ರಾಯಚೂರು:  ಮಳೆಗಾಲ ಶುರುವಾಗುತ್ತಿದೆ. ಮಲೇರಿಯಾ, ಡೆಂಗೆಯಂಥ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಲು ಜಿಲ್ಲಾ ಆರೋಗ್ಯ ಇಲಾಖೆ ತನ್ನದೇ ಆದ ಸಿದ್ಧತೆ ಮಾಡಿಕೊಂಡಿದೆ. ಆದರೆ, ಸಾಂಕ್ರಾಮಿಕ ರೋಗ ಹರಡುವುದಕ್ಕೆ ಬಹುಮಟ್ಟಿಗೆ ಕಾರಣವಾಗುವ ಕಸದ ಗುಡ್ಡೆ, ಅಸ್ವಚ್ಛತೆ ವಾತಾವರಣ ಹೋಗಲಾಡಿಸುವ ಪ್ರಯತ್ನಕ್ಕೆ ನಗರಸಭೆ ಇನ್ನೂ ಚಾಲನೆ ನೀಡಿಲ್ಲ.

ನಗರದ ಮಾರುಕಟ್ಟೆ ಪ್ರದೇಶ, ತರಕಾರಿ ಮಾರುಕಟ್ಟೆ, ಪ್ರಮುಖ ರಸ್ತೆ ಮತ್ತು ಬಡಾವಣೆಯಲ್ಲಿ ಕಸದ ತೊಟ್ಟಿಗಳು ಕಸದಿಂದ ತುಂಬಿ ತುಳುಕುತ್ತಿವೆ. ದನಕರು, ಹಂದಿಗಳು ಕಸದ ತೊಟ್ಟಿಯಲ್ಲಿನ ತ್ಯಾಜ್ಯ ಹೊರಗೆಳೆದು ಗಲೀಜು ಮಾಡುತ್ತವೆ. ಕಸದ ತೊಟ್ಟಿಯಲ್ಲಿನ ಕಸ ಮತ್ತೆ ರಸ್ತೆಗೆ ಬೀಳುತ್ತದೆ. ಸಾರ್ವಜನಿಕರು ಮೂಗು ಮುಚ್ಚಿಕೊಂಡೇ ಸಂಚರಿಸಬೇಕು. ರಸ್ತೆ ಪಕ್ಕದ ನಿವಾಸಿಗಳು, ಬಡಾವಣೆ ಜನರಿಗೆ ಅನಾರೋಗ್ಯದ ಭಯ ಕಾಡಲು ಕಾರಣವಾಗಿದೆ.

ಒಂದೆಡೆ ಹದಗೆಟ್ಟ ರಸ್ತೆಗಳು. ಇಂಥ ರಸ್ತೆಯಲ್ಲೇ ಎಲ್ಲೆಂದರಲ್ಲಿ ಬಿದ್ದ ಗುಂಡಿಗಳಲ್ಲಿ ನಿಂತ ನೀರು ಸೊಳ್ಳೆಗಳ ತಾಣವಾಗಿವೆ. ತೆರೆದ ಚರಂಡಿ, ರಾಜಾ ಕಾಲುವೆಯಲ್ಲಿನ ಕೊಳಚೆ ಸ್ವಚ್ಛಗೊಳಿಸದೇ ಇರುವುದರಿಂದ ದುರ್ನಾತ ಬೀರುತ್ತಿವೆ. ಮಾರುಕಟ್ಟೆ ಪ್ರದೇಶದಲ್ಲಿ ಇಂಥ ದುರ್ನಾತ ಬೀರುವ ರಸ್ತೆ ಅಕ್ಕಪಕ್ಕವೇ ಹಣ್ಣು, ತರಕಾರಿ ಮಾರಾಟ ಆಗುತ್ತದೆ. ಚಾಟ್ ಸೆಂಟರ್ ಕೂಡಾ ನಡೆಯುತ್ತಿವೆ. ತರಕಾರಿ ಮಾರುಕಟ್ಟೆಯಲ್ಲಿ ಜನ ಕಾಲಿಡಲೇ ಬಾರದು ಎಂಬ ಸ್ಥಿತಿ ಇದೆ. ಸ್ವಲ್ಪ ಮಳೆಯಾದರೂ ತಿಪ್ಪೆಗುಂಡಿಯಲ್ಲಿ ತಿರುಗಾಡಿದ ಅನುಭವ ಜನರಿಗಾಗುತ್ತಿದೆ.. ಹೀಗಾಗಿ ಜನ ತರಕಾರಿ ಮಾರುಕಟ್ಟೆಗೆ ಹೋಗುವುದನ್ನೇ ಬಿಡುವಂತಾಗಿದೆ.

ಮನೆ ಮನೆಯಿಂದ ಕಸ ಸಂಗ್ರಹಣೆಗೆ ನಗರಸಭೆಯು `ಕಸ ಸಂಗ್ರಹಣೆ ವಾಹನ' ವ್ಯವಸ್ಥೆ ಮಾಡಿದ್ದರೂ ನಗರದ ಎಲ್ಲಾ ಬಡಾವಣೆಗೂ ಈ ಸೇವೆ ವಿಸ್ತರಣೆ ಆಗಿಲ್ಲ. ಅದರಲ್ಲೂ ಈ ಕಸ ಸಂಗ್ರಹಣೆ ವಾಹನಗಳು ಪದೇ ಪದೇ ಕೆಟ್ಟು ನಿಲ್ಲುವುದು. ಒಮ್ಮೆ ಕೆಟ್ಟು ನಿಂತರೆ ಕನಿಷ್ಠ 4-5 ದಿನ, ಒಂದು ವಾರ ದುರಸ್ತಿ ಕಾರಣದಿಂದ ಕಸ ಸಂಗ್ರಹಣೆ ಸ್ಥಗಿತಗೊಳ್ಳುತ್ತದೆ. ಈ ಸ್ಥಿತಿಯಲ್ಲಿ ನಗರಸಭೆಯ ಈ ಕಸ ಸಂಗ್ರಹಣೆ ವಾಹನಗಳು ಬಡಾವಣೆ ಜನರಿಗೆ ಅನುಕೂಲ ಆಗುವ ಬದಲು ಅನಾನುಕೂಲ ಆಗುತ್ತಿದೆ. ಹೀಗಾಗಿ ಕಸ ರಸ್ತೆ ಪಕ್ಕದ ಕಸದ ಡಬ್ಬಿ ಸೇರುತ್ತದೆ. ಆ ಕಸದ ಡಬ್ಬಿಯೂ ತುಂಬಿ ರಸ್ತೆಯಲ್ಲಿ ಬಿದ್ದು ಕಲುಷಿತ ವಾತಾವರಣ ಸೃಷ್ಟಿಗೆ ಕಾರಣ ಆಗುತ್ತಿದೆ.

ನಗರಸಭೆಯು ಕಸ ಸಂಗ್ರಹಣೆಗೆ ಹೆಚ್ಚಿನ ಸಿಬ್ಬಂದಿ, ಹೆಚ್ಚಿನ ವಾಹನ ವ್ಯವಸ್ಥೆ ಮಾಡಬೇಕು ಎಂದು ರಾಯಚೂರು ಸ್ವಚ್ಛಗೊಳಿಸಿ ಹೋರಾಟ ಸಮಿತಿ ಹಲವಾರು ಬಾರಿ ನಗರಸಭೆ ಆಯುಕ್ತರಿಗೆ ಮನವಿ ಮಾಡಿದೆ. ಆದರೆ, ಪರಿಸ್ಥಿತಿ ಮಾತ್ರ ಬದಲಾಗಿಲ್ಲ.

ಈಗ ಮುಂಗಾರು ಪೂರ್ವ ಮಳೆ ಹದಿನೈದು ದಿನದಲ್ಲಿ ಒಂದೆರಡು ಬಾರಿ ರಭಸವಾಗಿಯೇ ಸುರಿದು ನಗರ ಪ್ರಮುಖ ರಸ್ತೆ, ಬಡಾವಣೆಯಲ್ಲಿ ಬಿದ್ದ ಕಸಕಡ್ಡಿ ಸ್ವಚ್ಛ ಮಾಡಿದೆ. ಮತ್ತೊಂದು ಕಡೆ ಈ ಮಳೆ ನೀರೇ ಎಲ್ಲೆಂದರಲ್ಲಿ ನಿಂತು ಸೊಳ್ಳೆ ಸಂತಾನ ಉತ್ಪತ್ತಿ ತಾಣವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.