ಕಳಪೆ ತೀರ್ಪು: ಕೊನೆ ಕ್ಷಣದಲ್ಲಿ ಅಂಪೈರ್ ಬದಲಾವಣೆ
ಚೆನ್ನೈ: ತಮ್ಮ ಕೆಲ ತೀರ್ಪುಗಳಿಂದ ಟೀಕೆಗೆ ಗುರಿಯಾಗಿರುವ ಶ್ರೀಲಂಕಾದ ಅಂಪೈರ್ ಅಶೋಕ ಡಿಸಿಲ್ವಾ ಅವರಿಗೆ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪ್ರಮುಖ ಪಂದ್ಯಗಳಿಂದ ಕೊಕ್ ನೀಡಲಾಗಿದೆ. ಈ ಮೊದಲು ಐಸಿಸಿ ನಿರ್ಧರಿಸಿದಂತೆ ವೆಸ್ಟ್ಇಂಡೀಸ್ ಹಾಗೂ ಇಂಗ್ಲೆಂಡ್ ನಡುವೆ ಗುರುವಾರ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಪ್ರಮುಖ ಪಂದ್ಯಕ್ಕೆ ಡಿಸಿಲ್ವಾ ಫೀಲ್ಡ್ ಅಂಪೈರ್ ಆಗಿ ಕಾರ್ಯನಿರ್ವಹಿಸಬೇಕಿತ್ತು. ಆದರೆ ಅವರನ್ನು ಈಗ ಕೈಬಿಡಲಾಗಿದೆ. ಈ ವಿಷಯವನ್ನು ಐಸಿಸಿ ಮಾಧ್ಯಮ ಮ್ಯಾನೇಜರ್ ಜೇಮ್ಸ್ ಫಿಟ್ಜ್ಗೆರಾಲ್ಡ್ ಬುಧವಾರ ರಾತ್ರಿ ‘ಪ್ರಜಾವಾಣಿ’ಗೆ ಖಚಿತಪಡಿಸಿದ್ದಾರೆ.
‘ಅಂಪೈರ್ಗಳನ್ನು ಬದಲಾವಣೆ ಮಾಡಲಾಗಿದೆ. ವಿಂಡೀಸ್ ಹಾಗೂ ಇಂಗ್ಲೆಂಡ್ ಪಂದ್ಯದಲ್ಲಿ ಬ್ರೂಸ್ ಆಕ್ಸೆನ್ಫೋರ್ಡ್ ಹಾಗೂ ಸ್ಟೀವ್ ಡೇವಿಸ್ ಪೀಲ್ಡ್ ಅಂಪೈರ್ಗಳಾಗಿರುತ್ತಾರೆ. ಸೈಮನ್ ಟಫೆಲ್ ಮೂರನೇ ಅಂಪೈರೆ’ ಎಂದು ಅವರು ಹೇಳಿದ್ದಾರೆ.ಆದರೆ ಕೈಬಿಟ್ಟಿದ್ದಕ್ಕೆ ಅವರು ನಿಖರ ಕಾರಣ ತಿಳಿಸಲಿಲ್ಲ. ನಿಖರ ತೀರ್ಪು ನೀಡಲು ಅವರು ವಿಫಲರಾಗಿರುವುದು ಈ ಬದಲಾವಣೆಗೆ ಪ್ರಮುಖ ಕಾರಣ ಎನ್ನಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.