ಗುರುವಾರ , ಮೇ 13, 2021
24 °C
ಭೂ ಕಬಳಿಕೆಯಲ್ಲಿ ಅಧಿಕಾರಿಗಳು ಶಾಮೀಲು: ಆರೋಪ

ಕಸಾಘಟ್ಟ ಸರ್ಕಾರಿ ಜಮೀನು ವಶಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ದೊಡ್ಡಬಳ್ಳಾಪುರ ತಾಲ್ಲೂಕಿನ ಕಸಾಘಟ್ಟ ಗ್ರಾಮದಲ್ಲಿ ಸರ್ಕಾರಿ ಅಧಿಕಾರಿಗಳು ಮತ್ತು ಸ್ಥಳೀಯರಿಂದ ಅಕ್ರಮವಾಗಿ ಕಬಳಿಕೆಯಾಗಿರುವ 10 ಎಕರೆ 38 ಗುಂಟೆ ಸರ್ಕಾರಿ ಜಮೀನನ್ನು ಕೂಡಲೇ ವಶಪಡಿಸಿಕೊಳ್ಳಬೇಕು ಮತ್ತು ಆರೋಪಿಗಳಿಗೆ ಶಿಕ್ಷೆ ವಿಧಿಸಬೇಕು' ಎಂದು ಕರ್ನಾಟಕ ಭ್ರಷ್ಟಾಚಾರ ನಿರ್ಮೂಲನಾ ವೇದಿಕೆಯ ಅಧ್ಯಕ್ಷ ಕೆ.ಎಚ್.ರಾಮಲಿಂಗಾರೆಡ್ಡಿ  ಅವರು ಒತ್ತಾಯಿಸಿದರು.ಶನಿವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಸಾಘಟ್ಟ ಗ್ರಾಮದ ಸರ್ವೆ ನಂ. 77ರಲ್ಲಿರುವ ಜಮೀನನ್ನು ಮೈಸೂರು ಮಹಾನಗರ ಪಾಲಿಕೆಯ ವಾಣಿವಿಲಾಸ ನೀರು ಸರಬರಾಜು ಕಾರ್ಯಾಲಯದ ಪ್ರಥಮ ದರ್ಜೆ ಸಹಾಯಕ ವೆಂಕಟನರಸಯ್ಯ, ಅರಣ್ಯ ಅಧಿಕಾರಿಗಳಾದ ಸಿದ್ದಪ್ಪ, ಶಿವರಾಮೇಗೌಡ ಮತ್ತು ಸ್ಥಳೀಯರಾದ ನಾಗರಾಜು, ಚಂದಪ್ಪ, ಸಿದ್ದನರಸಮ್ಮ, ಸಿದ್ದಗಂಗಯ್ಯ ಅವರು ಅಕ್ರಮವಾಗಿ ಕಬಳಿಸಿದ್ದಾರೆ ಎಂದು ದೂರಿದರು.ಆರೋಪಿ ಸಿದ್ದನರಸಮ್ಮ ಎಂಬುವವರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಮೀನನ್ನು ಅವರ ಹೆಸರಿಗೆ ದಾಖಲಿಸಿದ್ದಾರೆ. ನಂತರ ಉಳಿದ ಆರೋಪಿಗಳು ಜಮೀನನ್ನು ಹಂಚಿಕೆ ಮಾಡಿಕೊಂಡಿದ್ದಾರೆ. ದೊಡ್ಡಬಳ್ಳಾಪುರ ತಾಲ್ಲೂಕಿನ ತಹಶೀಲ್ದಾರರಾಗಿದ್ದ ಸಂಪತ್‌ಕುಮಾರ್, ರಶ್ಮಿ ಮತ್ತು ಗ್ರಾಮಲೆಕ್ಕಾಧಿಕಾರಿಯಾಗಿದ್ದ ಎನ್. ವೆಂಕಟೇಶಪ್ಪ ಅವರು ಅಕ್ರಮ ಭೂ ಕಬಳಿಕೆಗೆ ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಿದರು.ಅಕ್ರಮ ಭೂಕಬಳಿಕೆ ಪ್ರಕರಣದ ವಿರುದ್ಧ ಆರ್‌ಟಿಇ ಕಾರ್ಯಕರ್ತ ಎಂ.ನಾಗರಾಜು ದೊಡ್ಡಬಳ್ಳಾಪುರ ಉಪ ವಿಭಾಗದ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಜೂನ್ 3ರಂದು ನ್ಯಾಯಾಲಯ ಅಕ್ರಮ ಜಮೀನನ್ನು ಮರು ವಶಪಡಿಸಿಕೊಳ್ಳಬೇಕು ಎಂದು ಆದೇಶಿಸಿದ್ದರೂ ಜಮೀನನ್ನು ವಶಪಡಿಸಿಕೊಂಡಿಲ್ಲ ಎಂದು ದೂರಿದರು.ಆರೋಪಿಗಳು ಎಂ.ನಾಗರಾಜು ಅವರಿಗೆ ನಿರಂತರವಾಗಿ ಬೆದರಿಕೆ ಒಡ್ಡುತ್ತಿದ್ದು ಹಲವು ಬಾರಿ ಹಲ್ಲೆಗೂ ಯತ್ನಿಸಿದ್ದಾರೆ. ಆದ್ದರಿಂದ ಅವರ ಜೀವಕ್ಕೆ ಅಪಾಯವಿದ್ದು ಸೂಕ್ತ ಭದ್ರತೆ ಒದಗಿಸಬೇಕು ಎಂದು ಮನವಿ ಮಾಡಿದರು. ಪ್ರಕರಣದಲ್ಲಿ ಭಾಗಿಯಾಗಿರುವ ಸರ್ಕಾರಿ ಅಧಿಕಾರಿಗಳನ್ನು ಕೂಡಲೇ ವಜಾ ಮಾಡಬೇಕು. ಅವರಿಂದ ಜಮೀನನ್ನು ಮರುವಶಪಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.