ಶುಕ್ರವಾರ, ಮೇ 7, 2021
22 °C

ಕಸಾಪ ಅಧ್ಯಕ್ಷತೆ: ಆಯ್ಕೆ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಡ ಸಾಹಿತ್ಯ ಪರಿಷತ್ತಿಗೆ ಸ್ಪರ್ಧಿಸುತ್ತಿರುವವರ ಭಾಷಾಜ್ಞಾನ ಮತ್ತು ಕಾಗುಣಿತ ದೋಷಗಳಿಗಿಂತ ಗಂಭೀರವಾದ ಸಮಸ್ಯೆಗಳ ಸುಳಿಯಲ್ಲಿ ಪರಿಷತ್ತು ಇಂದು ನಲುಗುತ್ತಿದೆ (ಪ್ರವಾ. ಮಾ.29, ಶೇಷನಾರಾಯಣ ಲೇಖನ). ಚುನಾವಣೆ ವ್ಯವಸ್ಥೆಗೆ ಅಂಟಿಕೊಂಡಿರುವ ಹಣ, ಹೆಂಡ, ಜಾತಿಯ ಲಾಬಿಗಳು ಪರಿಷತ್ತಿಗೂ ಹಬ್ಬಿರುವುದು ಖೇದಕರ.ಸಂವೇದನಾಶೀಲ ಸಾಹಿತಿಗಳು ಪರಿಷತ್ತಿನ ಸಮೀಪವೂ ಸುಳಿಯಲು ಸಾಧ್ಯವಾಗದ ವಾತಾವರಣ ಇದೆ.ಏಕೆಂದರೆ ಚುನಾವಣೆಯೇ ಖರ್ಚಿನ ಬಾಬತ್ತು. ಪರಿಷತ್ತಿನ ಮತದಾರರಿಗೆ ಅಭ್ಯರ್ಥಿಗಳು ಮನವಿ ಪತ್ರ ಕಳಿಸಲು ಲಕ್ಷಾಂತರ ರೂಪಾಯಿ ಬೇಕು. ಇನ್ನು ಇಡೀ ಕರ್ನಾಟಕವನ್ನು ಸುತ್ತಿ ಬರಲು ಇನ್ನೂ ಹೆಚ್ಚಿನ ಹಣ ಬೇಕು.ಇಷ್ಟೆಲ್ಲ ಖರ್ಚು ಮಾಡಿಕೊಳ್ಳುವ ಹುರಿಯಾಳುಗಳಿಗೆ ಹೂಡಿದ ಬಂಡವಾಳನ್ನು ಮರಳಿ ಪಡೆಯಬೇಕೆಂಬ ತವಕವಿದ್ದರೆ ಅದು ಅಕಾರಣವೇನಲ್ಲ.ಅಧ್ಯಕ್ಷಗಿರಿಯೆನ್ನುವುದು ಜಾತಿ ಸಂವರ್ಧನೆ, ಸ್ವಜನಹಿತಾಸಕ್ತಿ, ಅಧಿಕಾರದ ನೆಟ್‌ವರ್ಕ್‌ಗಳನ್ನು ಸ್ಥಾಪಿಸಿಕೊಳ್ಳುವ ಸಾಧನಗಳಾಗಿವೆ.ಸಾಹಿತಿಗಳೇ ಪರಿಷತ್ತಿನ ಪದಾಧಿಕಾರಿಗಳಾಗಬೇಕೆಂಬ ನಿಯಮವೇನೂ ಇಲ್ಲ. ಉತ್ತಮ ಸಂಘಟಕರು, ಕ್ರಿಯಾಶೀಲ ಆಡಳಿತಗಾರರು ಅದರ ಚುಕ್ಕಾಣಿ ಹಿಡಿದರೂ ಸಾಕೆಂಬ ಮನೋಭಾವವನ್ನು ಮತದಾರರಲ್ಲಿ ಬೆಳೆಸಲಾಗಿದೆ. ಆದರೆ, ಇತ್ತೀಚಿಗೆ ಈ ಮಾನದಂಡಗಳು ಕೂಡಾ ಅನ್ವಯವಾಗುತ್ತಿಲ್ಲ.ಬೇಕಾಬಿಟ್ಟಿ ಹಣ, ಧೂರ್ತ ರಾಜಕಾರಣಿಗಳ ಬೆಂಬಲ, ಜಾತಿ ಸಮೀಕರಣ, ಅಸಹ್ಯಕರ ತಂತ್ರಗಾರಿಕೆಗಳೇ ಇಂದು ಸೇರಿಕೊಳ್ಳುತ್ತಿರುವುದು ಸಾಂಸ್ಕೃತಿಕ ಲೋಕದ ದಿವಾಳಿತನವೇ ಆಗಿದೆ.ಸಾಹಿತಿಗಳಲ್ಲದವರಿಗೆ ಸ್ವಹಿತಾಸಕ್ತಿಗಾಗಿ ಪರಿಷತ್ತಿನ ಚುಕ್ಕಾಣಿ ಹಿಡಿಯಬೇಕಾಗಿದೆ. ಇಂಥ ಅವಸ್ಥೆಯಲ್ಲಿ ಸಾಹಿತಿ ಮತದಾರರು ದಿಕ್ಕು ತೋಚದೆ ಅತಂತ್ರ ಸ್ಥಿತಿಯಲ್ಲಿ ನಿಂತಿದ್ದಾರೆ. ಆದ್ದರಿಂದ ಇದು ಕಾಗುಣಿತ ದೋಷ ಮಾಡುವ ಸ್ಪರ್ಧಾಳುಗಳ ಉಪದ್ರವಕಿಂತ ಹೆಚ್ಚು ಕಳವಳಕಾರಿ ಸಂಗತಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.