ಭಾನುವಾರ, ಜುಲೈ 25, 2021
22 °C

ಕಾಡಿನಲ್ಲಿ ಗ್ರ್ಯಾಂಡ್ ಫಿನಾಲೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುವರ್ಣ ವಾಹಿನಿಯ ‘ಪ್ಯಾಟೆ ಮಂದಿ ಕಾಡಿಗ್ ಬಂದ್ರು’ ರಿಯಾಲಿಟಿ ಶೋನ ಗ್ರ್ಯಾಂಡ್ ಫಿನಾಲೆ ಜನವರಿ 2ರಂದು ಸತತ ಹದಿನಾಲ್ಕು ಗಂಟೆಗಳ ಕಾಲ ಪ್ರಸಾರವಾಗಲಿದೆ. ಕಾಡಿನ ಮಧ್ಯೆ ಪ್ರಾರಂಭವಾದ ಶೋವೊಂದರ ಫಿನಾಲೆ ಕಾಡಿನ ಮಧ್ಯೆ ನಡೆಯುತ್ತಿರುವುದು ವಿಶ್ವದಲ್ಲಿ ಇದೇ ಮೊದಲು ಎನ್ನುವುದು ಈ ರಿಯಾಲಿಟಿ ಶೋ ತಂಡದ ಅನಿಸಿಕೆ.‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು’ ಹಾಗೂ ‘ಹಳ್ಳಿ ಹೈದ ಪ್ಯಾಟೆಗ್ ಬಂದ’ ರಿಯಾಲಿಟಿ ಶೋಗಳ ಯಶಸ್ಸಿನ ಜಾಡಿನಲ್ಲಿ ರೂಪುಗೊಂಡಿರುವ ‘ಪ್ಯಾಟೆ ಮಂದಿ ಕಾಡಿಗ್ ಬಂದ್ರು’ ಬುಡಕಟ್ಟು ಜನಾಂಗದ ಬದುಕಿನ ವಿವಿಧ ಆಯಾಮಗಳನ್ನು ಕಿರುತೆರೆಯಲ್ಲಿ ಬಿಂಬಿಸುವ ಪ್ರಯತ್ನ. ಹನ್ನೆರಡು ಪ್ಯಾಟೆ ಮಂದಿ ನಾಡಿನ ಕೊಳ್ಳುಬಾಕ ಸಂಸ್ಕೃತಿಯನ್ನು ಬಿಟ್ಟು ಕಾಡಿನ ಬದುಕಿಗೆ ಒಗ್ಗಿಕೊಳ್ಳಲು ನಡೆಸುವ ಪ್ರಯತ್ನ ಈ ಶೋನಲ್ಲಿ ನಡೆದಿದೆ. ಜ.2, ಭಾನುವಾರ ಬೆಳಿಗ್ಗೆ 9ರಿಂದ ರಾತ್ರಿ 11ರವರೆಗೆ ‘ಪ್ಯಾಟೆ ಮಂದಿ ಕಾಡಿಗ್ ಬಂದ್ರು’ ಗ್ರಾಂಡ್ ಫಿನಾಲೆ ಕಾರ್ಯಕ್ರಮ ಪ್ರಸಾರವಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.