ಸೋಮವಾರಪೇಟೆ: ಕಾಫಿ ಬೆಳೆಗಾರರು ತಮ್ಮ ತೋಟದಲ್ಲಿ ಬೆಳೆಯುವ ಕರಿಮೆಣಸು ಬೆಳೆಯನ್ನು ಮಾರಾಟ ಮಾಡಲು ಮುಕ್ತ ಮಾರುಕಟ್ಟೆ ಸೌಲಭ್ಯ ಒದಗಿಸಬೇಕೆಂದು ಸರ್ಕಾರವನ್ನು ಆಗ್ರಹಿಸಲು ಸೋಮವಾರಪೇಟೆ ತಾಲ್ಲೂಕು ಕಾಫಿ ಬೆಳೆಗಾರರ ಸಂಘ ನಿರ್ಣಯ ಕೈಗೊಂಡಿದೆ.ಮಂಗಳವಾರ ಇಲ್ಲಿನ ನಂಜಮ್ಮ ಕಲ್ಯಾಣಮಂಟಪದ ಸಭಾಂಗಣದಲ್ಲಿ ನಡೆದ ತಾಲ್ಲೂಕು ಕಾಫಿ ಬೆಳೆಗಾರರ ಸಂಘದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಕಾಫಿ ಬೆಳೆಗಾರರಾದ ಫಾಲಾಕ್ಷ ಅವರು ಮಾತನಾಡಿ, ಕರಿಮೆಣಸು ಬೆಳೆಯನ್ನು ಬೆಳೆಗಾರರು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅವಕಾಶ ಸಿಕ್ಕಿದರೆ ಉತ್ತಮ ಬೆಲೆ ಪಡೆಯಲು ಸಾಧ್ಯವಾಗುತ್ತದೆ ಎಂದರು.

ಆರ್ಎಂಸಿ ರೈತರ ಪರ ಎಂದು ಹೇಳುತ್ತಲೇ ಕರಿಮೆಣಸಿಗೆ ಅದು ತೆರಿಗೆ ವಿಧಿಸುತ್ತಾ ಬಂದಿದೆ. ವ್ಯಾಪಾರಸ್ಥರು ಆರ್ಎಂಸಿ ವಿಧಿಸುವ ತೆರಿಗೆಯನ್ನು ಬೆಳೆಗಾರರ ಮೇಲೆ ಹಾಕುತ್ತಿದ್ದಾರೆ. ಕರಿಮೆಣಸಿಗೆ ಮುಕ್ತ ಮಾರುಕಟ್ಟೆ ವ್ಯವಸ್ಥೆ ಸಿಕ್ಕರೆ ಬೆಳೆಗಾರರಿಗೆ ಕೆ.ಜಿಯೊಂದಕ್ಕೆ ಕನಿಷ್ಠ 10 ರಿಂದ 20 ರೂ. ಗಳಷ್ಟು ಅಧಿಕ ಬೆಲೆ ದೊರಕುತ್ತದೆ ಎಂಬುದನ್ನು ಸಭೆಯ ಗಮನಕ್ಕೆ ತಂದರು.
ಕಾಫಿ ಮಂಡಳಿ ಮಾಜಿ ಸದಸ್ಯ ಬಿ.ಡಿ.ಮಂಜುನಾಥ್ ಮಾತನಾಡಿ, ಆರ್.ಎಂ.ಸಿ ಯು ಕರಿಮೆಣಸು ಬೆಳೆಗೆ ತೆರಿಗೆ ವಿಧಿಸುತ್ತಿರುವ ವ್ಯವಸ್ಥೆಯನ್ನು ರದ್ದುಪಡಿಸಬೇಕೆಂದು ಕೊಡಗಿಗೆ ಮುಖ್ಯಮಂತ್ರಿಗಳು ಭೇಟಿ ನೀಡಿದ ಸಂದರ್ಭ ಮನವಿ ಮಾಡಲಾಗಿತ್ತು.

ಆರ್ಎಂಸಿಯವರು ಕೊಡಗಿನಲ್ಲಿ ಶೇ 1.50 ರಷ್ಟು ಕರಿಮೆಣಸಿಗೆ ತೆರಿಗೆ ಹಾಕುವ ಮೂಲಕ ವಾರ್ಷಿಕವಾಗಿ 2.50 ಕೋಟಿ ರೂ. ಸಂಗ್ರಹಿಸಿದೆ ಎಂದು ಹೇಳುತ್ತದೆ. ಆದರೆ ನಿಜವಾಗಿ ಸಂಗ್ರಹಗೊಳ್ಳುವ ಮೊತ್ತ 10 ಕೋಟಿ ರೂ. ದಾಟುತ್ತದೆ. ಹಾಗಾದರೆ ಉಳಿದ ಹಣ ಎಲ್ಲಿ ಹೋಯಿತು? ಎಂಬುದು ಯಕ್ಷ ಪ್ರಶ್ನೆಯಾಗಿದೆ ಎಂದರು. ಭಾರತದ ಕರಿಮೆಣಸಿನ ಉತ್ಪಾದನೆಯಲ್ಲಿ ಶೇ. 90 ರಷ್ಟು ಪಾಲು ಕೇರಳದಲ್ಲಿ ಬೆಳೆಯುತ್ತದೆ ಎಂದು ಪ್ರಚಾರ ಮಾಡಿ ಕೇಂದ್ರ ಸರ್ಕಾರದ ವಿಶೇಷ ಪ್ಯಾಕೇಜ್ ಹಣವನ್ನು ಹೇರಳವಾಗಿ ಕೇರಳಕ್ಕೆ ಕೊಂಡೊಯ್ಯಲಾಗುತ್ತಿದೆ. ವ್ಯಾಪಾರಸ್ಥರು ಕೊಡಗಿನಲ್ಲಿ ಖರೀದಿಸಿದ ಕರಿಮೆಣಸನ್ನು ಕೇರಳದಲ್ಲಿ ಮಾರಾಟ ಮಾಡುವುದರ ಮೂಲಕ ಕೇರಳದಲ್ಲಿ ಅತಿ ಹೆಚ್ಚು ಕರಿಮೆಣಸು ಬೆಳೆಯಲಾಗುತ್ತದೆ ಎಂಬ ವರದಿ ನೀಡುವ ದೊಡ್ಡ ಮಟ್ಟದ ಲಾಬಿಯೇ ಇದೆ. ಕೇರಳದಲ್ಲಿ ಕರಿಮೆಣಸಿನ ಉತ್ಪಾದನೆ ಅಧಿಕವಾಗಿದೆ ಎಂದು 320 ಕೋಟಿ ರೂ. ಗಳ ಇಡುಕ್ಕಿ ಪ್ಯಾಕೇಜ್, 200 ಕೋಟಿ ರೂ. ವಯನಾಡ್ ಪ್ಯಾಕೇಜ್ ಕೇರಳಕ್ಕೆ ಹೋಗುತ್ತಿದೆ ಎಂಬ ಮಾಹಿತಿ ನೀಡಿದರು.

ಕೊಡಗಿನಲ್ಲಿ ಕರಿಮೆಣಸಿನ ಬೆಳೆಗೆ ಕಾಯಕಲ್ಪ ಸಿಗಲು ಮುಕ್ತ ಮಾರುಕಟ್ಟೆ ವ್ಯವಸ್ಥೆ ಅನಿವಾರ್ಯವಾಗಿದೆ. ಆದ್ದರಿಂದ ಕರಿಮೆಣಸಿನ ವ್ಯಾಪಾರಕ್ಕೆ ಆರ್.ಎಂ.ಸಿ ಮಧ್ಯವರ್ತಿಯಾಗಿರುವುದನ್ನು ತಪ್ಪಿಸಲು ಉಗ್ರ ಹೋರಾಟ ನಡೆಸಲು ಬೆಳೆಗಾರರ ಸಂಘವು ಮುಂದಾಗಬೇಕೆಂದು ಹೇಳಿದರು. ಇತರ ಉದ್ದಿಮೆಗಳಂತೆ ಕಾಫಿ ಉದ್ಯಮವೂ ಕಾರ್ಮಿಕರ ಸಮಸ್ಯೆ ಎದುರಿಸುತ್ತಿದೆ. ಕಾಫಿಯಲ್ಲಿ ಬೆಳೆಗಾರ ಹಾಗೂ ಕಾರ್ಮಿಕ ನಾಣ್ಯದ ಎರಡು ಮುಖಗಳಿದ್ದಂತೆ. ಬೆಳೆಗಾರರು ಕಾಫಿ ತೋಟದ ನಿರ್ವಹಣೆಯಲ್ಲಿ ಶಿಸ್ತನ್ನು ರೂಢಿಸಿಕೊಳ್ಳಬೇಕು. ಕಾರ್ಮಿಕರಿಗೆ ನೀಡುವ ಸಂಬಳಕ್ಕೆ ಸೂಕ್ತವಾಗಿ ಕೆಲಸ ತೆಗೆದುಕೊಳ್ಳಬೇಕು. ಕಾಫಿ, ಕಿತ್ತಳೆ ಹಾಗೂ ಕರಿಮೆಣಸಿನ ಫಸಲನ್ನು ಗುತ್ತಿಗೆ ನೀಡುವ ಪದ್ಧತಿಯನ್ನು ನಿಲ್ಲಿಸದಿದ್ದರೆ ಕಾಫಿ ತೋಟಗಳನ್ನು ಹೇಗೆ ಉತ್ತಮವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದವರು ಪ್ರಶ್ನಿಸಿದರು.

ತಾಲ್ಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಎಂ.ಸುರೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬ ಬೆಳೆಗಾರರಿಗೂ ತಾವು ಎದುರಿಸುತ್ತಿರುವ ಸಮಸ್ಯೆಗಳ ಅರಿವಿದೆ ಎಂದರು. ಆದರೆ ಸ್ವಹಿತ ಬಿಟ್ಟು ಸಮುದಾಯಕ್ಕೆ ಉಪಯೋಗವಾಗುವ ನಿಟ್ಟಿನಲ್ಲಿ ಹೋರಾಟಕ್ಕೆ ಮುಂದಾಗಬೇಕಾಗಿದೆ. ಕೆಲವೇ ಮಂದಿ ಬೆಳೆಗಾರರ ಹೋರಾಟದಿಂದಾಗಿ ಸಿಕ್ಕುವ ಸೌಲಭ್ಯಗಳನ್ನು ಸಂತೋಷದಿಂದ ಅನುಭವಿಸುವ ಪ್ರವೃತ್ತಿ ಕೈಬಿಟ್ಟು ಎಲ್ಲರೊಂದಿಗೆ ಕೈಜೋಡಿಸಿ ಹೋರಾಟ ನಡೆಸಬೇಕೆಂಬ ಮನೋಭಾವ ರೂಢಿಸಿಕೊಳ್ಳಬೇಕು. ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಕಾಫಿ ಬೆಳೆಗಾರರ ಸಂಘಗಳು ಸತತ ಹೋರಾಟ ನಡೆಸದಿದ್ದರೆ ಸಾಲ ಮನ್ನಾದಂತಹ ಸೌಲಭ್ಯ ದೊರಕುತ್ತಿರಲಿಲ್ಲ ಎಂದು ಹೇಳಿದರು.

ಕಾಫಿ ಬೆಳೆಗಾರರಿಗೆ ವಿವಿಧ ಪ್ಯಾಕೇಜುಗಳಿಂದ ಹಲವಾರು ಸೌಲಭ್ಯಗಳು ಸಿಗುತ್ತವೆ ಎಂಬ ಮಾತು ಸುಳ್ಳು. ಸಂಬಂಧಿಸಿದ ಅಧಿಕಾರಿಗಳಿಗೆ ಕಮಿಷನ್ ನೀಡುವ ಬೆಳೆಗಾರರಿಗೆ ಮಾತ್ರ ಸಬ್ಸಿಡಿ ಸಿಗುವ ಪರಿಸ್ಥಿತಿಯಿದೆ ಎಂದು ವಕೀಲ ಬಿ.ಎಸ್.ಸುದೀಪ್ ಹೇಳಿದರು. ಮಧ್ಯವರ್ತಿಗಳು ಹಾಗೂ ಬಾಡಿಗೆ ವಾಹನಗಳ ಮಾಫಿಯಾದಿಂದ ಬೆಳೆಗಾರರು ಕಾರ್ಮಿಕರ ಸಮಸ್ಯೆ ಎದುರಿಸುವಂತಾಗಿದೆ ಎಂದು ಬೆಳೆಗಾರ ಫಾಲಾಕ್ಷ ಸಲಹೆ ನೀಡಿದರು. ಕಾಫಿ ತೋಟದ ಶಿಸ್ತುಬದ್ಧ ನಿರ್ವಹಣೆ ಹಾಗೂ ಕಾರ್ಮಿಕರಿಂದ ಗುಣಮಟ್ಟದ ಕೆಲಸ ಮಾಡಿಸುವ ಬಗ್ಗೆ ಯೋಚಿಸಬೇಕಾಗಿದೆ ಎಂದು ಎ.ಡಿ.ಶುಭಾಕರ್ ಹೇಳಿದರು.

ಬೆಳೆಗಾರರಾದ ಸಿಂಗೂರು ಪೂವಯ್ಯ, ಸಂಘದ ಕಾರ್ಯದರ್ಶಿ ಎಸ್.ಎನ್.ಸೋಮಶೇಖರ್, ಮುದ್ದಪ್ಪ, ಬಗ್ಗನ ತಮ್ಮಯ್ಯ, ಅನಂತರಾಮು ಸಂಘಟನಾತ್ಮಕ ಹೋರಾಟ ನಡೆಸುವ ಕುರಿತು ಸಲಹೆ ನೀಡಿದರು. ಡಾ.ಕೆ.ಎ.ಅಪ್ಪಾಜಿ, ಜಿ.ಕೆ.ರುದ್ರಪ್ಪ, ಬಸಪ್ಪ, ತಾಕೇರಿ ಕುಶಾಲಪ್ಪ, ಎಸ್.ಜೆ.ದೇವದಾಸ್, ಬಿ.ಎಸ್.ಸಿದ್ದಪ್ಪ, ಖಾಲಿಸ್ತಾ ಡಿಸಿಲ್ವಾ ಹಾಗೂ ಸುಧೀರ್ ಮೊದಲಾದವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.