ಶನಿವಾರ, 13 ಸೆಪ್ಟೆಂಬರ್ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಮನೆಯಲ್ಲಿ ಸುಖ ಸಂತೋಷ ನೆಮ್ಮದಿ ಕಂಡುಬರಲಿದೆ
Published 13 ಸೆಪ್ಟೆಂಬರ್ 2025, 0:23 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಯಾವುದೇ ಮುಜುಗರ ಅಥವಾ ಹೆದರಿಕೆ ಇಲ್ಲದೆ ಸಮಯವನ್ನು ಬಳಸಿಕೊಳ್ಳಲು ಯತ್ನ ಮಾಡಿ. ಸೃಜನಶೀಲ ಯೋಜನೆಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವಿರಿ. ಚಿಂತೆ ಮತ್ತು ತೊಂದರೆಗಳು ದೂರಾಗಲಿವೆ.
ವೃಷಭ
ಪ್ರಗತಿಯನ್ನು ಬಹಳಷ್ಟು ಜಾಗದಲ್ಲಿ ಪ್ರಶಂಸಿಸುತ್ತಿರುವುದರಿಂದ ಕಾರ್ಯಕ್ಷೇತ್ರದಲ್ಲಿ ಹುಮ್ಮಸ್ಸು ಬರುವುದರ ಜತೆಗೆ ವೃತ್ತಿಪರ ಶತ್ರುಗಳ ಸಂಖ್ಯೆ ಗಗನ ಮುಟ್ಟಲಿದೆ. ಫೋಟೊ ಸ್ಟುಡಿಯೊದವರಿಗೆ ಲಾಭ ಇರಲಿದೆ.
ಮಿಥುನ
ಭವಿಷ್ಯದ ಕುರಿತು ಗಂಭೀರ ಚರ್ಚೆ ನಡೆಯುವುದು. ಕೈಗಾರಿಕಾ ಕ್ಷೇತ್ರದಲ್ಲಿ ಲಾಭ ಪಡೆಯುವಿರಿ. ಮಗಳಿಗೆ ಆಪ್ತರ ಸಹಾಯದಿಂದ ಉದ್ಯೋಗ ಲಭಿಸಲಿದೆ. ವರ್ಗಾವಣೆಗಾಗಿ ಮಾಡಿದ ಭಾರಿ ಪ್ರಯತ್ನ ವ್ಯರ್ಥವಾಗುವುದು.
ಕರ್ಕಾಟಕ
ತಾಂತ್ರಿಕ ವಿದ್ಯಾರ್ಥಿಗಳು ವಿನೂತನ ಯೋಜನೆ ಮಂಡಿಸುವಲ್ಲಿ ಯಶಸ್ವಿಯಾಗುವಿರಿ. ಮನೆಯವರ ಆರೋಗ್ಯದಲ್ಲಿ ಹೊಸ ಔಷಧಿಯಿಂದ ಹಂತ ಹಂತದ ಸುಧಾರಣೆಯನ್ನು ಕಂಡು ಮನಸ್ಸಿಗೆ ನೆಮ್ಮದಿ ಇರುವುದು.
ಸಿಂಹ
ನ್ಯಾಯವಾದಿಗಳು ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು ಕಾಣುವಿರಿ. ಒಡಹುಟ್ಟಿದವರಲ್ಲಿ ಭಾವನಾತ್ಮಕ ಸಂಬಂಧಗಳನ್ನು ಬೆಳೆಸಲು ಸೂಕ್ತ ಕಾಲ. ಕಾಫಿ ಹಾಗೂ ಏಲಕ್ಕಿ ಬೆಳೆಗಾರರು ಉತ್ತಮ ಫಸಲು ನಿರೀಕ್ಷಿಸಬಹುದು.
ಕನ್ಯಾ
ಅಧಿಕಾರಿ ವರ್ಗದವರಲ್ಲಿ ಹಾಗೂ ಸಹಚರರಲ್ಲಿ ವೈಮನಸ್ಸು ದೂರಾಗಲಿದೆ. ಶ್ರೀದುರ್ಗೆಯನ್ನು ಮನಃಪೂರ್ವಕವಾಗಿ ಪೂಜಿಸಿಕೊಂಡು ಕೆಲಸವನ್ನು ಮುಂದುವರಿಸಿ ಹೆಚ್ಚಿನ ಆದಾಯವನ್ನು ಕಾಣುವಿರಿ.
ತುಲಾ
ವ್ಯವಹಾರಗಳಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರಿಂದ ಅಭಿವೃದ್ಧಿಯನ್ನು ನೋಡಬಹುದು. ಅವಿವಾಹಿತರಿಗೆ ಮಾತೃ ವರ್ಗದ ಕಡೆಯಿಂದ ಅಪೇಕ್ಷಿಸಿದ ರೀತಿಯಲ್ಲಿಯೇ ಸಂಬಂಧ ಅರಸಿ ಬರುವುದು.
ವೃಶ್ಚಿಕ
ಮಕ್ಕಳು ಜೀವನದಲ್ಲಿ ಈ ಹಂತವನ್ನು ತಲುಪಿರುವುದನ್ನು ಯೋಚಿಸಿಕೊಂಡು ನೆಮ್ಮದಿ ಪಡುವಂತಾಗುವುದು. ಆರ್ಥಿಕವಾಗಿ ಸಾಕಷ್ಟು ಸಂಪಾದನೆಯಾಗುವುದರಿಂದ ಖರ್ಚಿಗೇನೂ ಯೋಚನೆ ಇರುವುದಿಲ್ಲ.
ಧನು
ವೈದ್ಯರ ಸಲಹೆಯಂತೆ ಆಹಾರ ಸೇವನೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗಬಹುದು. ಸ್ವಂತವಾಗಿ ಉದ್ಯೋಗ ಮಾಡುವವರು ಪ್ರಗತಿ ಕಾಣಲಿದ್ದೀರಿ. ಆಧ್ಯಾತ್ಮಿಕ ಚಿಂತನೆಗಳಿಂದ ಮಾನಸಿಕ ನೆಮ್ಮದಿ ಪ್ರಾಪ್ತಿ.
ಮಕರ
ಎಂಜಿನಿಯರಿಂಗ್‌ ಕ್ಷೇತ್ರದಲ್ಲಿರುವರಿಗೆ ಅವಕಾಶಗಳೊಂದಿಗೆ ಹೆಸರಾಂತ ಕಂಪೆನಿಯಲ್ಲಿ ಕೆಲಸ ಸಿಗುವ ಸಾಧ್ಯತೆಗಳಿವೆ. ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವ ಬಗ್ಗೆ ಯೋಚಿಸಿ. ಕಾರ್ಯಗಳು ಕೂಡಿ ಬರಲಿವೆ.
ಕುಂಭ
ಸ್ವಲ್ಪ ಜಾಗ್ರತೆ ವಹಿಸಿದಲ್ಲಿ ಕೈಗೊಂಡ ಪೂರ್ವನಿಯೋಜಿತ ಕಾರ್ಯಗಳೆಲ್ಲಾ ಉತ್ತಮ ರೀತಿಯಲ್ಲಿ ನಡೆದು ಹೋಗುವುದು. ಮಕ್ಕಳ ಆರೋಗ್ಯದಲ್ಲಿ ಏರು-ಪೇರು ಆಗಬಹುದು
ಮೀನ
ಮನೆಯಲ್ಲಿ ಸುಖ ಸಂತೋಷ ನೆಮ್ಮದಿ ಕಂಡುಬರಲಿದೆ. ಅನವಶ್ಯಕವಾಗಿ ಮನಸ್ಸಿನಲ್ಲಿ ಇಟ್ಟುಕೊಂಡಿರುವ ಅನುಮಾನವನ್ನು ತೆಗೆದುಹಾಕಿ. ಮನಸ್ಸಿಗೆ ಹಿತ ಅನುಭವಗಳನ್ನು ಹೊಂದುವಿರಿ.
ADVERTISEMENT
ADVERTISEMENT