ಭಾನುವಾರ, ಮೇ 16, 2021
22 °C

ಕರ್ನಾಟಕ ಎನ್‌ಸಿಸಿ ತಂಡಕ್ಕೆ ಸನ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ದೆಹಲಿಯಲ್ಲಿ ಇತ್ತೀಚೆಗೆ ನಡೆದ ಅಖಿಲ ಭಾರತ ಥೇಲ್ ಸೈನಿಕ ಶಿಬಿರದಲ್ಲಿ ಭಾಗವಹಿಸಿದ ಕರ್ನಾಟಕ ಎನ್‌ಸಿಸಿ ತಂಡವು ರಾಷ್ಟ್ರಮಟ್ಟದ ಪ್ರಥಮ ಸ್ಥಾನ ಗಳಿಸಿ ರಾಷ್ಟ್ರ ಮನ್ನಣೆ ಪಡೆದಿದೆ.

ನಗರದ ಸೋಲಾಪುರ ರಸ್ತೆಯ ಎನ್‌ಸಿಸಿ ಕಚೇರಿ ಆವರಣದಲ್ಲಿ ಗುರುವಾರ ಪ್ರಥಮ ಸ್ಥಾನ ಪಡೆದ ಈ ತಂಡದ ಸದಸ್ಯರಿಗೆ ಸ್ವಾಗತ ಮತ್ತು ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.ಕರ್ನಾಟಕ, ಗೋವಾ ಎನ್.ಸಿ.ಸಿ. 36 ನಿರ್ದೇಶನಾಲಯದ ಗ್ರೂಪ್ ಕಮಾಂಡರ್ ಅಶೋಕ ಎಸ್.ಇಂಗಳೇಶ್ವರ ಮಾತನಾಡಿ, 2001ರ ನಂತರ ಕರ್ನಾಟಕಕ್ಕೆ ಪ್ರಥಮ ಸ್ಥಾನ ಲಭಿಸಿದೆ. ಆಯ್ಕೆಯಲ್ಲಿ ಪಾರದರ್ಶಕತೆ, ವಿದ್ಯಾರ್ಥಿಗಳ ಶ್ರದ್ಧೆ ಮತ್ತು ಪರಿಶ್ರಮ ಹಾಗೂ ಉತ್ತಮ ಮಾರ್ಗದರ್ಶನ ರಾಷ್ಟ್ರ ಮಟ್ಟದ ಪ್ರಶಸ್ತಿ ಪಡೆಯಲು ಕಾರಣವಾಗಿದೆ ಎಂದು ಹೇಳಿದರು.ಪ್ರತಿವರ್ಷ ನವದೆಹಲಿಯಲ್ಲಿ ಅಖಿಲ ಭಾರತ ಥೇಲ್ ಸೈನಿಕ ಶಿಬಿರವನ್ನು ಆಯೋಜಿಸಿ ಎನ್.ಸಿ.ಸಿ. ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಎಲ್ಲ ವಿಭಾಗದಲ್ಲಿ ಸರ್ವಾಂಗೀಣ ಪ್ರದರ್ಶನ ತೋರಿದ ತಂಡ ಪ್ರಥಮ ಸ್ಥಾನ ನೀಡಿ ರಾಷ್ಟ್ರ ಮನ್ನಣೆ ನೀಡಲಾಗುತ್ತದೆ.2011 ಸೆಪ್ಟಂಬರ್ 2ರಿಂದ13ರವರೆಗೆ ನವದೆಹಲಿಯ ಗ್ಯಾರಿಸನ್ ಪರೇಡ್ ಗ್ರೌಂಡ್‌ನಲ್ಲಿ ಜರುಗಿದ ಅಖಿಲ ಭಾರತ ಥೇಲ್ ಸೈನಿಕ ಕ್ಯಾಂಪ್‌ನಲ್ಲಿ ಕರ್ನಾಟಕ36 ಎನ್.ಸಿ.ಸಿ. ಬೆಟಾಲಿಯನಿನ್ 40 ಹುಡುಗರು ಭಾಗವಹಿಸಿ ಆರೋಗ್ಯ ಮತ್ತು ಹೈಜಿನ್, ಆಬಸ್ಟ್ಯಾಕಲ್,  ಕೋರ್ಸ್, ಜನರಲ್ ಶೂಟಿಂಗ್, ಅಡ್ವಾನ್ಸ್ಡ್ ಶೂಟಿಂಗ್, ಮ್ಯಾಪ್ ರೀಡಿಂಗ್, ಜಡ್ಜಿಂಗ್ ಡಿಸ್ಟಂಸ್, ಲೈನ್ ಏರಿಯಾ, ಒಳಗೊಂಡಂತೆ ವಿವಿಧ ಸ್ಪರ್ಧೆಗಳಲ್ಲಿ ಸರ್ವಾಂಗೀಣ ಪ್ರದರ್ಶನ ತೋರಿ ರಾಷ್ಟ್ರಮಟ್ಟದಲ್ಲಿ ಈ ತಂಡವು ಪ್ರಥಮ ಸ್ಥಾನ ಪಡೆದಿದೆ.ಲೆ.ಡಿ.ಬಿ.ಮುಗದಳ್ಳಿಮಠ ಅವರ ನೇತೃತ್ವದಲ್ಲಿ ಪ್ರಥಮ ಸ್ಥಾನ ಪಡೆದ ಕರ್ನಾಟಕ ಎನ್.ಸಿ.ಸಿ36 ತಂಡದಲ್ಲಿ ವಿಜಾಪುರ, ಗುಲ್ಬರ್ಗ,ಬಳ್ಳಾರಿ, ಬೆಳಗಾವಿ, ದಾವಣಗೆರೆ, ತುಮಕೂರು, ಮೈಸೂರು, ಕೋಲಾರ, ಬೆಂಗಳೂರು ಜಿಲ್ಲೆಯ ವಿದ್ಯಾರ್ಥಿಗಳು ಒಳಗೊಂಡಿದ್ದು, ಒಟ್ಟಾರೆ 40 ವಿದ್ಯಾರ್ಥಿಗಳು ನವದೆಹಲಿಯ ಶಿಬಿರದಲ್ಲಿ ಭಾಗವಹಿಸಿದ್ದರು. ಒಟ್ಟು 11ಚಿನ್ನದ ಪದಕ, 2 ಬೆಳ್ಳಿಯ ಪದಕ, 08 ಕಂಚಿನ ಪದಕವನ್ನು ಅವರು ಪಡೆದಿದ್ದಾರೆ.

ಕಾರ್ಯಕ್ರಮದಲ್ಲಿ ಕರ್ನಲ್ ಎಸ್.ಎಲ್.ಕುಂಬಾರ, ಸಹ ಲೆ.ಕರ್ನಲ್ ಕ್ರಮ ದಾತೆ, ಪಿ.ಡಿ.ನಿಡಗುಂದಿ, ಜಿ.ಎಂ.ಮೇಟಿ, ಬಿರಾದಾರ ಕ್ಯಾ.ಹಮೀದ ಇತರರು ಭಾಗವಹಿಸಿದ್ದರು.ವಿಚಾರಸಂಕಿರಣ ಇಂದು

ವಿಜಾಪುರ: ಜಿಲ್ಲೆಯ ಮುದ್ದೇಬಿಹಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಮಾಜವಾದಿ ಅಧ್ಯಯನ ಕೇಂದ್ರ, ಗ್ರಾಮ ಸ್ವರಾಜ್ ಆಂದೋಲನ, ವಿಶ್ವ ಚೇತನ ಸಾಮಾಜಿಕ ಸೇವಾ ಸಂಸ್ಥೆ ಹಾಗೂ ಮಾನವ ವಿಕಾಸ ಕೇಂದ್ರದ ಆಶ್ರಯದಲ್ಲಿ ಶ್ರೇಷ್ಠ ಸಾಹಿತಿ ದಿ. ದಿನಕರ ದೇಸಾಯಿ ಅವರ ಜನ್ಮ ಶತಮಾನೋತ್ಸವ ನಿಮಿತ್ತ `ಸರ್ವರಿಗೂ ಸಮಪಾಲು ಸಮಬಾಳು~ ಎಂಬ ವಿಚಾರ ಸಂಕಿರಣವನ್ನು ಇದೇ 16 ರಂದು ಬೆಳಿಗ್ಗೆ 10ಕ್ಕೆ ಹಮ್ಮಿಕೊಳ್ಳಲಾಗಿದೆ.ಮಡಿವಾಳೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭುಗೌಡ ಪಾಟೀಲ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.