ನೃತ್ಯ ಮತ್ತು ಪೂರಕ ಕಲೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿರುವ ಕಲಾಸಿಂಧು ನೃತ್ಯ ಅಕಾಡೆಮಿಯು ಶನಿವಾರ (ಮಾ.3)ರಂದು ತನ್ನ 5ನೇ ನಿರಂತರ ನರ್ಮದಾ ನೃತ್ಯೋತ್ಸವವನ್ನು ಹಮ್ಮಿಕೊಂಡಿದೆ.

ಕಿರಿಯ ಪ್ರತಿಭೆಗಳಿಗೆ ಹಾಗೂ ಕಲಾ ರಸಿಕರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ನೃತ್ಯೋತ್ಸವ ನಡೆಯುತ್ತಿದ್ದು, ಶನಿವಾರ ಬೆಳಿಗ್ಗೆ 10ಕ್ಕೆ `ಕಾವೇರಿ ದಾಟಿ ಕಲೆ~- ತಾಂಜಾವೂರು ಹಾಗೂ ಕರ್ನಾಟಕ ಕಲೆ ವಿಷಯವಾಗಿ ಇನ್ಫೋಸಿಸ್ನ ಲೀಡರ್ಶಿಪ್ ಕೋಚ್ ಪ್ರದೀಪ್ ಕುಮಾರ್ ಚಕ್ರವರ್ತಿ ಸಂವಾದ ನಡೆಸಿಕೊಡಲಿದ್ದಾರೆ.

ನೃತ್ಯಗಾತಿ ನರ್ಮದಾ ಅವರ ಸ್ಮರಣಾರ್ಥವಾಗಿ ದೆಹಲಿಯ ಸ್ವಪ್ನ ಸುಂದರಿ ಅವರು `ವಿಲಾಸಿನಿ ನಾಟ್ಯಂ~ ನೃತ್ಯ ಕಾರ್ಯಕ್ರಮವನ್ನು ಸಂಜೆ 6ಕ್ಕೆ ನಡೆಸಿಕೊಡಲಿದ್ದಾರೆ.
ಸ್ಥಳ: ಶಿವರಾತ್ರೀಶ್ವರ ಸಭಾಂಗಣ, 1ನೇ ಮುಖ್ಯರಸ್ತೆ, ಜಯನಗರ 8ನೇ ಬ್ಲಾಕ್ನಲ್ಲಿ ಹಮ್ಮಿಕೊಳ್ಳಲಾಗಿದೆ.

ಪೂರ್ಣಿಮಾ ಗುರುರಾಜ್: 16 ವರ್ಷಗಳ ಕಾಲ ಅಮೆರಿಕದ ಬಾಸ್ಟನ್ ನಗರದಲ್ಲಿ ಪಲ್ಲವಿ ನೃತ್ಯ ಶಾಲೆ ಸ್ಥಾಪಿಸಿ ಹಲವಾರು ಮಕ್ಕಳಿಗೆ ನೃತ್ಯ ಶಿಕ್ಷಣ ನೀಡಿದ ಪೂರ್ಣಿಮಾ ಅವರು 2007ರಲ್ಲಿ ಕಲಾ ಸಿಂಧು ಸಂಸ್ಥೆಯನ್ನು ಸ್ಥಾಪಿಸಿದರು. ಕಲಾ ಸಿಂಧು ಕೇವಲ ನೃತ್ಯವಷ್ಟೇ ಅಲ್ಲದೆ, ಅದಕ್ಕೆ ಪೂರಕ ಕಲೆಗಳಾದ ಸಂಗೀತ, ಸಂಸ್ಕೃತ ಹಾಗೂ ಚಿತ್ರಕಲೆಗೂ ಪ್ರೋತ್ಸಾಹ ನೀಡುತ್ತಾ ಬಂದಿದೆ.

ನಿರಂತರ ನರ್ಮದಾ ನೃತ್ಯೋತ್ಸವ ಕಾರ್ಯಕ್ರಮವನ್ನು ನೃತ್ಯ ಶಿಲ್ಪ ಸೆಂಟರ್ ಆಫ್ ಒಡಿಸ್ಸಿ ಡ್ಯಾನ್ಸ್ನ ನಿರ್ದೇಶಕ ಕ್ಷಮಾ ರಾವ್ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ವಸತಿ ಸಚಿವ ವಿ.ಸೋಮಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಕಾರಜೋಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಮನು ಬಳಿಗಾರ್ ಮತ್ತು ನಾಟ್ಯಲಕ್ಷಣ ಸಂಸ್ಥೆಯ ನಿರ್ದೇಶಕ ಉಷಾ ವೆಂಕಟೇಶ್ವರನ್ ಭಾಗವಹಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.