ಗುವಾಹಟಿ: ಭಾರತದ ಬ್ಯಾಡ್ಮಿಂಟನ್ ಆಟಗಾರರು ಇಲ್ಲಿ ನಡೆಯುತ್ತಿರುವ ಬಿಡಬ್ಲ್ಯುಎಫ್ ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ ಶುಭಾರಂಭ ಮಾಡಿದರು.

ಸೋಮವಾರ ನಡೆದ ಬಾಲಕರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಲಾಲ್ತಜುವಾಲ ಹಮರ್ 15–4, 15–4ರಿಂದ ಉಗಾಂಡದ ಡೆನಿಸ್ ಮುಕಾಸಾ ವಿರುದ್ಧ ಗೆದ್ದರು. ಇನ್ನೊಂದು ಪಂದ್ಯದಲ್ಲಿ ಜ್ಙಾನ ದತ್ತು ಟಿಟಿ 5–15, 15–7, 15–7ರಿಂದ ಹಂಗರಿಯ ಮಿಲನ್ ಮೆಸ್ತರಾಜಿ ವಿರುದ್ಧ ಜಯಗಳಿಸಿದರು.

ಬಾಲಕಿಯರ ಸಿಂಗಲ್ಸ್ನಲ್ಲಿ ಕೆ. ವೆನಾಲಾ 15–1, 15–6ರಿಂದ ಐರ್ಲೆಂಡ್ನ ಸಿಯಾಫ್ರಾ ಫ್ಲೈಯಿನ್ ವಿರುದ್ಧ ಗೆದ್ದರು.

ಮಿಶ್ರ ಡಬಲ್ಸ್ನಲ್ಲಿ ವಿಷ್ಣು ಕೇದಾರ್ ಖೋಡೆ ಮತ್ತು ಕೀರ್ತಿಮಂಚಾಲಾ 15-7, 15-8ರಿಂದ ಘಾನಾದ ಒಬಾಪೊಂಬಾ ಅದು ಮತ್ತು ಮಿಂಥಾ/ಮೊಸ್ಲೇನಾ ಅಮಾ ಕೊರಾಮಾ ವಿರುದ್ಧ ಗೆದ್ದರು.

ಇನ್ನೊಂದು ಪಂದ್ಯದಲ್ಲಿ; ಸಿ. ಲಾಲರೆಮಸಂಗಾ–ತಾರಿಣಿ ಸೂರಿ 15–13, 15–9ರಿಂದ ಐರ್ಲೆಂಡ್ನ ಸೆನಾನ್ ಒರೂರ್ಕಿ–ಮೈಕೆಲ್ ಶೋಚನ್ ವಿರುದ್ಧ ಜಯಿಸಿದರು. ಮತ್ತೊಂದು ಪಂದ್ಯದಲ್ಲಿ ಭಾರತದ ವಂಶ್ ದೇವ್–ದಿಯಾಂಕಾ ವಾಲ್ದಿಯಾ 15–6, 15–11ರಿಂದ ಇಂಗ್ಲೆಂಡ್ನ ಅನೀಶ್ ನಾಯರ್–ಮಿಯಾ ಫಾಕ್ಸ್ ವಿರುದ್ಧ ಗೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.