ಶನಿವಾರ, ಏಪ್ರಿಲ್ 17, 2021
23 °C

ಕಪಾಟಿನಿಂದ ಹೊರಬಂದವು ಪುಸ್ತಕಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ಮಕ್ಕಳಲ್ಲಿ ಪುಸ್ತಕ ಓದುವ ಅಭಿರುಚಿಯನ್ನು ಬೆಳೆಸುವ ಉದ್ದೇಶದಿಂದ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯು ರೂಪಿಸಿರುವ ತೆಗೆಯಿರಿ ಪುಸ್ತಕ ಹೊರಗೆ ನಗರ ಹಾಗೂ ತಾಲ್ಲೂಕಿನ ಹಲವು ಗ್ರಾಮದ ಶಾಲೆಗಳಲ್ಲಿ ಬುಧವಾರ ಆಚರಿಸಲಾಯಿತು.ಬೆಳಿಗ್ಗೆಯಿಂದಲೇ ಮಕ್ಕಳು ಉತ್ಸಾಹದಿಂದ ಈ ಕ್ಷಣವನ್ನು ಎದುರು ನೋಡುತ್ತಿದ್ದರು. ಸಂಬಂಧಪಟ್ಟ ಶಾಲೆಗಳ ಶಿಕ್ಷಕ-ಶಿಕ್ಷಕಿಯರು ಹಲವು ವರ್ಷಗಳಿಂದ ದೂಳು ಹಿಡಿದಿದ್ದ ಕಪಾಟುಗಳನ್ನು ತೆರೆದು ಒರೆಸಿ ಒಪ್ಪ ಓರಣ ಮಾಡಿದ್ದರೆ, ದಿನಾಲು ಬಳಕೆ ಮಾಡುತ್ತಿದ್ದ ಗ್ರಂಥಾಲಯಗಳನ್ನು ಸುಸ್ಥಿತಿಗೆ ತರಲು ಹೆಚ್ಚು ಹೊತ್ತು ಹಿಡಿಯಲಿಲ್ಲ. ಪುಸ್ತಕಗಳ ಕಪಾಟು ತೆರೆದಾಗ ಇಷ್ಟೊಂದು ಮಹತ್ವದ ಪುಸ್ತಕಗಳು ನಮ್ಮಲ್ಲಿದೆಯೇ ಎಂದು ಶಿಕ್ಷಕ-ಶಿಕ್ಷಕಿಯರಿಗೆ ಅನಿಸಿದ್ದು ಸುಳ್ಳಲ್ಲ!ನಗರದ ಮಹಿಳಾ ಪ್ರಶಿಕ್ಷಣಾರ್ಥಿಗಳ ತರಬೇತಿ ಶಾಲೆಯ ಆವರಣದ ಪ್ರಾಥಮಿಕ ಶಾಲೆಯಲ್ಲಿ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಡಾ.ಬಿ.ಕೆ.ಎಸ್.ವರ್ಧನ್ ಮೌನವಾಗಿ ಕುಳಿತ ಮಕ್ಕಳೊಂದಿಗೆ ಮೌನವಾಗಿ ಪುಸ್ತಕ ಓದಿದರು.ಡಯಟ್ ಆವರಣದಲ್ಲಿಯೂ ಡಯಟ್‌ನ ಸಿಬ್ಬಂದಿ, ಇಲಾಖೆಯ ಹೆಚ್ಚುವರಿ ಆಯುಕ್ತರ ಕಚೇರಿಯ ಸಿಬ್ಬಂದಿ ಓದಿನಲ್ಲಿ ತೊಡಗಿದರು.ನಗರದ ಮದಾರಮಡ್ಡಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಸಂ 6ರಲ್ಲಿ ನಿಗದಿತ ಅವಧಿಗಿಂತ ಒಂದೂವರೆ ಗಂಟೆಯಷ್ಟು ತಡವಾಗಿ ಕಾರ್ಯಕ್ರಮ ಆರಂಭವಾಯಿತು. ಕಾರ್ಯಕ್ರಮ ಉದ್ಘಾಟಿಸಬೇಕಿದ್ದ ಜನಪ್ರತಿನಿಧಿಗಳು ಸಕಾಲಕ್ಕೆ ಆಗಮಿಸದಿದ್ದುದೇ ಇದಕ್ಕೆ ಕಾರಣ. ಈ ಬಗ್ಗೆ ಶಿಕ್ಷಕರೊಬ್ಬರನ್ನು ವಿಚಾರಿಸಿದಾಗ, ನಾವೇನೋ ಸರಿಯಾದ ಸಮಯಕ್ಕೇ ಕಾರ್ಯಕ್ರಮ ಆರಂಭಿಸಲು ಉದ್ದೇಶಿಸಿದ್ದೆವು. ಆದರೆ ಅತಿಥಿಗಳನ್ನು ಬಿಟ್ಟು ಸಭೆ ಆರಂಭಿಸಿದರೆ ಅವರು ಸಿಟ್ಟು ಮಾಡಿಕೊಳ್ಳುತ್ತಾರೆ ಎಂದರು.ವಿದ್ಯಾರಣ್ಯ ಸಂಯುಕ್ತ ಪದವಿಪೂರ್ವ ಕಾಲೇಜು: ಇಲ್ಲಿಯ ವಿದ್ಯಾರಣ್ಯ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಹಿರಿಯ ಗ್ರಂಥಾಲಯ ತಜ್ಞ ಪ್ರೊ.ಕೆ.ಎಸ್.ದೇಶಪಾಂಡೆ ಉದ್ಘಾಟಿಸಿ, `ಪ್ರಪಂಚದ ಮಹಾಮೇಧಾವಿಗಳ ಸಭಾಭವನವೇ ಗ್ರಂಥಾಲಯಗಳಾಗಿವೆ~ ಎಂದರು.ಉಪಪ್ರಾಚಾರ್ಯ ಜಿ.ಆರ್.ಭಟ್ ಸ್ವಾಗತಿಸಿದರು. ಎನ್.ಎಸ್.ಗೋವಿಂದರೆಡ್ಡಿ, ಸಿಂಧು ಶಿರೂರ, ಎಸ್.ಎಂ.ಭೋಂಗಾಳೆ, ಆನಂದ ಕುಲಕರ್ಣಿ, ಪ್ರದೀಪ ದೊಡವಾಡ, ವೀಣಾ ಜಟ್ಟಯ್ಯನ್, ಆರ್. ಎಂ.ನಾವಳ್ಳಿ, ಪಿ.ನಾಗೇಂದ್ರಪ್ಪ, ಎಸ್. ಬಿ.ಕಡಕೋಳ ಸಂಗಮೇಶ ಹಡಪದ ಇದ್ದರು.ಸರ್ಕಾರಿ ಉರ್ದು ಶಾಲೆ: ವಾಚನಾಲಯ ಉದ್ಘಾಟನಾ ಸಮಾರಂಭದಲ್ಲಿ ಪಾಲಿಕೆ ಸದಸ್ಯೆ ಸರೋಜಾ ಪಾಟೀಲ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ಇಮಾಂ ಚೌಧರಿ, ಎಂ.ಎಂ.ಬೆಂಗಳೂರ, ಅಬ್ದುಲ್ ರೆಹಮಾನ್, ಮುಸ್ತಫಾ ಹಾಗೂ ಇರ್ಫಾನ್ ಭಾಗವಹಿಸಿದ್ದರು.ಗೋವನಕೊಪ್ಪ: ಕನಕದಾಸ ಪ್ರೌಢಶಾಲೆಯಲ್ಲಿ ಹೆಬ್ಬಳ್ಳಿ ಕ್ಲಸ್ಟರ್ ಮಟ್ಟದ ಸಿಆರ್‌ಸಿ ಸುಬೇದಾರ ಅವರು ಶಾಲಾ ವಿದ್ಯಾರ್ಥಿ ಪ್ರವೀಣ ಉಳ್ಳಿಗೇರಿ ಮೂಲಕ ಉದ್ಘಾಟಿಸಿದರು. ಶಿಕ್ಷಣ ಸಂಯೋಜಕ ಎಸ್.ಎಫ್.ಮಂಜಣ್ಣವರ ಇದ್ದರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.