‘ಗುರೂ ಈ ‘ಟಿಂಗ್ ಆಪರೇಶನ್’ ಅಂದ್ರೆ ಏನು?’ ಹರಟೆಕಟ್ಟೆಯಲ್ಲಿ ಚಹಾ ಕುಡಿಯುತ್ತ ಕುಳಿತಿದ್ದ ತೆಪರೇಸಿಯನ್ನು ದುಬ್ಬೀರ ಪ್ರಶ್ನಿಸಿದ.

‘ಅದಾ? ಅದೂ ಈ ಪೇಪರ್ನೋರು, ಟಿ.ವಿ.ಯೋರು ಮಾಡೋ ಆಪರೇಶನ್ನು. ಆಸ್ಪತ್ರೇಲಿ ಡಾಕ್ಟ್ರುಗಳತ್ರ ಆಪರೇಶನ್ ಮಾಡಿಸ್ಕಾಬೇಕು ಅಂದ್ರೆ ನಾವು ದುಡ್ಡು ಕೊಡ್ಬೇಕು. ಆದ್ರೆ ಇಲ್ಲಿ ಟಿ.ವಿ.ಯೋರೇ ನಮಗೆ ದುಡ್ಡು ಕೊಟ್ಟು ಆಪರೇಶನ್ ಮಾಡ್ತಾರೆ, ಅಷ್ಟೆ ವ್ಯತ್ಯಾಸ...’ ತೆಪರೇಸಿ ವಿವರಿಸಿದ.

‘ಓ ಹಂಗಾ? ಹಂಗಾದ್ರೆ, ನಮ್ ಗುಡ್ಡೆಗೂ ಒಂದು ಆಪ್ರೇಶನ್ ಮಾಡ್ಸಾನ. ಬರೋ ದುಡ್ಡಲ್ಲಿ ಎಲ್ರೂ ಪಾರ್ಟಿ ಮಾಡಾಣ. ಹೆಂಗೆ?’ ದುಬ್ಬೀರ ನಕ್ಕ.

‘ಟಿ.ವಿ.ಯೋರು ಹಂಗೆಲ್ಲ ಯಾರಿಗ್ ಬೇಕು ಅವ್ರಿಗೆ ಆಪರೇಶನ್ ಮಾಡಲ್ಲ ಕಣಲೆ... ರಾಜಕಾರಣಿಗಳು, ಅಧಿಕಾರಿಗಳು, ದೊಡ್ಡ ದೊಡ್ಡ ಕುಳಗಳಿಗೆ ಮಾತ್ರ ಮಾಡೋದು. ಈ ಗುಡ್ಡೆ ಯಾವ ದೊಡ್ಡ ಕುಳ?’ ತೆಪರೇಸಿ ಕಿಚಾಯಿಸಿದಾಗ ಗುಡ್ಡೆಗೆ ಸಿಟ್ಟು ಬಂತು. ‘ಲೇ ತೆಪರಾ, ಬ್ಯಾಡ ನೋಡು, ನನ್ ತೆಲಿಕೆಟ್ರೆ ಅಷ್ಟೆ...’ ಎಂದು ಧಮಕಿ ಹಾಕಿದ.

ತಕ್ಷಣ ದುಬ್ಬೀರ ‘ಏಯ್ ಗುಡ್ಡೆ ಸುಮ್ಕಿರಲೆ, ಏನೋ ತಮಾಷೆ ಮಾಡಿದ್ರೆ ಎಗರಾಡ್ತಾನೆ. ನನಗೆ ಗೊತ್ತಿರೋ ಹಾಗೆ ಆಪರೇಶನ್ ಮಾಡಿದ ಮ್ಯಾಲೆ ದುಡ್ಡೂ ಕೊಡೋದು ಅಂದ್ರೆ ಮಕ್ಕಳಾಗದ ಹಾಗೆ ಮಾಡ್ತಾರಲ್ಲ ಆಪ್ರೇಶನ್, ಅದು. ಆದ್ರೆ ಟಿ.ವಿ.ಯೋರು ಮಾಡೋದು ಯಾವ ಆಪ್ರೇಶನ್ನು?’ ಎಂದು ಪ್ರಶ್ನಿಸಿದ.

‘ಟಿ.ವಿ.ಯೋರು ಟಿಂಗ್ ಆಪ್ರೇಶನ್... ಅಂದ್ರೆ ನಾಲಿಗೆಗೆ ಆಪ್ರೇಶನ್ ಮಾಡ್ತಾರೆ ಅನ್ಸುತ್ತೆ. ದುಡ್ಡು ಇಸ್ಕಂಡೋರು ಮುಂದೆ ಮಾತಾಡಕ್ಕೆ, ಭಾಷಣ ಮಾಡಾಕೆ ಬರಬಾರ್ದು, ಹಂಗೆ ಮಾಡ್ತಾರೆ ಅನ್ಸುತ್ತೆ...’ ತೆಪರೇಸಿ ಅನುಮಾನದಿಂದಲೇ ಹೇಳಿದ.
ಗುಡ್ಡೆಗೆ ನಗು ಬಂತು ‘ಲೇ ತೆಪರ, ನಾಲಿಗೆಗೆ ಟಂಗ್ ಅಂತಾರೆ, ಟಿಂಗ್ ಅಲ್ಲ. ಟಿ.ವಿ.ಯೋರು ಮಾಡೋದು ಸ್ಟಿಂಗ್ ಆಪರೇಶನ್ ಅಂತ. ನಿಮ್ಮಂಥ ಹೆಬ್ಬೆಟ್ಟುಗಳಿಗೆ ಅದೆಲ್ಲ ಹೆಂಗೆ ಗೊತ್ತಾಗಬೇಕು...’ ಎಂದ ನಗುತ್ತ. ತೆಪರೇಸಿಗೆ ಅವಮಾನವಾಯಿತು. ‘ಹೌದಪ್ಪ, ನಾವು ಹೆಬ್ಬೆಟ್ಟುಗಳೇ. ನೀನು ಮಹಾ ಐ.ಎ.ಎಸ್. ಓದಿದಿ ನೋಡು. ಮುಚ್ಕಂಡ್ ಕುತ್ಕಳಲೇ ಕಂಡಿದೀನಿ...’ ಎಂದ.

ಆಗ ಮಿಸ್ಸಮ್ಮ ‘ಏಯ್ ಸುಮ್ಕಿರ್ರಪ್ಪ, ಅದೇನ್ ಕಾಂಗ್ರೆಸ್ಸು ಬಿಜೆಪಿ ಕಿತ್ತಾಡಿದಂಗೆ ಕಿತ್ತಾಡ್ತೀರ. ಸ್ವಲ್ಪ ಆ ಜೆಡಿಎಸ್ನೋರ್ನ ನೋಡಿ ಕಲೀರಿ. ಅವರು ಎಷ್ಟು ಕೂಲಾಗಿ ಬರೀ ಹುಲ್ಲು ತೋರ್ಸಿ ಪಕ್ಷಾಂತರಿ ಕಪ್ಪೆಗಳನ್ನ ಹೆಂಗೆ ಬುಟ್ಟಿಗೆ ಹಾಕ್ಕೋತಿದಾರೆ. ಈ ಕಪ್ಪೆಗಳೋ ಬಾಲ ಇಲ್ಲದಿದ್ರೂ ಪಕ್ಷದಿಂದ ಪಕ್ಷಕ್ಕೆ ಹೆಂಗೆ ಹಾರ್ತಾ ಅದಾವೆ ನೋಡ್ರಿ. ನೀವೂ ಇದೀರ, ಯಾವುದಾದ್ರು ಪಕ್ಷಕ್ಕೆ ಹಾರಿ ಒಂದಿಷ್ಟು ರೊಕ್ಕ ಮಾಡ್ಕಳ್ರಿ ಅಂದ್ರೆ ಇಲ್ಲಿ ಬಂದು ಜಗಳ ಕಾಯ್ತೀರ...’ ಎಂದು ಬುದ್ಧಿ ಹೇಳಿದಳು.

‘ಅಲ್ಲ ಮಿಸ್ಸಮ್ಮ. ಕಪ್ಪೆಗಳು ಜೆ.ಡಿ.ಎಸ್.ಗಷ್ಟೆ ಅಲ್ಲ. ಎಲ್ಲ ಪಕ್ಷಗಳಿಗೂ ಹಾರ್ತಿದಾವೆ. ಹಿಂದೆ ಬೇಂದ್ರೆ ಕವಿಗಳು ‘ಬೆಕ್ಕು ಹಾರುತಿದೆ ನೋಡಿದಿರಾ?’ ಅಂತ ಒಂದು ಪದ್ಯ ಬರೆದಿದ್ರು. ಈಗ ಅವರೇನಾದ್ರು ಬದುಕಿದ್ದಿದ್ರೆ ‘ಕಪ್ಪೆ ಹಾರುತಿವೆ ನೋಡಿದಿರಾ?’ ಅಂತ ಪದ್ಯ ಬರೀತಿದ್ರೇನಪ...’ ಕಡೇಮನಿ ಕೊಟ್ರೇಶಿ ನಗಾಡಿದ.

‘ಅರೆ, ಅವರಿಲ್ಲದಿದ್ರೇನಂತೆ, ಈ ಗುಡ್ಡೆ ಇಲ್ವ? ಪಟ್ ಅಂತ ಇಲ್ಲೇ ಒಂದು ಆಶುಕವಿತೆ ಹೇಳ್ಲಾ?’ ಎಂದ ಗುಡ್ಡೆ ಶುರು ಮಾಡಿಯೇಬಿಟ್ಟ.

ಕಪ್ಪೆ ಹಾರುತಿವೆ ನೋಡಿದಿರಾ?
ರಾಜಕೀಯ ಎಂಬ ಹೊಲಸು ಹೊಂಡದಿಂದ
ದಿಲ್ಲಿ ಗದ್ದುಗೆ ಎಂಬ ರೆಕ್ಕೆಹುಳವ ಹಿಡಿಯಲು
ಎಡಕ್ಕೆ ಬಲಕ್ಕೆ ಹಿಂದಕ್ಕೆ ಮುಂದಕ್ಕೆ
ಎತ್ತೆತ್ತ ಬೇಕು ಅತ್ತತ್ತ
ಕಪ್ಪೆ ಹಾರುತಿವೆ ನೋಡಿದಿರಾ?

‘ಹೆಂಗೆ?’ ಎಂದು ಹುಬ್ಬು ಕುಣಿಸಿದ ಗುಡ್ಡೆ. ‘ಸೂಪರ್’ ಎಂದಳು ಮಿಸ್ಸಮ್ಮ. ‘ನೀನು ಎಲ್ಲ ಸರಿ ಕಣಲೆ ಗುಡ್ಡೆ, ಆದ್ರೆ ಒಂದೊಂದ್ಸಲ ತೆಲಿ ತಿಂತೀಯಪ’ ಕೊಟ್ರೇಶಿ ಬೆನ್ನು ತಟ್ಟಿದ.

ಅಷ್ಟರಲ್ಲಿ ‘ಬ್ರೇಕಿಂಗ್ ನ್ಯೂಸ್’ ಟೀವಿ ಚಾನೆಲ್ ರಿಪೋರ್ಟರ್ ಪರ್ಮೇಶಿ ಹರಟೆಕಟ್ಟೆಗೆ ಎಂಟ್ರಿ ಕೊಟ್ಟು ‘ಏನ್ರಲೆ, ಏನ್ ನಡೆಸಿದೀರಿ? ಏನಂತತಿ ನಮ್ ಮಿಸ್ಸಮ್ಮನ ಕ್ಯಾಂಟೀನು?’ ಎಂದು ವಿಚಾರಿಸಿದ.

ತಕ್ಷಣ ಗುಡ್ಡೆಗೆ ಏನೋ ಹೊಳೆದಂತಾಗಿ ‘ಪರ್ಮೇಶಿ, ಈ ಮಿಸ್ಸಮ್ಮ ಒಂಥರ ನಮ್ಮ ತಮಿಳ್ನಾಡಿನ ‘ಅಮ್ಮ’ ಕಂಡಂಗೆ ಕಾಣ್ತಿಲ್ವ? ಅಲ್ಲಿ ಜಯಲಲಿತಮ್ಮ ಅಮ್ಮಾ ಕ್ಯಾಂಟೀನು, ಅಮ್ಮಾ ನೀರು, ಅಮ್ಮಾ ಹಾಲು, ಅಮ್ಮಾ ಸ್ಕೂಲು ಅಂತ ಏನೇನೋ ಯೋಜನೆ ಜಾರಿ ಮಾಡಿದಾರಂತಲ್ಲ, ಅದೇ ತರ ನಾವು ಮಿಸ್ಸಮ್ಮಾ ಕ್ಯಾಂಟೀನು, ಮಿಸ್ಸಮ್ಮಾ ನೀರು, ಮಿಸ್ಸಮ್ಮಾ ಪ್ಲೇಟ್ ಮೀಲ್ಸು ಅಂತ ಯಾಕೆ ಮಾಡಬಾರ್ದು? ಹೆಂಗೂ ನಮಗೆಲ್ಲ ಉದ್ರಿ ಕೊಟ್ಟು ಸಾಕ್ತಿರೋದೇ ಮಿಸ್ಸಮ್ಮ ಅಲ್ವ?’ ಎಂದ.

‘ಕರೆಕ್ಟ್ ಕಣಲೆ ಗುಡ್ಡೆ. ಹಂಗೇ ಯಾವುದಾದ್ರು ಪಕ್ಷದ ಟಿಕೆಟ್ ಕೊಡಿಸಿಬಿಟ್ರೆ ‘ಅಲ್ಲಿ ಅಮ್ಮ, ಇಲ್ಲಿ ಮಿಸ್ಸಮ್ಮ’ ಅಂತ ಟಿ.ವಿ. ಚಾನೆಲ್ಗಳು ಟೈಟ್ಲು ಕೊಟ್ಟು ಸಕತ್ ಪ್ರಚಾರ ಕೊಡ್ತಾರೆ ಅನ್ಸುತ್ತೆ. ಮಿಸ್ಸಮ್ಮ ಗೆದ್ರೆ ಎಂ.ಪಿ, ಸೋತ್ರೆ ಪಾರ್ಟಿ ಫಂಡ್ ಉಳಿಸ್ಕಂಡು ಅದ್ರಲ್ಲೇ ಒಂದು ಒಳ್ಳೆ ಹೋಟ್ಲು ಶುರು ಮಾಡಾಣ. ಹೆಂಗೆ?’ ತೆಪರೇಸಿ ಸಲಹೆ.

‘ಅಂತೂ ನನ್ನ ಈ ಡಬ್ಬಾ ಚಾದಂಗಡಿ ಗುಡುಚಾಪೆ ಎತ್ತಿಸೋ ಪ್ಲಾನ್ ಮಾಡ್ತಿದೀರಿ. ತರ್ಲೆಗಳಾ ನನ್ನ ಎಂ.ಪಿ.ಮಾಡೋದು ಹಂಗಿರ್ಲಿ, ಮೊದ್ಲು ನಿಮ್ಮ ಹಳೆ ಬಾಕಿ ಚುಕ್ತಾ ಮಾಡಿ’ ಎಂದು ಅವರ ಮಾತಿಗೆ ಬ್ರೇಕ್ ಹಾಕಿದ ಮಿಸ್ಸಮ್ಮ, ‘ಪರ್ಮೇಶಿ, ಹೆಂಗೈತೋ ಎಲೆಕ್ಷನ್ನು? ಈ ಕಡೆ ಎಲ್ಲಿಗೋಗಿದ್ದೆ?’ ಎಂದು ವಿಚಾರಿಸಿದಳು.

‘ಅದಾ? ನಮ್ ಎಂ.ಪಿ. ಕ್ಯಾಂಡಿಡೇಟು ನಾಮಪತ್ರ ಸಲ್ಲಿಸೋಕೆ ಹೋಮ -ಹವನ ಮಾಡಿಸ್ತಿದ್ರು. ಅದನ್ನ ಶೂಟ್ ಮಾಡಾಕೋಗಿದ್ದೆ...’ ಪರ್ಮೇಶಿ ಉತ್ತರಿಸಿದ.

‘ಹೋಮನಾ? ನಾನು ಅದರ ಮೇಲೂ ಒಂದು ಕವಿತೆ ಬರೆದು ಪೇಪರಿಗೆ ಕಳಿಸಿದೀನಿ ಹೇಳ್ಲಾ?’ ಎಂದ ಗುಡ್ಡೆ, ಜೇಬಿನಿಂದ ಒಂದು ಚೀಟಿ ಹೊರತೆಗೆದ.
ರಾಜಕಾರಣಿಗಳು ಮೊದಲು
ಟಿಕೆಟ್ಗಾಗಿ ಮಾಡಿಸ್ತಾರೆ ಹೋಮ
ಸಿಕ್ಕಮೇಲೆ ಶಾಂತಿ ಹೋಮ
ಚುನಾವಣಾ ಕಚೇರಿಗೆ ಶಕ್ತಿ ಹೋಮ
ಎದುರಾಳಿಗಳಿಗೆ ಶತ್ರುನಾಶ ಹೋಮ
ತಮ್ಮ ಗೆಲುವಿಗೆ ದಿಗ್ವಿಜಯ ಹೋಮ
ಗೆದ್ದು ಗದ್ದುಗೆ ಏರಿದ ಮೇಲೆ?
ಇದ್ದೇ ಇದೆಯಲ್ಲ
ಮತದಾರರಿಗೆ ಪಂಗನಾಮ!

‘ಹೆಂಗೆ?’ ಗುಡ್ಡೆ ಎಲ್ಲರ ಮುಖ ನೋಡಿದ. ‘ಗುಡ್, ಒಂದ್ ಲೆವೆಲ್ಲಿಗೆ ಓಕೆ’ ಎಂದ ಪರ್ಮೇಶಿ, ‘ಈಗ ಹೇಳ್ರಪ್ಪ. ಈ ಸಲ ಹರಟೆಕಟ್ಟೆ ಓಟು ಯಾರಿಗೆ?’ ಎಂದು ಕೇಳಿದ.

‘ಯಾರಿಗೆ ಅಂದ್ರೆ? ನಮಗೆ ಯಾರು ಹೆಚ್ಚು ಅನುಕೂಲ ಮಾಡಿಕೊಡ್ತಾರೋ ಅವರಿಗೆ...’ ಎಂದ ತೆಪರೇಸಿ.
‘ಒಂದು ಪಕ್ಷದೋರು ಅಕ್ಕಿ, ಜೋಳ, ಹಾಲು, ಮಕ್ಕಳ ಬಟ್ಟೆ, ಫೀಸು, ಪುಸ್ತಕ, ಕಂಪ್ಯೂಟರು ಎಲ್ಲ ಫ್ರೀ ಕೊಡ್ತಾರಂತೆ, ಅವರಿಗೆ ನನ್ನ ಓಟು’ ಎಂದ ದುಬ್ಬೀರ.

‘ನಾನಂತೂ ಸೀರೆ, ಹೆಣ್ಮಕ್ಕಳಿಗೆ ಬಾಂಡು, ಫ್ರೀ ಕರೆಂಟು, ಮೇಲೆ ಒಂದು ಪರ್ಸೆಂಟ್ನಂಗೆ ೩ ಲಕ್ಷ ರೂಪಾಯಿ ಸಾಲ ಕೊಡ್ತಾರಂತಲ್ಲ, ಅವರಿಗೆ ಓಟ್ ಹಾಕ್ತೀನಿ’ ಅಂದಳು ಮಿಸ್ಸಮ್ಮ.

‘ಅದಕ್ಕಿಂತ ಇನ್ನೊಂದ್ ಪಕ್ಷದೋರು ಜೀರೊ ಪರ್ಸೆಂಟ್, ಅಂದ್ರೆ ಬಡ್ಡಿ ಇಲ್ಲದಂಗೆ ೩ ಲಕ್ಷ ರೂಪಾಯಿ ಸಾಲ ಕೊಡ್ತಾರಂತೆ. ಅವರಿಗ್ಯಾಕೆ ಓಟ್ ಹಾಕಬಾರ್ದು?’ ಕೊಟ್ರೇಶಿ ಪ್ರಶ್ನಿಸಿದ.

‘ನೀನೇನ್ ಹೇಳ್ತೀಯೋ ಗುಡ್ಡೆ?’ ಪರ್ಮೇಶಿ ಪ್ರಶ್ನಿಸಿದ.

‘ನಾನಾ? ೩ ಲಕ್ಷ ಸಾಲ ಕೊಟ್ಟು, ಅದರ ಮ್ಯಾಲೆ ನಮಗೇ ಬಡ್ಡಿ ಕೊಡೋ ಅಂತೋರು ಯಾರಾದ್ರು ಅದಾರಾ? ಇದ್ರೆ ಹೇಳ್ರಿ, ನನ್ ಓಟ್ ಅವರಿಗೇ’ ಎಂದ ನಗುತ್ತ. ‘ಥು ನಿನ್ ಮೂತಿಗಿಷ್ಟು, ನಾಚ್ಕೆ ಇಲ್ಲದೋನೆ’ ತಿವಿದಳು ಮಿಸ್ಸಮ್ಮ. ಎಲ್ಲರೂ ಗೊಳ್ಳಂತ ನಕ್ಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.