ಕುಲಿಗೋಡ (ಮೂಡಲಗಿ): ಪ್ರತಿ ಟನ್ ಕಬ್ಬಿಗೆ ರೂ 3 ಸಾವಿರ ಬೆಲೆ ನೀಡಬೇಕು ಎಂದು ಆಗ್ರಹಿಸಿ ಗ್ರಾಮ ದಲ್ಲಿ ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಕಬ್ಬು ಬೆಳೆಗಾರರ ಸಂಘ ಸದಸ್ಯರು ನಡೆಸಿರುವ ಧರಣಿ ಸತ್ಯಾಗ್ರಹವು ಗುರುವಾರ ಎರಡನೇ ದಿನಕ್ಕೆ ಮುಂದುವರಿಯಿತು.

ಪ್ರತಿಭಟನಾಕಾರರು ಬುಧವಾರ ರಸ್ತೆಗೆ ಇಳಿದು ರಸ್ತೆ ತಡೆ ಮಾಡಿ ಪ್ರತಿಭಟಸಿದರು.ರೈತ ಸಂಘದ ಜಿಲ್ಲಾ ಅಧ್ಯಕ್ಷ ಬಸವರಾಜ ಮಳಲಿ ಮಾತನಾಡಿ, ಸಕ್ಕರೆ ಕಾರ್ಖಾನೆ ಮಾಲಿಕರು ಟನ್ಗೆ ರೂ 3 ಸಾವಿರ ಪ್ರಕಟಿಸುವವರೆಗೆ ರೈತರು ಕಬ್ಬು ಕಟಾವು ಮಾಡಬಾರದು ಮತ್ತು ಕಾರ್ಖಾನೆಗಳಿಗೆ ಕಬ್ಬು ರವನಿಸಬಾರದು ಎಂದು ಸೂಚಿಸಿದರು.

ಸುಧೀರ ವಂಟಗೋಡಿ, ಸತೀಶ ವಂಟಗೋಡಿ, ವೆಂಕಪ್ಪ ಗುಡಗುಡಿ, ರಮೇಶ ಬಡಕಲ್, ರಾಮಣ್ಣ ಚನ್ನಾಳ, ಜಗದೀಶ ಬೆಳಗಲಿ, ಈರಪ್ಪ ಅಂಗಡಿ, ಜಗದೀಶ ನಾಯಿಕ, ಭೀಮಶಿ ದಾಸರಡ್ಡಿ, ತಮ್ಮಣ್ಣ ದೇವರ, ಢವಳೇಶ್ವರ, ಮನ್ನಾಪುರ, ವೆಂಕಟಾಪುರ ಗ್ರಾಮದ ರೈತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.