ಬೆಂಗಳೂರು: ಇಂದೋರ್ ಹುಡುಗ ರಜತ್ ಪಾಟೀದಾರ್ ಮತ್ತು ನಾಗಪುರದ ಆಟಗಾರ ಯಶ್ ರಾಥೋಡ್ ಜೊತೆಯಾಟದ ಭರಾಟೆಯಲ್ಲಿ ದಕ್ಷಿಣ ವಲಯ ಮಂಕಾಯಿತು. ಸ್ಪಿನ್ ಬೌಲರ್ಗಳ ಕೊರತೆಯು ಮೊಹಮ್ಮದ್ ಅಜರುದ್ದೀನ್ ನಾಯಕತ್ವದ ತಂಡವನ್ನು ಭಾರಿ ಹಿನ್ನಡೆಯತ್ತ ತಳ್ಳಿತು.

ಬಿಸಿಸಿಐ ಶ್ರೇಷ್ಠತಾ ಕೇಂದ್ರದ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಫೈನಲ್ ಪಂದ್ಯದ ಎರಡನೇ ದಿನದಾಟದ ಮುಕ್ತಾಯಕ್ಕೆ ಕೇಂದ್ರ ವಲಯವು ಮೊದಲ ಇನಿಂಗ್ಸ್ನಲ್ಲಿ 235 ರನ್ಗಳ ಮುನ್ನಡೆ ಸಾಧಿಸಿತು.

ಪಂದ್ಯದ ಮೊದಲ ದಿನದಾಟದಲ್ಲಿ ದಕ್ಷಿಣ ವಲಯ ತಂಡವು 149 ರನ್ಗಳಿಗೆ ಕುಸಿಯಲು ಕೇಂದ್ರ ತಂಡದ ಸ್ಪಿನ್ ಜೋಡಿ ಕುಮಾರ ಕಾರ್ತಿಕೇಯ ಮತ್ತು ಸಾರಾಂಶ್ ಜೈನ್ ಕಾರಣರಾಗಿದ್ದರು. ಆದರೆ ಅವರಿಬ್ಬರಷ್ಟು ಪರಿಣಾಮಕಾರಿಯಾದ ಸ್ಪಿನ್ನರ್ಗಳು ದಕ್ಷಿಣ ವಲಯದಲ್ಲಿ ಇಲ್ಲ. ನಂತರ ಇನಿಂಗ್ಸ್ ಆರಂಭಿಸಿದ್ದ ಕೇಂದ್ರವು ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ವವಿಲ್ಲದೇ 50 ರನ್ ಸೇರಿಸಿತ್ತು.

ದಕ್ಷಿಣ ತಂಡದ ವೇಗದ ಜೋಡಿ ಗುರ್ಜಪನೀತ್ ಸಿಂಗ್ (74ಕ್ಕೆ3) ಮತ್ತು ಕೌಶಿಕ್ (55ಕ್ಕೆ1) ಶುಕ್ರವಾರ ಬೆಳಿಗ್ಗೆ ಉತ್ತಮ ಆರಂಭ ಮಾಡಿದರು. 43 ರನ್ಗಳ ಅಂತರದಲ್ಲಿ ಮೂರು ವಿಕೆಟ್ ಗಳಿಸಿದರು. ಕೌಶಿಕ್ ಅವರು ಅಕ್ಷಯ್ ವಾಡಕರ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಶುಭಂ್ ಶರ್ಮಾ (6) ಮತ್ತು ಅರ್ಧಶತಕ ಹೊಡೆದ ದನೀಶ್ (53; 120ಎ) ಅವರನ್ನು ಗುರ್ಜಪನೀತ್ ಅವರು ಹೆಡೆಮುರಿ ಕಟ್ಟಿದರು. ಆದರೆ ತಮ್ಮ ಮೂರನೇ ವಿಕೆಟ್ ಪಡೆಯಲು ಸುಮಾರು ಎರಡು ಗಂಟೆ ಕಾಯಬೇಕಾಯಿತು. ಇನಿಂಗ್ಸ್ನ 68ನೇ ಓವರ್ನಲ್ಲಿ ಸಿಂಗ್ ಅವರಿಗೆ ವಿಕೆಟ್ ಒಪ್ಪಿಸುವ ಮುನ್ನ ರಜತ್ ಶತಕ ಬಾರಿಸಿದರು. ಯಶ್ ರಾಥೋಡ್ ಅವರೊಂದಿಗೆ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 167 ರನ್ (205 ಎಸೆತ) ಸೇರಿಸಿದರು.

112 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿದ ರಜತ್ ಅವರ ಬ್ಯಾಟಿಂಗ್ ಸೊಗಸಾಗಿತ್ತು. ತಮ್ಮ ಅರ್ಧಶತಕ ಪೂರೈಸಲು ಅವರು 73 ಎಸೆತ ಆಡಿದರು. ಆದರೆ ನಂತರದ ಐವತ್ತು ರನ್ಗಳನ್ನು ಕೇವಲ 39 ಎಸೆತಗಳಲ್ಲಿ ಗಳಿಸಿದರು. ಮೈದಾನದ ಎಲ್ಲ ದಿಕ್ಕುಗಳಿಗೂ ಚೆಂಡನ್ನು ಕಳಿಸಿದರು.

ರಿಕಿ ಭುಯ್ ಅವರ ಬೌಲಿಂಗ್ನಲ್ಲಿ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರು. ಅಪಾರ ಆತ್ಮವಿಶ್ವಾಸ ಅವರ ಆಟದಲ್ಲಿತ್ತು. ಅವರು ಶತಕ ಸನಿಹ ಇದ್ದಾಗಲೂ ಗುರ್ಜಪನೀತ್ ಓವರ್ನಲ್ಲಿ ಒಂದು ಬೌಂಡರಿ ಮತ್ತು ಸಿಕ್ಸರ್ ಎತ್ತಿದರು. ಇನ್ನೊಂದು ಬದಿಯಲ್ಲಿ ಯಶ್ ಕೂಡ ಚೆಂದದ ಆಟವಾಡಿದರು. 25 ವರ್ಷದ ಎಡಗೈ ಬ್ಯಾಟರ್ 84 ಎಸೆತಗಳಲ್ಲಿ ಅರ್ಧಶತಕ ಹೊಡೆದರು. ನಂತರದ 50 ರನ್ಗಳನ್ನು 48 ಎಸೆತಗಳಲ್ಲಿ ಗಳಿಸಿದರು. ರಜತ್ ಔಟಾದ ನಂತರವೂ ಇನಿಂಗ್ಸ್ ಹೊಣೆ ಹೊತ್ತರು.

ಸಾರಾಂಶ್ ಜೈನ್ ಜೊತೆಗೆ ಮುರಿಯದ 6ನೇ ವಿಕೆಟ್ ಜತೆಯಾಟದಲ್ಲಿ 118 ರನ್ ಸೇರಿಸಿದ್ದಾರೆ. ಯಶ್ (ಬ್ಯಾಟಿಂಗ್ 137) ಮತ್ತು ಸಾರಾಂಶ್ (ಬ್ಯಾಟಿಂಗ್ 47) ಶನಿವಾರಕ್ಕೂ ತಮ್ಮ ಆಟ ಕಾಯ್ದಿರಿಸಿಕೊಂಡಿದ್ದಾರೆ. ಬ್ಯಾಟರ್ಗಳಿಗೆ ಸಹಕರಿಸುತ್ತಿರುವ ಪಿಚ್ನಲ್ಲಿ ಮತ್ತಷ್ಟು ರನ್ಗಳನ್ನು ಸೂರೆ ಮಾಡುವ ಛಲದಲ್ಲಿದ್ದಾರೆ.

ಸಂಕ್ಷಿಪ್ತ ಸ್ಕೋರು:

ಮೊದಲ ಇನಿಂಗ್ಸ್: ದಕ್ಷಿಣ ವಲಯ; 63 ಓವರ್ಗಳಲ್ಲಿ 149. ಕೇಂದ್ರ ವಲಯ: 104 ಓವರ್ಗಳಲ್ಲಿ 5ಕ್ಕೆ384 (ದನೀಶ್ ಮಾಳೆವರ್ 53, ಅಕ್ಷಯ್ ವಾಡಕರ್ 22, ರಜತ್ ಪಾಟೀದಾರ್ 101, ಯಶ್ ರಾಥೋಡ್ ಬ್ಯಾಟಿಂಗ್ 137, ಸಾರಾಂಶ್ ಜೈನ್ ಬ್ಯಾಟಿಂಗ್ 47, ಗುರ್ಜಪನೀತ್ ಸಿಂಗ್ 74ಕ್ಕೆ3)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.