ಭಾನುವಾರ, ಜನವರಿ 26, 2020
28 °C

ಕಳಪೆ ಕುಡಿಯುವ ನೀರು ಪೂರೈಕೆ

- ರಮೇಶ್ ಗೌಡ,ರಾಜಾಜಿನಗರ Updated:

ಅಕ್ಷರ ಗಾತ್ರ : | |

ಕಳೆದ ಕೆಲವು ದಿನಗಳಿಂದ ಬಿಡಬ್ಲುಎಸ್‌ಎಸ್‌ಬಿ ರಾಜಾಜಿ ನಗರ 2ನೇ ಹಂತ, ಇ ಬ್ಲಾಕ್‌ಗೆ ಪೂರೈಕೆ ಮಾಡುತ್ತಿರುವ ಕಾವೇರಿ ಕುಡಿಯುವ ನೀರಿನ ಗುಣಮಟ್ಟ ಸ್ಥಳೀಯರ ನಿದ್ದೆಗೆಡಿಸಿದೆ. ಈ ನೀರನ್ನು ಫಿಲ್ಟರ್‌ನಲ್ಲಿ ಶೋಧಿಸಿ, ಕುದಿಸಿದರೆ ಬಿಳಿ ಕಣಗಳು ನೀರಿನಲ್ಲಿ ಕಾಣಸಿಗುತ್ತವೆ. ನೀರಿನಲ್ಲಿ ಲವಣಾಂಶ ಜಾಸ್ತಿ ಇದ್ದಂತೆ ತೋರುತ್ತದೆ. ನೀರು ಕುಡಿದರೆ ಉಪ್ಪು ನೀರು ಕುಡಿದಂತೆ ಭಾಸವಾಗುತ್ತದೆ.ಈ ಸಮಸ್ಯೆ ಆರಂಭವಾಗಿ ಹಲವು ದಿನಗಳು ಕಳೆದಿವೆ. ಈ ಬಗ್ಗೆ ಕೇಂದ್ರ ಕಚೇರಿಗೆ ದೂರು ನೀಡಿದರೂ ಈವರೆಗೆ ಯಾವುದೇ ಪ್ರಯೋಜನ ಆಗಿಲ್ಲ. ಕೂಡಲೇ ನೀರನ್ನು ಪರೀಕ್ಷಿಸುತ್ತೇವೆ ಎಂದು ಕೆಲವು ಅಧಿಕಾರಿಗಳು ತಿಳಿಸಿದರೆ, ಉಳಿದವರು ನೀರಿನಲ್ಲಿ ಯಾವುದೇ ಸಮಸ್ಯೆ ಇಲ್ಲ ಎನ್ನುತ್ತಾರೆ.ನೀರು ಕಲುಷಿತವಾಗಿಲ್ಲದಿದ್ದರೆ, ನೀರು ಕುದಿಸಿದಾಗ ಬಿಳಿ ಕಣಗಳು ಕಂಡು ಬರಲು ಕಾರಣ ಏನು?

ದಯವಿಟ್ಟು ಈಗಲಾದರೂ ಸಂಬಂಧ ಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಲಿ.

 

ಪ್ರತಿಕ್ರಿಯಿಸಿ (+)