದೆ. ಜಿಲ್ಲೆಯಲ್ಲಿ ಸಾಂಸ್ಕೃತಿಕ ಮತ್ತು ಸಾಹಿತ್ಯಕ ಚಟುವಟಿಕೆಗಳಿಗೆ ನಿರ್ದಿಷ್ಟ ಸ್ವರೂಪ ನೀಡುತ್ತಲೇ ಆ ಮೂಲಕ ಸಾಂಸ್ಕೃತಿಕ ದೃಷ್ಟಿಕೋನದಿಂದ ಜಿಲ್ಲೆಯನ್ನು ಮುನ್ನಡೆಸುವ ದೃಷ್ಟಿಯಿಂದಲೂ ಇದು ಮಹತ್ವದ ಸ್ಥಾನ.

ಇದೇ 29ರಂದು ಪರಿಷತ್ತಿನ ಜಿಲ್ಲಾ ಘಟಕಕ್ಕೆ ನೂತನ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಲಿದೆ. ಅಂತಿಮವಾಗಿ ಮೂವರು ಅಭ್ಯರ್ಥಿಗಳು ಕಣದಲ್ಲಿದ್ದರೂ, ಪ್ರಮುಖ ಸ್ಪರ್ಧೆಯಲ್ಲಿ ಇಬ್ಬರಿದ್ದಾರೆ. ಈವರೆಗೂ ಅಭ್ಯರ್ಥಿಗಳ ಬಗೆಗೆ ಚರ್ಚೆಯಾಗಿದೆ. ಆದರೆ, ಸಾಹಿತ್ಯ ಪರಿಷತ್ತಿನ ಬಗೆಗೆ, ಅದರ ಕಾರ್ಯ ಚಟುವಟಿಕೆ ಹೇಗಿರಬೇಕು ಎಂಬ ಚರ್ಚೆ ಆಗಿಲ್ಲ.

ಕನ್ನಡ ಸಾಹಿತ್ಯ ಪರಿಷತ್ತು ಸಾಂಸ್ಕೃತಿಕ ವಲಯದ ಪ್ರಾತಿನಿಧಿಕ ಸಂಸ್ಥೆಯಾಗಿ ಜಿಲ್ಲೆಯಲ್ಲಿನ ಈ ಕ್ಷೇತ್ರದ ಎಲ್ಲ ಆಸಕ್ತರನ್ನು ಒಗ್ಗೂಡಿಸುವ, ಒಟ್ಟಿಗೆ ಮುನ್ನಡೆಸುವ ಕೆಲಸ ಮಾಡಬೇಕು ಎಂಬ ನಿರೀಕ್ಷೆಗಳು ಇದ್ದರೂ, ಪರಿಷತ್ತಿನ ಅಧ್ಯಕ್ಷ ಸ್ಥಾನದ ಚುನಾವಣೆ ಮಾತ್ರ ಜಿಲ್ಲೆಯ ಮಟ್ಟಿಗೆ ಅಂಥ ನಿರೀಕ್ಷೆ ಮೂಡಿಸಿಲ್ಲ.

ಇಲ್ಲಿ ಚುನಾವಣೆ ಘೋಷಣೆ ಆಗುತ್ತಿದ್ದಂತೆ ಸಾಹಿತ್ಯ ವಲಯದ ಗುಂಪುಗಾರಿಕೆಯೂ ಆರಂಭವಾಗಿದೆ. ಪ್ರತ್ಯೇಕ ಸಭೆಗಳು ಆಗಿವೆ. ಯಾರು ಆಯ್ಕೆಯಾಗಬೇಕು, ಯಾರಾದರೆ ಸೂಕ್ತ ಎಂಬ ಲೆಕ್ಕಾಚಾರಗಳು ನಡೆದಿವೆ.

ಮತದಾರರಿಗೆ ಹೆಚ್ಚಿನ ಆಯ್ಕೆಗಳಿಲ್ಲ. `ಆರು ಹಿತವರು ನಿಮಗೆ ಈ ಮೂವರೊಳಗೆ~ ಎಂಬುದಷ್ಟೇ ಇರುವ ಆಯ್ಕೆ.
ನಿಕಟಪೂರ್ವ ಅಧ್ಯಕ್ಷ ಡಾ. ಎಚ್.ಎಸ್. ಮುದ್ದೇಗೌಡ, ಎಸ್.ಬಿ. ಶಿಕ್ಷಣ ಸಂಸ್ಥೆಯ ಮೀರಾಶಿವಲಿಂಗಯ್ಯ ಅವರು ಪ್ರಮುಖವಾಗಿ ಕಣದಲ್ಲಿದ್ದರೆ, ಕಣದಲ್ಲಿರುವ ಇನ್ನೊರ್ವ ಅಭ್ಯರ್ಥಿ ಚಿಕ್ಕಸ್ವಾಮಿ ಕೂಡಾ `ನಿವೃತ್ತನಾ ಗುವ ಪ್ರಶ್ನೆಯೇ ಇಲ್ಲ. ನಾನೂ ಕೂಡಾ ಕಣದಲ್ಲಿದ್ದೇನೆ~ ಎಂದು ಸ್ಪಷ್ಟಪಡಿಸಿದ್ದಾರೆ.

`ಪ್ರಚಾರದ ವೇಳೆಯಲ್ಲಿ ಇತರೆ ಅಭ್ಯರ್ಥಿಗಳ ಕಾರ್ಯನೀತಿ, ಕಾರ್ಯಕ್ರಮ, ಸಾರ್ವಜನಿಕ ಚಟುವಟಿಕೆಗಳಿಗೆ ಸಂಬಂಧಪಟ್ಟಿರದ, ಖಾಸಗಿ ಜೀವನದ ಯಾವುದೇ ಅಂಶಗಳನ್ನು ಕುರಿತು ಇತರೆ ಅಭ್ಯರ್ಥಿಗಳು ಟೀಕೆ ಮಾಡತಕ್ಕದ್ದಲ್ಲ~ ಎನ್ನುತ್ತದೆ ಪರಿಷತ್ತು. ಚುನಾವಣೆ ಹಿನ್ನೆಲೆ ಯಲ್ಲಿ ಬಿಡುಗಡೆ ಮಾಡಿರುವ ಸಾಮಾನ್ಯ ನಡತೆಯ ಒಂದು ನಿಯಮ.

ಕಣದಲ್ಲಿರುವ ಅಭ್ಯರ್ಥಿಗಳ ಆದ್ಯತೆಗಳು ಏನು, ಪರಿಷತ್ತನ್ನು ಮುನ್ನಡೆಸಲು ಅವರ ಕಾರ್ಯಸೂಚಿಗಳು ಏನು, ಪರಿಷತ್ತು ಮುಂದಿನ ಮೂರು ವರ್ಷ ನಡೆಯಬೇಕಾದ ಮಾರ್ಗ ಹೇಗಿರಬೇಕು ಎಂಬುದು ಚರ್ಚೆಗೆ ಬಂದಿಲ್ಲ.

ಸಹಜವಾಗಿ, ಪರಿಷತ್ತಿನ ಕಾರ್ಯ ಶೈಲಿ, ಸಾಂಸ್ಕೃತಿಕ ಚಟುವಟಿಕೆಗಳ ಬಗೆಗೆ ಮತದಾರರಲ್ಲಿ ನಿರೀಕ್ಷೆಗಳು ಸಾಕಷ್ಟಿವೆ. ಈ ದೃಷ್ಟಿಯಿಂದ ಕನಿಷ್ಠ ಜಿಲ್ಲೆಯ ಮಟ್ಟಿಗೆ ಪರಿಷತ್ತು ಹೇಗಿರಬೇಕು, ಏನು ಕೆಲಸ ಮಾಡಬೇಕು ಎಂಬ ಪ್ರಶ್ನೆಯನ್ನು ಸಾಂಕೇತಿ ಕವಾಗಿ ಕೆಲವರ ಮುಂದಿಟ್ಟಾಗ ದೊರೆತ ಪ್ರತಿಕ್ರಿಯೆಗಳು ಇಲ್ಲಿವೆ.

ಸಾಂಸ್ಕೃತಿಕ ವಲಯ ಸೃಷ್ಟಿಸಲಿ
ಶ್ರೀರಂಗಪಟ್ಟಣ: ಕನ್ನಡ ಸಾಹಿತ್ಯ ಪರಿಷತ್ಗೆ ಅಧ್ಯಕ್ಷರಾಗಿ ಆಯ್ಕೆ ಆಗುವವರಿಗೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಅಭಿರುಚಿ ಇರಬೇಕು. ಮುಖ್ಯವಾಗಿ ಸ್ಥಳೀಯ ಸಂಸ್ಕೃತಿಯ ಅರಿವು ಇರಬೇಕು. ಸ್ವತಃ ಸಾಹಿತಿ ಆಗದಿದ್ದರೂ ಸಾಹಿತ್ಯಕ ಚಟುವಟಿಕೆಗಳನ್ನು ಪ್ರೋತ್ಸಾಹಿಸಬೇಕು. ಜಿ. ನಾರಾಯಣ ಸಾಹಿತ್ಯ ಕೃಷಿ ಮಾಡಿದ್ದರೂ ಪರಿಷತ್ತಿನ ಕೀರ್ತಿ ತಂದಿರುವ ನಿದರ್ಶನದ ಇತಿಹಾಸವೇ ನಮ್ಮ ಮುಂದೆ ಇದೆ. ಆ ದಾರಿಯಲ್ಲಿ ಕಸಾಪ ಮುನ್ನಡೆಸುವವರು ಬೇಕು. ಸಂಘಟನಾಕಾರಾಗಿ ಸಕಾರಾತ್ಮಕ ಕಾರ್ಯಕ್ರಮ ರೂಪಿಸಬೇಕು. ವಿಶಿಷ್ಟ ಸಾಹಿತ್ಯ ವಲಯ ಸೃಷ್ಟಿಯಾಗುವಂತೆ ಕಾರ್ಯಪ್ರವೃತ್ತರಾಗಬೇಕು. ಕಸಾಪ ಅಧ್ಯಕ್ಷ ಸ್ಥಾನದ ಹಿರಿಮೆ ಎತ್ತಿ ಹಿಡಿಯಬೇಕು.
-ಡಾ.ಬಿ. ಸುಜಯಕುಮಾರ್, ವೈದ್ಯ, ಶ್ರೀರಂಗಪಟ್ಟಣ.

ಸಾಹಿತ್ಯದ ಚಟುವಟಿಕೆ ನಿರಂತರವಾಗಲಿ
ಮಂಡ್ಯ: ಜಿಲ್ಲೆ ಹೇಳಿ ಕೇಳಿ ಕನ್ನಡವನ್ನು ಅತಿ ಹೆಚ್ಚು ಜನ ಮಾತನಾಡುವ ಜಿಲ್ಲೆ ಎಂದು ಹೆಸರು ಮಾಡಿದೆ. ಕನ್ನಡವನ್ನು ಪೋಷಿಸಬೇಕಾದದ್ದು ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮುಖ್ಯ ಕೆಲಸ. ಸಾಹಿತ್ಯಕ್ಕೆ ಸಂಬಂಧಿಸಿದ ಎಲ್ಲ ಕೆಲಸಗಳೂ ಪರಿಷತ್ತಿನ ಜವಾಬ್ದಾರಿಯೇ. ಉದಯೋನ್ಮುಖ ಬರಹಗಾ ರರನ್ನು ಪ್ರೋತ್ಸಾಹಿಸಿ, ಸಾಹಿತ್ಯಕ್ಕಾಗಿ ಕೆಲಸ ಮಾಡುವವರನ್ನು ಹುರಿದುಂ ಬಿಸಬೇಕು. ಶಾಲಾ ದಿನಗಳಿಂದಲೇ ವಿದ್ಯಾರ್ಥಿಗಳು ಕನ್ನಡ ಸಾಹಿತ್ಯದ ಬಗೆಗಿನ ಕುತೂಹಲ ಬೆಳೆಸಿಕೊಳ್ಳುವಂತಹ ಕಾರ್ಯಕ್ರಮ ರೂಪಿಸಬೇಕು. ಅದಕ್ಕಾಗಿ ಪರಿಷತ್ತು ಶ್ರಮಿಸಬೇಕು. ಸಾಹಿತ್ಯದ ಚರ್ಚೆ, ಗೋಷ್ಠಿ, ಕಮ್ಮಟ ಇತ್ಯಾದಿ ಕಾರ್ಯಕ್ರಮಗಳ ಮೂಲಕ ಸಾಹಿತ್ಯದ ಕೃಷಿ ಜೀವಂತವಾಗಿ ರಿಸುವ ನಿರಂತರ ಚಟುವಟಿಕೆ ಇರಬೇಕು. ಕನ್ನಡದ ಕೆಲಸ ಆಗಬೇಕು. ಯಾರೇ ಬರಲಿ, ಕನ್ನಡದ ತೇರು ಮುನ್ನಡೆಸಬೇಕು ಎಂಬುದಷ್ಟೇ ನನ್ನ ನಿರೀಕ್ಷೆ.
-ಭವಾನಿ ಲೋಕೇಶ್, ಕವಯತ್ರಿ, ಮಂಡ್ಯ.

`ಸಾಹಿತಿಗಳ ಗುಂಪೇ ವಿನಾಃ ಸಾಹಿತ್ಯದ ಗುಂಪಲ್ಲ~
ಮಂಡ್ಯ: ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆಗಳ ಸಂವರ್ಧನೆ, ಸಂರಕ್ಷಣೆ ಆಶಯ ದೊಂದಿಗೆ ಅಸ್ತಿತ್ವಕ್ಕೆ ಬಂದಂತಹ ಕನ್ನಡ ಸಾಹಿತ್ಯ ಪರಿಷತ್ತು, ಇತ್ತೀಚಿನ ದಿನಗಳಲ್ಲಿ ತನ್ನ ಮೂಲ ಸ್ವರೂಪ, ಉದ್ದೇಶಗಳನ್ನು ಮರೆತಿದೆ. ಕನ್ನಡಿಗರನ್ನೆಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಸಮಗ್ರ ಕನ್ನಡವನ್ನು ಪ್ರತಿನಿಧಿಸ ಬೇಕಾದ ಸಂಸ್ಥೆ ಪಟ್ಟಭದ್ರರ ತಾಣವಾಗಿದೆ. ಪರಿಷತ್ತು ಇಂದು `ಸಾಹಿತಿಗಳ ಗುಂಪಾಗಿದೆಯೇ ವಿನಾಃ ಸಾಹಿತ್ಯದ ಗುಂಪಾಗಿ ಉಳಿದಿಲ್ಲ~.

ಕಸಾಪಗೆ ಹೆಚ್ಚಿನ ಅನುದಾನ ಬರುತ್ತಿರುವುದು ಕೂಡ ಪೈಪೋಟಿ ಹೆಚ್ಚಲು ಕಾರಣವಾಗಿರಬಹುದು. ಸದಸ್ಯರ ಸಂಖ್ಯೆ ಹೆಚ್ಚುತ್ತಿರುವುದು ಒಳ್ಳೆಯದೇ ಆದರೂ, ಅದರ ಹಿಂದೆ `ಲಾಭದ ಉದ್ದೇಶ~ವೇ ಗರಿಷ್ಠ ಪ್ರಮಾಣದಲ್ಲಿದೆ. ಹೀಗಿದ್ದಾಗ, ಭಾಷೆ, ಸಾಹಿತ್ಯ, ಸಂಸ್ಕೃತಿ ಬೆಳೆಯುವುದಾರೂ ಹೇಗೆ?

ಸಮ್ಮೇಳನಗಳು, ಕಮ್ಮಟಗಳನ್ನು ಸಂಘಟಿಸುವುದಷ್ಟೇ ಮುಖ್ಯವಲ್ಲ. ಕನ್ನಡ ಭಾಷೆ, ನೆಲ, ಜಲ, ಸಾಹಿತ್ಯ, ಜನಪದ, ಸಂಸ್ಕೃತಿ ಉಳಿಸಿ, ಬೆಳೆಸಲು ಎಲ್ಲರನ್ನು ಒಟ್ಟಾಗಿ ಒಯ್ಯುವ ಛಾತಿ ಇರುವವರು ಪರಿಷತ್ತಿಗೆ ಬರಬೇಕಿದೆ. ಪ್ರತಿಭಾನ್ವಿತ ಯುವಜನರ ಬೆಂಬಲಿಸಬೇಕಿದೆ. ಸೃಜನಾತ್ಮಕ ಚಟುವಟಿಕೆ ಗಳ ಮೂಲಕ ಪರಿಷತ್ತನ್ನು ಜೀವಂತವಾಗಿಡಬೇಕಿದೆ.
-ಲಿಂಗಣ್ಣ ಬಂಧುಕಾರ್, ಸಾಹಿತಿ, ಮಂಡ್ಯ.

ಎಲ್ಲ ಸಂಘಟನೆಗಳನ್ನು ವಿಶ್ವಾಸಕ್ಕೆ ಪಡೆಯಲಿ
ಮಳವಳ್ಳಿ: `ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರಗಳ ಸಂಪೂರ್ಣ ಸಹಕಾರ ಪಡೆಯ ಬೇಕು. ರಾಜ್ಯದ ನಾನಾ ಭಾಗಗಳ ವಿದ್ವಾಂಸರು ಹಾಗೂ ಪ್ರತಿಭಾವಂತರನ್ನು ಗುರುತಿಸಿ ಅವರ ಸುಪ್ತ ಪ್ರತಿಭೆ ಹೊರ ಹೊಮ್ಮಿಸುವತ್ತ ಗಮನ ನೀಡಬೇಕು.

ಕನ್ನಡ ನಾಡು, ಸಾಹಿತ್ಯ, ಭಾಷೆ ಸಂಸ್ಕೃತಿ ಕಾಪಾಡುವ ಎಲ್ಲ ಕನ್ನಡಪರ ಸಂಘಟನೆಗಳನ್ನು ತಮ್ಮ ವಿಶ್ವಾಸಕ್ಕೆ ತೆಗೆದುಕೊಂಡು ಕಸಾಪ ಮಾತೃ ಸಂಸ್ಥೆಯಾಗಿ ಕೆಲಸ ನಿರ್ವಹಿಸಬೇಕು. ಕನ್ನಡ ಸಾಹಿತ್ಯ ಪರಿಷತ್ತಿಗೆ ಕೇವಲ ಮತ ಕೇಳುವ ದೃಷ್ಟಿಯಿಂದ ಒಂದು ಕೋಮು, ಒಂದು ವರ್ಗದ ಜನರನ್ನು ಸದಸ್ಯರನ್ನಾಗಿ ಮಾಡದೆ ಸಾಹಿತ್ಯದ ಪರಿಚಯದ ಎಲ್ಲ ವ್ಯಕ್ತಿಗಳನ್ನೂ ಸದಸ್ಯರನ್ನಾಗಿ ಮಾಡಿಕೊಳ್ಳಬೇಕು.

ಪರಿಷತ್ತಿನ ಅಧ್ಯಕ್ಷರಾಗುವವರಿಗೆ ಸಾಹಿತ್ಯ ಮತ್ತು ಸಂಸ್ಕೃತಿಯ ಸಮಗ್ರ ತಿಳಿವಳಿಕೆ ಇರಬೇಕು. ಯಾವುದೇ ಸಭೆ ಸಮಾರಂಭ ಮಾಡಿದರೆ ಅದಕ್ಕೆ ಸಂಬಂಧಿಸಿದ ಲೆಕ್ಕಪತ್ರಗಳನ್ನು ಸಾರ್ವಜನಿಕವಾಗಿ ಪ್ರಚಾರ ಪಡಿಸಿ ಪಾರದರ್ಶಕತೆ ಕಾಪಾಡಿಕೊಳ್ಳಬೇಕು. ಅಗ್ಗದ ಪ್ರಚಾರಕ್ಕಾಗಿ ಕಾರ್ಯಕ್ರಮಗಳನ್ನು ಮಾಡದೆ ಸಂಸ್ಕೃತಿ ಬೆಳವಣಿಗೆಗೆ ಮಾಡಬೇಕು. ದೋಚುವ- ಬಾಚುವ ಸಂಸ್ಕೃತಿ ಇಲ್ಲದೆ ತ್ಯಾಗ ಸೇವಾ ಮನೋಭಾವವುಳ್ಳ ವ್ಯಕ್ತಿಗಳು ಅಧ್ಯಕ್ಷರಾಗಬೇಕು.
-ಪ್ರೊ. ಡಿ. ದೊಡ್ಡಲಿಂಗೇಗೌಡ, ನಿವೃತ್ತ ಪ್ರಾಧ್ಯಾಪಕ.

ಸಮ್ಮೇಳನಕ್ಕಷ್ಟೇ ಸೀಮಿತವಾಗದಿರಲಿ
ಮದ್ದೂರು: ಕನ್ನಡ ಸಾಹಿತ್ಯ ಪರಿಷತ್ತು ಸಾಂಸ್ಕೃತಿಕ ವಲಯದ ಪ್ರಾತಿನಿಧಿಕ ಸಂಸ್ಥೆ. ಇದು ರಾಜಕೀಯ, ರಾಜಕಾರಣದಿಂದ ಮುಕ್ತವಾಗಿರಬೇಕು. ಪ್ರತಿವರ್ಷ ನಡೆಸುವ ಸಮ್ಮೇಳನಕ್ಕೆ ಮಾತ್ರ ಸೀಮಿತವಾಗಬಾರದು. ಕನ್ನಡ ಭಾಷೆ ಬೆಳಸುವ ಉಳಿಸುವ ನಿಟ್ಟಿನಲ್ಲಿ ಹೊಸ ಕಾರ್ಯಕ್ರಮ ರೂಪಿಸಬೇಕು.

ಜಿಲ್ಲೆಯ ಮಟ್ಟಿಗೆ ಹೇಳುವುದಾದರೆ ಕನ್ನಡ ಸಾಹಿತ್ಯ ಪರಿಷತ್ ಚಟುವಟಿಕೆಗಳು ಇನ್ನಷ್ಟು ಕ್ರಿಯಾಶೀಲವಾಗಬೇಕು. ಜಿಲ್ಲಾ ಹಾಗೂ ತಾಲ್ಲೂಕು ಸಮ್ಮೇಳನಗಳು `ಸಂತೆ ಹೊತ್ತಿಗೆ ಮೂರು ಮೊಳ ನೇಯ್ದಂತೆ~ ಎಂಬಂತೆ ಆಗಬಾರದು. ಹೊಸ ಪೀಳಿಗೆಯ ಬರಹಗಾರರನ್ನು ಪರಿಚಯಿಸುವ ಕೆಲಸ ಆಗಬೇಕು.

ಜಿಲ್ಲೆ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕಗಳಿಗೆ ಉತ್ತಮ ವ್ಯಕ್ತಿತ್ವವುಳ್ಳವರು ಆಯ್ಕೆ ಆಗ ಬೇಕು. ಮಹಿಳಾ ಮತ್ತು ಮಕ್ಕಳ ಸಾಹಿತ್ಯ ಗುರುತಿಸಿ ಬೆಳೆಸುವ ಜವಾಬ್ದಾರಿಯನ್ನು ನೂತನ ಅಧ್ಯಕ್ಷರ ಹೆಗಲ ಮೇಲಿದೆ. ಪ್ರತಿ ತಾಲ್ಲೂಕಿನಲ್ಲಿ ಸಾಹಿತ್ಯ ಭವನ ನಿರ್ಮಾಣವಾಗಲಿ.
-ಗೋಪಾಲ ಶ್ರೀವತ್ಸ, ಮಕ್ಕಳ ಕೃತಿಗಳ ಸಾಹಿತಿ.

ರಾಜಕಾರಣ ಮತ್ತು ಜಾತಿ ವಾಸನೆ ಸಲ್ಲದು
ಕೃಷ್ಣರಾಜಪೇಟೆ: ಕನ್ನಡ ಸಾಹಿತ್ಯ ಪರಿಷತ್ತು ನಾಡಿನ ಸಾಂಸ್ಕೃತಿಕ ವಲಯದ ಮೇರು ಸಂಸ್ಥೆಯಾಗಿದೆ. ನಾಡು, ನುಡಿಯ ಸಂದರ್ಭದಲ್ಲಿ ಎಲ್ಲರನ್ನು ಒಗ್ಗಟ್ಟಾಗಿ ಕೊಂಡೊಯ್ಯಬಲ್ಲ ಶಕ್ತಿ ಸಂಸ್ಥೆಗಿದೆ. ಈ ಸಂಸ್ಥೆಗೆ ಇನ್ನೂ ಹೆಚ್ಚಿನ ಶಕ್ತಿ ತುಂಬಬೇಕಾದ ಅಗತ್ಯವಿದೆ.

ಇತ್ತೀಚಿನ ದಿನಗಳಲ್ಲಿ ಕಸಾಪ ಚುನಾವಣೆಯಲ್ಲಿ ರಾಜಕಾರಣ ಮತ್ತು ಜಾತಿ ವಾಸನೆ ಬರುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕಸಾಪ ರಾಜಕಾರಣ ರಹಿತ, ಜಾತ್ಯತೀತ, ಧರ್ಮಾತೀತ ಮತ್ತು ವರ್ಗಾತೀತ ಸಂಸ್ಥೆಯಾಗಿ ಉಳಿಯಬೇಕು.

ಕೇವಲ ಸಮ್ಮೇಳನಗಳನ್ನು ನಡೆಸುವುದು ಕಸಾಪ ಅಧ್ಯಕ್ಷರ ಕೆಲಸವಲ್ಲ. ಯುವ ಬರಹಗಾರರನ್ನು ಅಣಿಗೊಳಿಸಲು ಅರ್ಥಪೂರ್ಣ ವಿಚಾರ ಸಂಕಿರಣ, ಉಪನ್ಯಾಸ ಮಾಲಿಕೆ, ಚಿಂತನ ಶಿಬಿರ, ಕಮ್ಮಟಗಳು, ಪುಸ್ತಕ ಪ್ರಕಟಣೆ ಮತ್ತಿತರ ಕಾರ್ಯ ಕ್ರಮ ನಡೆಸಲು, ಆ ಮೂಲಕ ಭಾಷೆ ಜೀವಂತವಾಗಿರಿಸುವುದು ಅಧ್ಯಕ್ಷರ ಕರ್ತವ್ಯವಾಗಲಿ.
-ಡಾ.ರಾಮಲಿಂಗಯ್ಯ, ಸಹಾಯಕ ಪ್ರಾಧ್ಯಾಪಕ.

ಕನ್ನಡ ಪರಿಚಾರಕ ಎಂಬ ಭಾವನೆ ಇರಬೇಕು
ಪಾಂಡವಪುರ: ಕನ್ನಡ ಸಾಹಿತ್ಯ ಪರಿಷತ್ತು `ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ~ ಎನ್ನುವುದು ಎಲ್ಲರಿಗೂ ಮನದಟ್ಟಾಗಬೇಕು, ಕನ್ನಡನಾಡಿನ ಪರಂಪರೆಯ ಕೊಂಡಿ ಬೆಸೆಯುವ ಸಾಧನವಾಗಬೇಕು. ಪರಿಷತ್ ಕಟ್ಟುವುದು ಅಂದ್ರೆ.., ಭಾಷೆ ಕಟ್ಟುವುದು ಅಂತ ಆಗಬೇಕು `ಕನ್ನಡ~ ಕೇವಲ ಭಾಷೆಯಲ್ಲ ಅದು ನಮ್ಮ ಬದುಕು. ಕನ್ನಡ ಭಾಷೆಯನ್ನು ಇನ್ನಷ್ಟು ಸದೃಢವಾಗಿಸುವ ಹೊಣೆಗಾರಿಕೆ ಸದಾ ಪರಿಷತ್ತಿನ ಹಾಗೂ ಕನ್ನಡಿಗರಾದ ಪ್ರತಿಯೊ ಬ್ಬರಲ್ಲೂ ಇರಲೇಬೇಕು. ಇದರ ಹೊಣೆಗಾರಿಕೆ ಬೇಕಾದಷ್ಟು ಇದೆ, ಇವತ್ತಿನ ಕಂಪ್ಯೂಟರ್ ಯುಗ, ಆಧುನಿಕ ಜಗತ್ತಿಗೆ ಅನುಗುಣವಾಗಿ ಅದು ಅನಾವರಣವಾಗುವ ಅಗತ್ಯವಿದೆ.

ಪರಿಷತ್ತಿನ ಅಧ್ಯಕ್ಷ ಅಂದ್ರೆ ಆತನಿಗೆ ಎರಡು ಕೊಂಬು ಬೆಳೆಸಲೇ ಬಾರದು, ಆತ ಆರ್ಥಿಕ ಸಂಪನ್ಮೂಲವನ್ನು ಕ್ರೋಢೀಕರಿಸಿ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಕೆಲಸ ಕಾರ್ಯಗಳನ್ನು ಪ್ರಾಮಾಣಿಕವಾಗಿ, ಶ್ರದ್ಧಾಪೂರ್ವಕವಾಗಿ ಮಾಡುವಂತವನಾ ಗಿರಬೇಕು. ಹಾಗೆಂದು, ಅಧ್ಯಕ್ಷರಾದವರು ರಾಜಕಾರಣಿಗಳ ಮುಂದೆ ಹಲ್ಲು ಗಿಂಜುತ್ತಾ ಹೊಗಳು ಭಟ್ಟನಾಗಿರದೆ, ತಾನು ಕೇವಲ ಕನ್ನಡದ ಪರಿಚಾರಕ ಎನ್ನುವ ಭಾವನೆಯಿಂದ ತನ್ನ ಹೊಣೆಗಾರಿಕೆಯನ್ನು ಗೌರವದಿಂದ ನಿಭಾಯಿಸುವಂತ ನಾಗಿರಬೇಕು.
-ಹರವು ದೇವೇಗೌಡ, ಲೇಖಕ, ಪಾಂಡವಪುರ.

ಸಂದರ್ಶನ: ಮಂಡ್ಯ - ಕೆ. ಚೇತನ್, ಶ್ರೀರಂಗಪಟ್ಟಣ- ನಂಜೇಗೌಡ, ಮಳವಳ್ಳಿ- ಪುಟ್ಟಸ್ವಾಮಾರಾಧ್ಯ, ಮದ್ದೂರು- ಮಧುಸೂದನ, ಕೆ.ಆರ್.ಪೇಟೆ- ಶ್ಯಾಮೇಶ್, ಪಾಂಡವಪುರ -ಎಚ್.ಪ್ರಕಾಶ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.