ಶುಕ್ರವಾರ, ಮೇ 20, 2022
27 °C

ಕಲಾ ನೋಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಛಾಯಾ ವಿಶಿಷ್ಟ

ಪ್ರಕೃತಿ ಕ್ರಿಯೆಷನ್ಸ್ ಸಂಸ್ಥೆ ಏರ್ಪಡಿಸಿರುವ ವಿಶೇಷ ಛಾಯಾ ಚಿತ್ರ ಪ್ರದರ್ಶನ `ಛಾಯಾ ವಿಶಿಷ್ಟ~ ಗುರುವಾರದಿಂದ ಅ.17ರ ವರೆಗೆ  ಪ್ರದರ್ಶನಗೊಳ್ಳಲಿದೆ. ಗುರುವಾರ ಬೆಳಿಗ್ಗೆ 10ಕ್ಕೆ ಚಲನಚಿತ್ರ ನಿರ್ದೇಶಕ ಎಂ.ಎಸ್.ಸತ್ಯು ಹಾಗೂ ಸಚಿವ ಎಸ್.ಸುರೇಶ್ ಕುಮಾರ್ ಅವರು ಛಾಯಾ ಚಿತ್ರ ಪ್ರದರ್ಶನ ಉದ್ಘಾಟಿಸಲಿದ್ದಾರೆ. ಪ್ರದರ್ಶನದ ಜತೆಗೆ ಅ.15ರಂದು ಸಂಜೆ 5.30ಕ್ಕೆ ಛಾಯಾಗ್ರಾಹಕರೊಂದಿಗೆ ಸಂವಾದ.

ಸ್ಥಳ: ಚಿತ್ರಕಲಾ ಪರಿಷತ್. ಬೆಳಿಗ್ಗೆ 10ರಿಂದ ಸಂಜೆ 7. ಬಾಲನ್ ಕಲಾಕೃತಿ

ಬಾಲನ್ ನಂಬಿಯಾರ್ ಅವರ ಶಿಷ್ಯರ ಕುಂಚದಲ್ಲಿ ಮೈದಳೆದ ಅಪರೂಪದ ಚಿತ್ರಕಲಾಕೃತಿಗಳು ಅ.21ರ ವರೆಗೆ ಪ್ರದರ್ಶನಗೊಳ್ಳಲಿವೆ.ಸ್ಥಳ: ಅಲಯನ್ಸ್ ಫ್ರಾಂಚೈಸ್, ತಿಮ್ಮಯ್ಯ ರಸ್ತೆ, ವಸಂತ ನಗರ. ಬೆಳಿಗ್ಗೆ 11ರಿಂದ ಸಂಜೆ 7.

ಪುಪಾ ಪ್ರದರ್ಶನ

`ಪುಪಾ~ ಸಮೂಹ ತಂಡದ 15 ಖ್ಯಾತ ಕಲಾವಿದರು ತಮ್ಮ ಅದ್ಭುತ ಕಲಾಕೃತಿಗಳನ್ನು ಅ.18ರ ವರೆಗೆ ಪ್ರದರ್ಶಿಸಲಿದ್ದಾರೆ. ಸೃಜನಶೀಲ ಕಲಾವಿದರಾದ ಅಮೃತ್ ಆರ್, ಆರೋಗ್ಯ ಸ್ವಾಮಿ, ಎನ್. ಬೈರಾಚಾರ್, ಬ್ರಹ್ಮಾನಂದ ಪಟೇಲ್, ಚಂದ್ರಕಾಂತ್, ದೀಪಕ್ ಎಂ, ಹಂಸಾ ಆರ್ ಕಿರಣ್ ಸಿ ಕಿಣ್ಣು, ಮಹಮ್ಮದ್ ಯೂನಿಸ್, ರಾಕೇಶ್ ಕಲ್ಲೂರು, ಸುಜಾ ಆನಂದನ್, ಶ್ವೇತಾ ಪ್ರಿಯದರ್ಶಿನಿ, ಶಿವಪ್ರಸಾದ್ ಕೆ.ಟಿ, ಉಲ್ಲಾಸ್ ಡಿ ಬಿ ಆರ್, ವಿದ್ಯಾ ಜೆ. ಅವರ ಕಲಾಕೃತಿಗಳು ಇಲ್ಲಿ ಪ್ರದರ್ಶನಗೊಂಡಿವೆ.ಸ್ಥಳ: ವೆಂಕಟಪ್ಪ ಆರ್ಟ್ ಗ್ಯಾಲರಿ, ಕಸ್ತೂರ ಬಾ ರಸ್ತೆ. ಬೆಳಿಗ್ಗೆ 10.30 ರಿಂದ ಸಂಜೆ 5.30.ರಿನೈಸನ್ಸ್‌ನಲ್ಲಿ

ಖ್ಯಾತ ಕಲಾವಿದರಾದ ಬಹದ್ಧೂರ್, ದೇಶ್ ದೀಪಕ್, ಪೂನಂ ಅಗರ್‌ವಾಲ್, ತನುಶ್ರೀ ವರ್ಮಾ ಅವರ ಅಪರೂಪದ ಚಿತ್ರಕಲಾಕೃತಿಗಳು ಶನಿವಾರದ ವರೆಗೂ ಪ್ರದರ್ಶನಗೊಳ್ಳಲಿವೆ.ಸ್ಥಳ: ರಿನೈಸೆನ್ಸ್ ಗ್ಯಾಲರಿ, 104, ವೆಸ್ಟ್ ಮಿನ್‌ಸ್ಟರ್ 13, ಕನ್ನಿಂಗ್‌ಹ್ಯಾಂ ರಸ್ತೆ. 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.