ದಾವಣಗೆರೆ: ಹಣ ಬಂದಿದೆ.. ಜಾಗವಿದೆ... ಆದರೆ, ಎಪಿ ಎಂಸಿ- ತೋಟಗಾರಿಕೆ ಇಲಾಖೆಯ ಸಮನ್ವಯದ ಕೊರತೆಯಿಂದಾಗಿ ಒಂದೂವರೆ ವರ್ಷ ಕಳೆದರೂ ಕಾಮಗಾರಿ ಆರಂಭವಾಗಿಲ್ಲ. ಇದರಿಂದಾಗಿ ಮಹತ್ವದ ಯೋಜನೆಯೊಂದು ಇನ್ನೂ ಕಾಗದದಲ್ಲಿಯೇ ಉಳಿದಿದೆ.

ಇದು ಮಧ್ಯಕರ್ನಾಟಕದ ದಾವಣಗೆರೆಯಲ್ಲಿ ಸ್ಥಾಪಿಸಲು ಉದ್ದೇಶಿರುವ ಜೈವಿಕ ಕೇಂದ್ರದ (ಬಯೋ ಸೆಂಟರ್) ಕಥೆ. ಎಲ್ಲವೂ ಅಂದುಕೊಂಡತೆ ನಡೆದಿದ್ದಲ್ಲಿ ಈ ಕೇಂದ್ರ ಹಲವು ಜಿಲ್ಲೆಗಳ ತೋಟಗಾರಿಕೆ ಬೆಳೆಗಾರರಿಗೆ ಸಂಪನ್ಮೂಲ ಕೇಂದ್ರವಾಗಿ ಸಿದ್ಧಗೊಳ್ಳಬೇಕಿತ್ತು.

ಕೇಂದ್ರ ಸ್ಥಾಪನೆ ಕುರಿತು 2011ರಲ್ಲಿಯೇ ಘೋಷಿಸಲಾಗಿತ್ತು. ಅದೇ ವರ್ಷ ರೂ5.4 ಕೋಟಿ ಅನುದಾನ ತೋಟಗಾರಿಕೆ ಇಲಾಖೆ ಕೈಸೇರಿತ್ತು. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (ಆರ್ಕೆವಿವೈ) ಅಡಿ ನಗರದ ಎಪಿಎಂಸಿ ಯಾರ್ಡ್ನಲ್ಲಿರುವ ತೋಟಗಾರಿಕಾ ಕ್ಷೇತ್ರದಲ್ಲಿ ಜೈವಿಕ ಕೇಂದ್ರ ಸ್ಥಾಪನೆಗೆ ಉದ್ದೇಶಿಸಲಾಗಿದೆ. ಇಲ್ಲಿ 10 ಎಕರೆಯಷ್ಟು ತೋಟಗಾರಿಕಾ ಕ್ಷೇತ್ರವಿದೆ. ಇದರಲ್ಲಿ, 7 ಎಕರೆಯನ್ನು ಕೇಂದ್ರ ನಿರ್ಮಾಣಕ್ಕೆ ಬಳಸಲು ನಿರ್ಧರಿಸಲಾಗಿದೆ. ಕೇಂದ್ರದ ಕಾಮಗಾರಿ ಆರಂಭಕ್ಕೆ ಸಂಬಂಧಿಸಿದಂತೆ ತಾಂತ್ರಿಕ ಕಾರಣ ಅಡ್ಡಿಯಾಗಿದ್ದು, ಇನ್ನೂ ಟೆಂಡರ್ ಪ್ರಕ್ರಿಯೆ ಸಹ ನಡೆದಿಲ್ಲ! ಹೀಗಾಗಿ, ತೋಟಗಾರಿಕೆ ಸಚಿವರ ತವರಿನಲ್ಲಿ ಎಂಟು ತಿಂಗಳಲ್ಲಿ ಕೇಂದ್ರ ಸಿದ್ಧಗೊಳ್ಳಲಿದೆ ಎಂಬ ಅಧಿಕಾರಿಗಳ ಭರವಸೆ ಇನ್ನೂ ಈಡೇರಿಲ್ಲ.

ಏನಾಗಿದೆ?: `ಉದ್ದೇಶಿತ ಜೈವಿಕ ಕೇಂದ್ರ ಸ್ಥಾಪಿಸಲು ಆರ್ಎಂಸಿ ಯಾರ್ಡ್ನಲ್ಲಿರುವ ತೋಟಗಾರಿಕಾ ಕ್ಷೇತ್ರದಲ್ಲಿ ಜಾಗ ನಿಗದಿಪಡಿಸಲಾಗಿದೆ. ಈ ಜಾಗ ಎಪಿಎಂಸಿಗೆ ಸೇರಿದ್ದು. ಬಹಳ ವರ್ಷಗಳ ಹಿಂದೆಯೇ `ತೋಟಗಾರಿಕಾ ಚಟುವಟಿಕೆಗಳನ್ನು ಕೈಗೊಳ್ಳುವುದಕ್ಕಾಗಿ' ಎಂದು ಇಲಾಖೆಗೆ ನೀಡಲಾಗಿದೆ. ಆದರೆ, ಜೈವಿಕ ಕೇಂದ್ರ ಆರಂಭಿಸುವ ಕುರಿತು ಪ್ರಕಟಿಸಿದ ಸಂದರ್ಭ (2-3 ವರ್ಷದ ಹಿಂದೆ) ಎಪಿಎಂಸಿಯವರು ಆಕ್ಷೇಪ ತೆಗೆದಿದ್ದಾರೆ. ಜಾಗವನ್ನು ನಿಗದಿತ ಉದ್ದೇಶಕ್ಕೆ ಬಳಸದೇ ಖಾಲಿ ಬಿಡಲಾಗಿದೆ ಎಂಬುದು ಅವರ ಆಕ್ಷೇಪ. ಇದರಿಂದಾಗಿ, ಜೈವಿಕ ಕೇಂದ್ರ ಸ್ಥಾಪನೆಗೆ ಟೆಂಡರ್ ಕರೆಯುವುದಕ್ಕೆ ಆಗಿಲ್ಲ' ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಉಮೇಶ್ ಶಂಕರ್ ಮಿರ್ಜಿ `ಪ್ರಜಾವಾಣಿ'ಗೆ ತಿಳಿಸಿದರು.

`ಆದರೆ, ಎಪಿಎಂಸಿಯವರು ಹೇಳುವ ಮಾತಿನಲ್ಲಿ ಸತ್ಯವಿಲ್ಲ. ತೋಟಗಾರಿಕೆ ಕ್ಷೇತ್ರ ಸಿದ್ಧವಿದೆ. ಆವರಣ ಗೋಡೆ ನಿರ್ಮಿಸಲಾಗಿದೆ ಎಂದು ಮನವರಿಕೆ ಮಾಡಿಕೊಡಲಾಗಿದೆ. ಎಪಿಎಂಸಿಯಿಂದ ನಿರಾಕ್ಷೇಪಣಾ ಪತ್ರ ಶೀಘ್ರವೇ ಸಿಗುವ ನಿರೀಕ್ಷೆ ಇದೆ. ನಂತರ, ಟೆಂಡರ್ ಪ್ರಕ್ರಿಯೆಗಾಗಿ ಸರ್ಕಾರಕ್ಕೆ ಬರೆಯಲಾಗುವುದು. ಕಾಮಗಾರಿ ಆರಂಭವಾದರೆ ಒಂದು ವರ್ಷದೊಳಗೆ ಪೂರ್ಣಗೊಳ್ಳಲಿದೆ' ಎಂದು ಹೇಳಿದರು.

ಅನುಕೂಲಗಳೇನು?: ಉದ್ದೇಶಿತ ಜೈವಿಕ ಕೇಂದ್ರದಲ್ಲಿ ಅಂಗಾಂಶ ಕೃಷಿ (ಟಿಶ್ಯು ಕಲ್ಚರ್)ಯಲ್ಲಿ ಬಾಳೆ ಸಸಿಗಳನ್ನು ಬೆಳೆಸಿ ರೈತರಿಗೆ ಒದಗಿಸಲಾಗುವುದು. ಪ್ರಸ್ತುತ ಮಧ್ಯ ಕರ್ನಾಟಕದಲ್ಲಿ, ಅಂಗಾಂಶ ಕೃಷಿ ಬಾಳೆ ಸಸಿಗಳಿಗೆ ರೈತರು ಹುಬ್ಬಳ್ಳಿ ಆಥವಾ ಬೆಂಗಳೂರಿಗೆ ಹೋಗಬೇಕಾದ ಸ್ಥಿತಿ ಇದೆ. ಜಿಲ್ಲೆಯಲ್ಲಿ ದಾವಣಗೆರೆ, ಹೊನ್ನಾಳಿ, ಹರಿಹರ ಮತ್ತು ಚನ್ನಗಿರಿ ತಾಲ್ಲೂಕಿನಲ್ಲಿ ಹೆಚ್ಚಾಗಿ ಬಾಳೆ ಕಂಡುಬರುತ್ತದೆ.

ಜಿಲ್ಲೆಯಲ್ಲಿ ಒಟ್ಟು ಒಂದೂವರೆ ಸಾವಿರ ಹೆಕ್ಟೇರ್ನಲ್ಲಿ ಬಾಳೆ ಬೆಳೆಯಲಾಗುತ್ತಿದೆ. ವಾರ್ಷಿಕ 15ರಿಂದ 20 ಲಕ್ಷ ಸಸಿಗಳು ಬೇಕಾಗುತ್ತವೆ. ಈ ಸಸಿಗಳನ್ನು ದಾವಣಗೆರೆಯಲ್ಲಿಯೇ ಪಡೆಯಲು ಜೈವಿಕ ಕೇಂದ್ರ ನೆರವಾಗಲಿದೆ. ಹೀಗಾಗಿ ರೈತರ ಅಲೆದಾಟ ತಪ್ಪುತ್ತದೆ ಎನ್ನುತ್ತಾರೆ ಅಧಿಕಾರಿಗಳು.

ಇಲ್ಲಿ, ಅಣಬೆ ಸಹ ಉತ್ಪಾದಿಸಲಾಗುವುದು. ಲಘು ಪೋಷಕಾಂಶ (ಮ್ಯಾಂಗನೀಸ್, ಕಾಪರ್,ಬೋರಾನ್ ಇತ್ಯಾದಿ)ಗಳ ವಿಶ್ಲೇಷಣೆ ಮಾಡಲಾಗುವುದು. ರೈತರು, ಅಧಿಕಾರಿಗಳಿಗೆ ಇಲಾಖೆಯ ಕಾರ್ಯಕ್ರಮಗಳ ಕುರಿತು ತರಬೇತಿ ನೀಡಲಾಗುವುದು. ಅಂಗಾಂಶ ಕೃಷಿ ಪ್ರಯೋಗಾಲಯ ಸ್ಥಾಪಿಸಲಾಗುವುದು.

`ರಸಾಯನಿಕ ಗೊಬ್ಬರದಿಂದ ಮಣ್ಣು ಫಲವತ್ತತೆ ಕಳೆದುಕೊಳ್ಳುತ್ತಿದೆ. ಹೀಗಾಗಿ, ಜೈವಿಕ ರಸಗೊಬ್ಬರ,ಕ್ರಿಮಿನಾಶಕ ಉತ್ಪಾದಿಸಲಾಗುವುದು. ಬೆಂಗಳೂರಿನ ಹುಳಿಮಾವುನಲ್ಲಿ ಇರುವಂತೆ ಇದೊಂದು ತರಬೇತಿ ಕೇಂದ್ರವಾಗಿಯೂ ಕಾರ್ಯನಿರ್ವಹಿಸಲಿದೆ ಎನ್ನುತ್ತಾರೆ ಉಮೇಶ್ ಶಂಕರ್ ಮಿರ್ಜಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.