ಶನಿವಾರ, ಮೇ 15, 2021
25 °C

ಕಾಂಗ್ರೆಸ್ ಸಂಸದರಿದ ಲಂಚದ ಆಮಿಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಂಚಿ (ಐಎಎನ್‌ಎಸ್): `ರಾಜ್ಯಸಭಾ ಚುನಾವಣೆ ವೇಳೆ ತಮ್ಮ ಪರವಾಗಿ ಮತ ಹಾಕುವಂತೆ ರಾಜ್ಯಸಭಾ ಕಾಂಗ್ರೆಸ್ ಸದಸ್ಯ ಧೀರಜ್ ಸಾಹು ನನಗೆ 25 ಲಕ್ಷ ರೂಪಾಯಿ ಲಂಚದ ಆಮಿಷವೊಡ್ಡಿದ್ದರು~ ಎಂದು ಅದೇ ಪಕ್ಷದ ಶಾಸಕ ಚಂದ್ರಶೇಖರ ದುಬೆ ಸೋಮವಾರ ಆರೋಪಿಸಿದ್ದಾರೆ.2010ರಲ್ಲಿ ಜಾರ್ಖಂಡ್‌ನಲ್ಲಿ ರಾಜ್ಯಸಭಾ ಚುನಾವಣೆ ರದ್ದುಪಡಿಸಿರುವ ಬಗ್ಗೆ ತನಿಖೆ ನಡೆಸುತ್ತಿರುವ ಸಿಬಿಐ ತನಿಖೆ ನಡೆಸುತ್ತಿರುವ ಮಧ್ಯೆಯೇ ದುಬೆ ಸುದ್ದಿವಾಹಿನಿಗೆ ಈ ಹೇಳಿಕೆ ನೀಡಿದ್ದಾರೆ.ಆದರೆ ಸಾಹು ಈ ಆರೋಪವನ್ನು ಅಲ್ಲಗಳೆದಿದ್ದಾರೆ. `ನಾನು  ಪಕ್ಷದ ಅಭ್ಯರ್ಥಿ. ಹೀಗಾಗಿ ನನ್ನ ಪರ  ಮತ ಹಾಕುವಂತೆ ಸ್ವಂತ ಪಕ್ಷದ ಅಭ್ಯರ್ಥಿಗೇಕೆ ಹಣ ನೀಡಲಿ~ ಎಂದು ಸಾಹು ಪ್ರಶ್ನಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.