ರಾಯಚೂರು: ಮುಂಗಾರು ಆರಂಭ. ಕಾರ ಹುಣ್ಣಿಮೆ ರಾಸುಗಳ ಸಂಭ್ರಮ. ರೈತ ಸಮುದಾಯದ ಪ್ರಮುಖ ಮತ್ತು ಪ್ರಿಯವಾದ ಕಾರ ಹುಣ್ಣಿಮೆಯನ್ನು ರಾಯಚೂರು ಮುಂಗಾರು ಸಾಂಸ್ಕೃತಿಕ ಹಬ್ಬವಾಗಿ ಇಲ್ಲಿ ರೂಪಗೊಂಡಿದ್ದು, ಸತತ ಹದಿಮೂರು ವರ್ಷ ಪೂರೈಸಿ ಹದಿನಾಲ್ಕನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದೆ.

ಜೂನ್ ತಿಂಗಳು ಮುಂಗಾರು ಮಳೆ ಇಳೆಗೆ ಇಳಿಯುತ್ತಿದ್ದಂತೆಯೇ ಕಾರ ಹುಣ್ಣಿಮೆಯ ಮುಂಗಾರು ಸಾಂಸ್ಕೃತಿ ರಾಯಚೂರು ಹಬ್ಬ ಸಿದ್ದತೆಗಳು ಶುರು ಆಗುತ್ತವೆ.

ವರ್ಷಕ್ಕೊಮ್ಮೆ ಮೂರು ದಿನ ಈ ಹಬ್ಬದ ಆಚರಣೆ ನಡೆಯುತ್ತದೆ. ಕಾರ ಹುಣ್ಣಿಮೆ ಎಂದರೆ `ರೈತನ ಆರಾಧ್ಯ ದೈವ' ಎಂದೇ ಕರೆಯಲ್ಪಡುವ ಎತ್ತುಗಳನ್ನು ಪೂಜಿಸಿ,ಬಣ್ಣ ಬಾಸಿಂಗ, ಕೊಂಬೆನ್ಸು, ಜೂಲಾದಿಂದ ಅಲಂಕರಿಸಿ ಮೆರವಣಿಗೆ ಮಾಡಲಾಗುತ್ತದೆ. ಅಲ್ಲದೇ ಹಬ್ಬದ ಮೂರು ದಿನ ಭಾರಿ ಗಾತ್ರದ ಎತ್ತುಗಳಿಗೆ ಭಾರವಾದ ಕಲ್ಲು ಎಳೆಯುವ ಸ್ಪರ್ಧೆ ಆಯೋಜನೆ ಮಾಡಲಾಗಿರುತ್ತದೆ. 5 ಸಾವಿರದಿಂದ 75 ಸಾವಿರದವರೆಗೆ ಬಹುಮಾನ ನಿಗದಿ, ಸಮಾಧಾನಕರ ಬಹುಮಾನವನ್ನೂ ಪ್ರದಾನ ಮಾಡಲಾಗುತ್ತದೆ. ಒಂದು ಟನ್, ಒಂದುವರೆ ಟನ್, ಎರಡು ಟನ್, ಎರಡುವರೆ ಟನ್ ಭಾರದ ಕಲ್ಲುಗಳನ್ನು ಎತ್ತುಗಳಿಂದ ಎಳೆಸಲಾಗುತ್ತದೆ.

ಅಲ್ಲದೇ ಕುಸ್ತಿ ಪಟುಗಳಿಗಾಗಿ ಕುಸ್ತಿ ಸ್ಪರ್ಧೆ ನಡೆಯುತ್ತದೆ. ಅಂಧ್ರಪ್ರದೇಶ, ಕರ್ನಾಟಕ, ಮಹಾರಾಷ್ಟ್ರದ ಪ್ರಸಿದ್ದ ಕುಸ್ತಿಗಳು, ಮಹಿಳಾ ಕುಸ್ತಿಪಟುಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಾರೆ. ಕಲ್ಲು ಎತ್ತುವ ಸ್ಪರ್ಧೆ, ಉಸುಕಿನ ಚೀಲ ಹೊರುವ ಸ್ಪರ್ಧೆ, ಟಗರಿನ ಕಾಳಗ ನಡೆಯುತ್ತವೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರ ತಂಡಗಳೂ ಸೇರಿದಂತೆ ಒಡಿಸ್ಸಾ, ರಾಜಸ್ತಾನ ಹಾಗೂ ಇತರ ಭಾಗಗಳ ಕಲಾವಿದರ ತಂಡಗಳು ಪಾಲ್ಗೊಳ್ಳುತ್ತವೆ. ವೀರಗಾಸೆ, ಡೊಳ್ಳು ಕುಣಿತ, ನಂದಿಕೋಲು, ಗೊಂಬೆ ಕುಣಿತ, ಲಂಬಾಣಿ ನೃತ್ಯ, ಹಲಗೆ ಕುಣಿತ ಸೇರಿದಂತೆ ಹಲವು ಕಲಾ ತಂಡಗಳು ಪ್ರತಿ ವರ್ಷ ಪಾಲ್ಗೊಳ್ಳುತ್ತವೆ.

ಮುನ್ನೂರುಕಾಪು ಬಲಿಜ ಸಮಾಜವು ರೈತಾಪಿ ಸಮಾಜ. ಪರಂಪರಾಗತವಾಗಿ ಕೃಷಿಯನ್ನೇ ಉಸಿರಾಗಿಸಿಕೊಂಡ ಸಮುದಾಯ. ಕಾರ ಹುಣ್ಣಿಮೆ ಹಬ್ಬ ರೈತರ ಹಬ್ಬ. ಪರಂಪರಾಗತವಾಗಿ ಆಚರಿಸಿಕೊಂಡು ಬಂದ ಹಬ್ಬವನ್ನು ಮತ್ತಷ್ಟು ವೈಶಿಷ್ಟ್ಯಪೂರ್ಣವಾಗಿ ಆಚರಿಸಿ ಉಳಿಸಿ ಬೆಳೆಸುವ ದಿಶೆಯಲ್ಲಿ ಆ ಸಮಾಜ ಕಾರ ಹುಣ್ಣಿಮೆ ಹಬ್ಬವನ್ನು ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ ಎಂಬ ಹೆಸರಿನಲ್ಲಿ 1999ರಿಂದ ಆಚರಿಸುತ್ತಿದೆ. ಮುನ್ನೂರು ಕಾಪು ಸಮಾಜದ ಹಿರಿಯ ಮುಖಂಡ ಮತ್ತು ಮಾಜಿ ಶಾಸಕ ಎ ಪಾಪಾರೆಡ್ಡಿ ಅವರು ಈ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಶಕ್ತಿ. ಸಮಾಜ ಬಾಂಧವರು ಪ್ರತಿ ವರ್ಷ ಕೊಡುವ ಸುಮಾರು 25 ಲಕ್ಷ ಸಹಾಯ ಹಾಗೂ ಸರ್ಕಾರದ ವಿವಿಧ ಸಂಸ್ಥೆ, ಸ್ಥಳೀಯ ಸಂಸ್ಥೆಯ ನೆರವಿನಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. ಮುಂಗಾರು ಉತ್ಸವ ಗ್ರಾಮೀಣ ಜನತೆಯ, ಕೃಷಿಕ ಸಮಾಜದ ಉತ್ಸವ. ಕಲೆ, ಸಂಸ್ಕೃತಿ, ಸಾಂಪ್ರದಾಯಿಕ ಹಬ್ಬ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ. ಸರ್ಕಾರ ಈ ಹಬ್ಬಕ್ಕೆ ಇನ್ನಷ್ಟು ಪ್ರೋತ್ಸಾಹ ಕೊಡುವುದರ ಜತೆಗೆ ಬೆಂಗಳೂರಿನ ಕರಗ, ಕರಾವಳಿ ಕಂಬಳದಂಥ ಉತ್ಸವಕ್ಕೆ ಕೊಟ್ಟಂತೆ ಈ ಉತ್ಸವ ಗುರುತಿಸಿ ಮಾನ್ಯತೆ ಕೊಡಬೇಕು ಎಂದು ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ರೂವಾರಿ ಮಾಜಿ ಶಾಸಕ ಎ ಪಾಪಾರೆಡ್ಡಿ ಅವರ ಮೊದಲಿನಿಂದಲೂ ಇರುವ ಒತ್ತಾಯ.

ಈ ವರ್ಷ ಜೂನ್ 22ರಿಂದ 24ರವರೆಗೆ ಮೂರು ದಿನ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.