ಕರ್ನಾಟಕ ಬಂದ್

7

ಕರ್ನಾಟಕ ಬಂದ್

Published:
Updated:

ಸಿಕ್ಕಾಪಟ್ಟೆ ಸಿಕ್ಕಾಪಟ್ಟೆ

ಜೋರಾಗಿತ್ತು ಬಂದ್ ಗಲಾಟೆ

ಬೇಕಿತ್ತಾ ಸರ್ಕಾರಕ್ಕೆ

ಶಾಂತಿ ಕದಡುವ ಈ ಭರಾಟೆ

ಮೊಕದ್ದಮೆಯ

ಅಡಕತ್ತರಿಯಿಂದ

ಸಿಎಂಗೆ ಭಂಗ

ರಾಜಕೀಯ ಯುದ್ಧ

ಆರಂಭ ಸೂಪರ್ರೋ ರಂಗ...

ದಿನಸಿ, ಪೆಟ್ರೋಲ್, ಕರೆಂಟ್

ತುಟ್ಟಿಯ ಹಾಹಾಕಾರ

ರಾಜ್ಯ ಲೂಟಿಯಾದರೂ

ಜನಪ್ರತಿನಿಧಿಗಳ ತಾತ್ಸಾರ

ನಾಗರಿಕ ಆಸ್ತಿ

ಧ್ವಂಸವಾಗುತ್ತಿದ್ದರೂ

ನಿಲ್ಲದ ಆರ್ಭಟ

ಬಂದ್ ನೆಪದಲ್ಲೇ

ಬೇಳೆ ಬೇಯಿಸಿಕೊಳ್ಳುವ

ತಾಕಲಾಟ ಹಂಸಕ್ಷೀರ ನ್ಯಾಯದ

ಈ ಪರಿ,

ಕೆಲವರಿಗಂತು ಕಣ್ಣುರಿ

ದಿಢೀರ್ ಬದಲಾವಣೆಯಿಂದ

ಶ್ರೀಸಾಮಾನ್ಯನಿಗೆ ಕಿರಿಕಿರಿ

ಅಧಿಕಾರ ದುರುಪಯೋಗದಿಂದ

ನೀತಿಗಳೆಲ್ಲವೂ ಗೌಣ 

ಪ್ರಜೆ ಜಾಗೃತನಾದರೆ ಮಾತ್ರ

ಆದರ್ಶ ರಾಜ್ಯ ನಿರ್ಮಾಣ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry