ಭಾನುವಾರ, ಜೂನ್ 20, 2021
20 °C

ಕಲಾ ಆರಾಧನೆಗೆ ಬಸವ ಅಂಬರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೊದಲಿನಿಂದಲೂ ಕರಕುಶಲ ವಸ್ತ್ರ, ವಸ್ತುಗಳೆಂದರೆ ಪ್ರೀತಿ ಇತ್ತು. ಸಂಗ್ರಹಿಸುತ್ತಿದ್ದೆ. ಬಹುತೇಕ ಜನರು ನೋಡಿದಾಗ ಕೊಳ್ಳುವ ಇರಾದೆ ವ್ಯಕ್ತ ಪಡಿಸುತ್ತಿದ್ದರು. ಹಾಗೆಯೇ ಮಾರಾಟದ ವ್ಯವಸ್ಥೆಯೂ ಮಾಡಿದೆ. `ಬಸವ ಅಂಬರ~ ಹುಟ್ಟಿದ್ದು ಹೀಗೆ. ವೆಂಕಟರಾಮ ರೆಡ್ಡಿ ಅವರು ತಮ್ಮ ಮಳಿಗೆಯ ಬಗ್ಗೆ ಹೇಳುತ್ತಿದ್ದರು.ಇದು ಸಂಪ್ರದಾಯ, ಆತ್ಮ ಹಾಗೂ ಹೃದಯಗಳ ಮೇಳವಾಗಿದೆ. ಬಸವನಗುಡಿಯಲ್ಲಿ ಇರುವುದರಿಂದ `ಬಸವ~ ಎಂಬ ಹೆಸರನ್ನು ನೀಡಲಾಯಿತು. `ಬಸವ ಅಂಬರ~ ಮಳಿಗೆಯು ಪರಿಪೂರ್ಣವಾಗಿ ಕರಕುಶಲ ವಸ್ತುಗಳದ್ದೇ ಮಳಿಗೆಯಾಗಿದೆ. ಇಲ್ಲಿ ಪಾಟರಿ, ಪೇಂಟಿಂಗ್, ಕಾಶ್ಠ ಶಿಲ್ಪ, ಪೀಠೋಪಕರಣ ಎಲ್ಲವೂ ಲಭ್ಯ. ಆದರೆ ಎಲ್ಲವೂ ಕೈಕೌಶಲದಿಂದಲೇ ಆಗಿರುವಂಥದ್ದು.ಇಲ್ಲಿ ಯಾವುದೂ ವ್ಯಾಪಾರಕ್ಕಾಗಿ ಅಲ್ಲವೇ ಅಲ್ಲ. ಕಲಾ ಆರಾಧನೆಗೆಂದೇ ಇದೆ. ಹಾಗಾಗಿ ಬೆಲೆ ಸ್ವಲ್ಪ ಹೆಚ್ಚೆನಿಸಬಹುದು. ಆದರೆ ಇವು ಮಾರುಕಟ್ಟೆಯಲ್ಲಿ ಯಂತ್ರಗಳಿಂದ ನಿರ್ಮಾಣವಾದವಲ್ಲ. ಇವುಗಳಲ್ಲಿ ಕಲಾವಿದರ ಶ್ರದ್ಧೆ ಇದೆ. ಎಲ್ಲ ಕರಕುಶಲ ವಸ್ತುಗಳಲ್ಲೂ ಆ ಕಲಾವಿದನ ಅನುಭೂತಿಯೇ ಇರುತ್ತದೆ. ಅದನ್ನು ಕೈಯಿಂದಲೇ ಮಾಡುವುದರಿಂದ ಅದರಲ್ಲಿ ಆತ್ಮ ಹೃದಯಗಳೆರಡೂ ಇರುತ್ತವೆ. ಈ ಕಲಾವಿದ ಅನುಭೂತಿಗೆ ಬೆಲೆ ಕಟ್ಟಲಾಗದು. ಬೆಲೆ ಕಟ್ಟಬಹುದಾಗಿರುವುದು ಕೇವಲ ಉತ್ಪನ್ನಕ್ಕೆ ಎನ್ನುತ್ತಾರೆ ಅವರು.`ಬಸವ ಅಂಬರ~ಕ್ಕೆ ಭೇಟಿ ನೀಡುವುದೇ  ಒಂದು ಅನುಭವ ಎಂದು ಹೇಳುವ ವೆಂಕಟರಾಮ ರೆಡ್ಡಿ ಈ ಬೇಸಿಗೆಗೆ ವಿಶೇಷ ಸಂಗ್ರಹವನ್ನು ತರಿಸಲಾಗಿದೆ ಎನ್ನುತ್ತಾರೆ.ಗಾಢ ವರ್ಣಗಳಲ್ಲಿ ಬಿಸಿಲನ್ನು ತಡೆಗಟ್ಟುವ, ಮನೆ ತಂಪಾಗಿಸುವ ವಿಶೇಷ ಲೆನಿನ್‌ಗಳು ಇಲ್ಲಿವೆ. ಅಪ್ಪಟ ಹತ್ತಿ ಜವಳಿ ಇಲ್ಲಿಯ ವಿಶೇಷ. ಬೇಸಿಗೆಗೆಂದೇ ಕೈಮಗ್ಗದ ಸೀರೆಗಳಿಗೆ ಕಸೂತಿ ಕೆಲಸ ಮಾಡಿರುವ ವಿಶೇಷ ಸಂಗ್ರಹವನ್ನೂ ಪ್ರದರ್ಶನ ಹಾಗೂ ಮಾರಾಟಕ್ಕೆ ಇರಿಸಲಾಗಿದೆ ಎನ್ನುತ್ತಾರೆ ಅವರು.ಪ್ರದರ್ಶನದ ಆರಂಭಕ್ಕೆ ಸೂಫಿ ಸಂಗೀತದ ಕಾರ್ಯಕ್ರಮವನ್ನೂ ಏರ್ಪಡಿಸಿದ್ದರು. ಸೂಫಿ ಸಂಗೀತದಲ್ಲಿ ಭಕ್ತ ದೇವರೊಂದಿಗೆ ನೇರ ಸಂಪರ್ಕದಲ್ಲಿರುತ್ತಾನೆ. ಅಲ್ಲಿಯೂ ಆತ್ಮ ಸಾಂಗತ್ಯ ಹಾಗೂ ಆರಾಧನೆಯೇ ಪ್ರಮುಖವಾಗುವುದರಿಂದ ಸೂಫಿ ಸಂಗೀತವನ್ನೇ ಏರ್ಪಡಿಸಿದ್ದೆ ಎನ್ನುತ್ತಾರೆ.ಕೈ ಮಗ್ಗದ ವಸ್ತ್ರಗಳ ಹಾಗೂ ಕರಕುಶಲ ಅನುಭೂತಿಗಾಗಿ ಒಮ್ಮೆ ಭೇಟಿ ನೀಡಬಹುದು.ಹೆಚ್ಚಿನ ಮಾಹಿತಿಗೆ:  ಬಸವ ಅಂಬರ: 26561940/65461856

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.