ಶುಕ್ರವಾರ, ಜೂನ್ 25, 2021
22 °C

ಕರಡಿ ದಾಳಿ: ಪ್ರಾಂಶುಪಾಲರಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಮೂರು ಕರಡಿಗಳು ನಡೆಸಿದ ದಾಳಿಯಿಂದ ಒಬ್ಬರು ಗಾಯಗೊಂಡ ಘಟನೆ ತಾಲ್ಲೂಕಿನ ಸಿಬಾರದ ಕೇತೇಶ್ವರ ಮಠದ ಹಿಂಭಾಗದ ಬಾಬಾ ಆಶ್ರಮದ ಸಮೀಪ ಭಾನುವಾರ ಬೆಳಿಗ್ಗೆ ನಡೆದಿದೆ.

ಚಳ್ಳಕೆರೆಯ ಪಿ.ಪಂಚಾಕ್ಷರಪ್ಪ (62) ಕರಡಿ ದಾಳಿಗೆ ಒಳಗಾದವರು. ಇವರು ಸದ್ಯ ಚಳ್ಳಕೆರೆ ತಾಲ್ಲೂಕು ಪರಶುರಾಂಪುರದ ಸರ್ವೋದಯ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಪಂಚಾಕ್ಷರಪ್ಪ ತಮ್ಮ ಪತ್ನಿ ದೇವರಾಜಮ್ಮ ಅವರಿಗೆ ಗುಡ್ಡದ ಇಳಿಜಾರು ಪ್ರದೇಶದಲ್ಲಿರುವ ಬಾಬಾ ಆಶ್ರಮದಲ್ಲಿ ಚಿಕಿತ್ಸೆ ಕೊಡಿಸಲು ಶನಿವಾರ ಸಂಜೆ ಆಗಮಿಸಿ ರಾತ್ರಿ ಅಲ್ಲಿಯೇ ತಂಗಿದ್ದರು. ಬೆಳಿಗ್ಗೆ 6.30ರ ಸುಮಾರಿಗೆ ಆಶ್ರಮದ ಗುಡ್ಡದ ಪ್ರದೇಶದಲ್ಲಿ ಔಷಧ ಎಲೆ ತರಲು ತೆರಳುತ್ತಿದ್ದಾಗ ತಾಯಿ ಕರಡಿ ಮತ್ತು ಎರಡು ಮರಿ ಕರಡಿಗಳು ಎದುರಾಗಿವೆ.

 

ಈ ಸಂದರ್ಭದಲ್ಲಿ ತಪ್ಪಿಸಿಕೊಳ್ಳಲಾಗದೆ ನೆಲಕ್ಕೆ ಮುಖ ಮಾಡಿ ಮಲಗಿದ ಪಂಚಾಕ್ಷರಪ್ಪ ಅವರ ತಲೆ ಮತ್ತು ಕೈಕಾಲುಗಳನ್ನು ತಾಯಿ ಕರಡಿ ಪರಚಿದೆ. ಇದರಿಂದ ತಲೆಗೆ ಮತ್ತು ಕೈಕಾಲುಗಳಿಗೆ ತೀವ್ರ ಗಾಯಗಳಾಗಿವೆ.ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಳೆದ ತಿಂಗಳು ನಗರ ಹೊರವಲಯದ ಮಾಳಪ್ಪನಹಟ್ಟಿಯ ಜಮೀನೊಂದರಲ್ಲಿ ಕೆಲಸ ಮಾಡುತ್ತಿದ್ದ ಒಬ್ಬರ ಮೇಲೆ ತಾಯಿ ಕರಡಿ ಮತ್ತು ಎರಡು ಮರಿ ಕರಡಿಗಳು ದಾಳಿ ನಡೆಸಿದ್ದವು.ನಗರ ವ್ಯಾಪ್ತಿಗಳಲ್ಲಿ ನಿರಂತರ ಕರಡಿ ದಾಳಿ ನಡೆಯುತ್ತಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ಇವುಗಳ ಹಾವಳಿ ನಿಯಂತ್ರಿಸಲು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮುದ್ದಾಪುರ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಸೋಮಶೇಖರ್ ಆರೋಪಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.