ರಂಜಾನ್ ಉಪವಾಸಕ್ಕೆ ಅದರದ್ದೇ ಮಹತ್ವವಿದೆ. ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸ ಇರುವುದು ಸುಲಭವಲ್ಲ. ಹನಿ ನೀರನ್ನೂ ಕುಡಿಯದೆ ಮನಸ್ಸನ್ನು ಸ್ಥಿಮಿತದಲ್ಲಿಟ್ಟುಕೊಳ್ಳುವ ಈ ಮಾಸದಲ್ಲಿ ಮುಸ್ಲಿಂ ಬಾಂಧವರ ಉಪವಾಸದ ಹಿಂದೆ ಬಗೆಬಗೆಯ ಅನುಭವಗಳಿವೆ. ಅದು ಭಕ್ತಿಗಷ್ಟೇ ಸೀಮಿತಗೊಳ್ಳದೆ ಭಾವನಾತ್ಮಕ ಸಂಬಂಧ ಬೆಸೆಯುವಂಥ ಉಪವಾಸ. ದಾನಕ್ಕೆ ಇದು ಒಳ್ಳೆಯ ಕಾಲ ಎನ್ನುವವರೂ ಇದ್ದಾರೆ. ರಂಜಾನ್ ಉಪವಾಸ ಹಾಗೂ ಮರೆಯಲಾಗದ ಹಬ್ಬದ ಅನುಭವವನ್ನು `ಮೆಟ್ರೊ' ಜೊತೆ ಕೆಲವರು ಹಂಚಿಕೊಂಡಿದ್ದಾರೆ. ಗತಿಸಿದ ಹೆಂಡತಿಯ ನೆನಪು ಒಬ್ಬರಿಗಾದರೆ, ಇನ್ನೊಬ್ಬರಿಗೆ ಕಳೆದ ಬಾಲ್ಯದ ರಂಜಾನ್ ನೆನಪುಗಳೇ ಮಧುರ.

ಮೃಗೀಯ ಯೋಚನೆಗಳು ಸಾಯಬೇಕು
ಸಂಪ್ರದಾಯಗಳನ್ನು ನಾನು ಆಚರಿಸುತ್ತೇನೆ, ಅನುಕರಣೆ ಮಾಡುವುದಿಲ್ಲ. ಅನುಕರಣೆ ಮಾಡುವವರು ಬೇಕಾದಷ್ಟು ಜನ ಸಿಗುತ್ತಾರೆ. ಆದರೆ ಅವುಗಳ ಸತ್ಯವನ್ನು ಅರಿತುಕೊಂಡು ಆಚರಣೆ ಮಾಡುವವರು ಕಡಿಮೆ ಇದ್ದಾರೆ.

ನಮ್ಮ ಧರ್ಮದಲ್ಲಿ ಹೇಳಿರುವ ನಿಯಮಗಳನ್ನು ಸರಿಯಾಗಿ ಅರ್ಥೈಸಿಕೊಳ್ಳುವ ಅವಶ್ಯಕತೆ ಇದೆ. ಮೂವತ್ತು ದಿನ ಉಪವಾಸ ಎಂದರೆ ಅದು ಕೇವಲ ಹೊಟ್ಟೆಯ ಉಪವಾಸವಲ್ಲ. ನಾನು ಅಂದುಕೊಂಡಂತೆ ನಮ್ಮೆಲ್ಲಾ ಇಂದ್ರಿಯಗಳಿಗೂ ಈ ಉಪವಾಸ ಆಗಬೇಕು. ಆದರೆ ಹೆಚ್ಚಿನವರು ಉಪವಾಸ ಎಂದುಕೊಂಡು ಕೆಟ್ಟ ಕೆಲಸಗಳನ್ನು ಮಾಡುತ್ತಾ, ಬೇರೆಯವರನ್ನು ಅವಾಚ್ಯ ಶಬ್ದಗಳಿಂದ ಬೈಯುತ್ತಾ, ಇನ್ನೊಬ್ಬರೊಂದಿಗೆ ಜಗಳವಾಡುತ್ತಾ ಕಾಲ ಕಳೆಯುತ್ತಾರೆ. ಇದರಿಂದ ಉಪವಾಸದ ನಿಜವಾದ ಉದ್ದೇಶ ಈಡೇರಿಸಿದಂತಾಗುವುದಿಲ್ಲ.

ರಂಜಾನ್ ಸಂದರ್ಭದಲ್ಲಿ ಬಡವರಿಗೆ ಸಹಾಯ ಮಾಡಬೇಕು. ದಾನ ಮಾಡಬೇಕು. ಕಷ್ಟ ಎಂದು ಹೇಳಿಕೊಂಡು ಬಂದವರಿಗೆ ಸಹಾಯ ಮಾಡಬೇಕು ಅಂತಿದೆ. ರಂಜಾನ್ ಸಂದರ್ಭದಲ್ಲೇ ನಾವು ಜಕಾತ್ ನೀಡುವುದು. ದೇವರಲ್ಲಿ ನಂಬಿಕೆ, ಪ್ರಾರ್ಥನೆ, ಉಪವಾಸ ಹಾಗೂ ಜಕಾತ್ ಮುಸ್ಲಿಂ ಧರ್ಮದ ನಾಲ್ಕು ಆಧಾರ ಸ್ತಂಭಗಳು. ಇವುಗಳನ್ನು ಪಾಲಿಸಲೇಬೇಕು ಅಂತಿದೆ. ಕೆಲವರು ಜಕಾತ್ನಿಂದ ತಪ್ಪಿಸಿಕೊಳ್ಳುತ್ತಾರೆ. ಜಕಾತ್ ನೀಡುವುದರಲ್ಲಿರುವ ಖುಷಿ ಬೇರೆಲ್ಲೂ ಇರುವುದಿಲ್ಲ. ನಾನು ರಂಜಾನ್ ಸಂದರ್ಭದಲ್ಲಿ ಅನಾಥಾಶ್ರಮ, ಅಂಧ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡುತ್ತೇನೆ. ಜಕಾತ್ಅನ್ನು ಎಂದೂ ತಪ್ಪಿಸಿಲ್ಲ.

ನನ್ನ ನಂಬಿಕೆ ಪ್ರಕಾರ, ಈ ಸಂದರ್ಭದಲ್ಲಿ ನಮ್ಮಲ್ಲಿರುವ ಮೃಗೀಯ ಗುಣಗಳನ್ನು ಸಾಯಿಸಬೇಕೇ ಹೊರತು ಪ್ರಾಣಿಗಳನ್ನು ಸಾಯಿಸಿ ತಿಂದುಣ್ಣುವುದಲ್ಲ. ಸಂಸ್ಕೃತಿ ಎಂದರೇ ನಿಗ್ರಹಿಸಿಕೊಳ್ಳುವುದು. ಉಪವಾಸ ಪಾಲನೆ ಮಾಡಿದರೆ ಆರೋಗ್ಯ ಕೂಡ ಸುಧಾರಿಸುತ್ತದೆ ಎಂಬುದು ನನ್ನ ಸ್ವಂತ ಅನುಭವ.

ಹತ್ತು ವರ್ಷದ ಹಿಂದೆ ನನ್ನ ಪತ್ನಿ ಸುನಿಲಾ ತೀರಿಕೊಂಡಳು. ರಂಜಾನ್ ಮುಗಿದ ನಂತರ ಚಿಕಿತ್ಸೆ ಆಯ್ತು. ನಮ್ಮನ್ನು ಬಿಟ್ಟು ಹೋದಳು. ಆದರೆ ಅವಳು ಸಾಯುವಾಗ ನನ್ನ ನೆನಪನ್ನು ಹಬ್ಬದ ಹಾಗೇ ಆಚರಿಸಬೇಕು ಎಂದು ಹೊಸ ಚಿಂತನೆಯೊಂದನ್ನು ಹುಟ್ಟಿಹಾಕಿ ಹೋದಳು. ಈಗ ನಮಗೆ ಪ್ರತಿದಿನವೂ ಹಬ್ಬ. ರಂಜಾನ್ ಕೂಡ ಅಷ್ಟೇ. ಅವಳ ನೆನಪೇ ನನ್ನನ್ನು ಖುಷಿಯಾಗಿರಿಸಿದೆ.
-ಜಿ.ಎಂ.ಶಿರಹಟ್ಟಿ, ದೂರದರ್ಶನದ ನಿವೃತ್ತ ನಿರ್ದೇಶಕರು

ಕ್ಷಮೆ ನೀಡುವ ಉಪವಾಸ
ನಾನು ಏಳನೇ ತರಗತಿಯಲ್ಲಿರುವಾಗಲೇ ರಂಜಾನ್ ಉಪವಾಸ ಮಾಡುತ್ತಿದ್ದೆ. ಉಪವಾಸದಿಂದ ದೇಹ, ಮನಸ್ಸು ಹತೋಟಿಗೆ ಬರುತ್ತದೆ. ಹನ್ನೊಂದು ತಿಂಗಳು ನಾವು ತಪ್ಪು ಮಾಡಿರಬಹುದು, ಇನ್ನೊಬ್ಬರ ಮನಸ್ಸಿಗೆ ನೋವುಂಟು ಮಾಡಿರಬಹುದು. ಉಪವಾಸ ಮಾಡುವುದರಿಂದ ಅದಕ್ಕೆಲ್ಲಾ ಕ್ಷಮೆ ಸಿಗುತ್ತದೆ. ಹಾಗೇ ಈ ದಿನದಲ್ಲಿ ನಾವು ಏನೇ ಬೇಡಿಕೊಂಡರು ಅದು ನೇರವೇರುತ್ತದೆ.

ಈ ಒಂದು ತಿಂಗಳ ಉಪವಾಸ ಒಂದು ವರ್ಷದ ಸಂತಸಕ್ಕೆ ಕಾರಣವಾಗುತ್ತದೆ. ಆತ್ಮವಿಶ್ವಾಸ ಹೆಚ್ಚುತ್ತದೆ. ಜತೆಗೆ ಮನಸ್ಸು ಶಾಂತವಾಗುತ್ತದೆ. ಈ ತಿಂಗಳಲ್ಲಿ ನಾವು ಏನೇ ದುಡಿದರೂ ಅದರಲ್ಲಿ ಅರ್ಧದಷ್ಟನ್ನು ಇನ್ನೊಬ್ಬರಿಗೆ ದಾನ ಮಾಡಬೇಕು. ದ್ವೇಷ, ಅಸೂಯೆ ಸಾಧಿಸುವುದಕ್ಕಿಂತ ಪ್ರೀತಿ, ಸಹಬ್ವಾಳೆಯಿಂದ ಬದುಕು ನಡೆಸಲು ರಂಜಾನ್ ಹೇಳುತ್ತದೆ. ಆಹಾರದ ಬೆಲೆ ಏನು ಎಂಬುವುದನ್ನು ತಿಳಿಸಿಕೊಡುತ್ತದೆ.

ದ್ವಿತೀಯ ಪಿಯುಸಿಯಲ್ಲಿರುವಾಗ ನನ್ನ ಆತ್ಮೀಯ ಗೆಳತಿ ಮನೆಯಲ್ಲಿ ರಂಜಾನ್ ಆಚರಿಸಿದ್ದೆ. ಅದು ನನ್ನ ಮರೆಯಲಾಗದ ರಂಜಾನ್.
-ದಿಲ್ಶಾದ್, ನಟಿ

ದೇವನೊಬ್ಬ ನಾಮ ಹಲವು
ಪ್ರಪಂಚದಲ್ಲಿ ಜಾತಿ, ಧರ್ಮ ಬೇರೆ ಬೇರೆ ಇರಬಹುದು. ಆದರೆ ನನ್ನ ಪ್ರಕಾರ ದೇವರು ಒಬ್ಬನೇ. ಹಿಂದುಗಳು ಶಿವ ಅಂತಾರೆ, ಮುಸ್ಲಿಮರು ಅಲ್ಲಾ ಅಂತಾರೆ, ಕ್ರಿಶ್ಚಿಯನ್ನರು ಕ್ರೈಸ್ತ ಅನ್ನುತ್ತಾರೆ. ರಂಜಾನ್ ಸಂದರ್ಭದಲ್ಲಿ ಉಪವಾಸ ಮಾಡಬೇಕು ಎಂಬುದು ಮೊದಲಿನಿಂದಲೂ ನಡೆದುಕೊಂಡು ಬಂದ

ಸಂಪ್ರದಾಯ. ಉಪವಾಸ ಆಚರಿಸುವುದು ಒಳ್ಳೆಯದೇ. ಆದರೆ ನಾವು ಕಲಾವಿದರು ಅತ್ಯಂತ ಕಟ್ಟುನಿಟ್ಟಾಗಿ ಆಚರಿಸುವುದು ಕೆಲವೊಮ್ಮೆ ಕಷ್ಟವಾಗುತ್ತದೆ. ಕೆಲವು ಸಂದರ್ಭದಲ್ಲಿ ಕೆಲಸದ ಒತ್ತಡದಲ್ಲಿ ಮರೆತುಬಿಡುತ್ತೇವೆ. ಆದರೆ ಆದಷ್ಟೂ ಉಪವಾಸ ಮಾಡೇ ತೀರುತ್ತೇವೆ. ಅಭಿನಯ, ಪ್ರಯಾಣ, ಕೆಲಸ ಮಾಡುತ್ತಾ ಇರುವಾಗ ಉಪವಾಸ ಇರಲು ಆಗುವುದಿಲ್ಲ. ತಿಂಗಳು ಪೂರ್ತಿ ಮನೆಯಲ್ಲೇ ಇದ್ದವರಿಗಾದರೆ ಉಪವಾಸ ಮಾಡುವುದು ಸುಲಭ.

ನನ್ನೂರು ಬೀದರ್. ಚಿಕ್ಕವರಿರುವಾಗ ಗಸಗಸೆಯನ್ನು ಹಾಲಲ್ಲಿ ಹಾಕಿ ಕುಡೀತಿದ್ವಿ. ಖರ್ಜೂರ, ಹಾಲು, ಹಣ್ಣುಗಳನ್ನು ಸೇವಿಸುತ್ತಿದ್ದೆವು. ರಂಜಾನ್ ಸಂದರ್ಭದಲ್ಲಿ ನಾಲ್ಕರಿಂದ ಐದು ದಿನ ಪೀರ್ ಕೂರಿಸುತ್ತಿದ್ದರು. ಅಲ್ಲಿ ದೇವರ ಆರಾಧಕರೊಬ್ಬರು ಇರುತ್ತಿದ್ದರು. ಅವರು ಎಲ್ಲಾ ಸಂಪ್ರದಾಯಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಹೀಗೆ ಎಳೆಯ ವಯಸ್ಸಿನ ಕೆಲವು ರಂಜಾನ್ಗಳು ಮನಸ್ಸಿನಲ್ಲಿವೆ.
-ಬಿರಾದಾರ್, ನಟ

ಬಾಲ್ಯದ ನೆನಪು ಮಧುರ
ಹನ್ನೊಂದು ತಿಂಗಳು ನಮಗೆ ಹೇಗೆ ಬೇಕೋ ಹಾಗೇ ಇರುತ್ತೇವೆ. ಒಂದು ತಿಂಗಳಾದರೂ ಯಾವುದೇ ಮನರಂಜನೆ ಕಾರ್ಯಕ್ರಮದಲ್ಲಿ ಭಾಗವಹಿಸದೆ ದೇವರನ್ನು ಶುದ್ಧ ಮನಸ್ಸಿನಿಂದ ಪ್ರಾರ್ಥನೆ ಮಾಡಬೇಕು ಎಂಬ ಉದ್ದೇಶದಿಂದ ಈ ಆಚರಣೆ ಮಾಡುತ್ತಾರೆ. ಉಳಿದ ತಿಂಗಳು ನಾವು ಏನು ಬೇಕಾದರೂ ತಿನ್ನಬಹುದು, ಹೇಗೆ ಬೇಕಾದರೂ ಇರಬಹುದು ಆದರೆ ಈ ರಂಜಾನ್ ತಿಂಗಳು ಮಾತ್ರ ಕಾಯಾ ವಾಚಾ ಮನಸಾ ದೇವರನ್ನು ಶ್ರದ್ಧೆ ಭಕ್ತಿಯಿಂದ ಪ್ರಾರ್ಥನೆ ಮಾಡುತ್ತೇವೆ. ಈ ತಿಂಗಳಿನಲ್ಲಿ ಏನೇ ಪ್ರಾರ್ಥಿಸಿದರೂ ಅದು ನೇರವೇರುತ್ತದೆ ಎಂಬ ಮಾತಿದೆ.

ಉಪವಾಸ ಮಾಡುವುದರಿಂದ ದೇಹ ಕೂಡ ಒಂದು ತಹಬಂದಿಗೆ ಬರುತ್ತದೆ. ಮನಸ್ಸು ಶಾಂತವಾಗುತ್ತದೆ. ಸಿನಿಮಾ ಕೆಲಸದ ಒತ್ತಡ ಇರುವುದರಿಂದ ಕಳೆದ ಎರಡು ಮೂರು ವರ್ಷದಿಂದ ಉಪವಾಸ ಮಾಡುವುದಕ್ಕೆ ಆಗ್ತಾ ಇಲ್ಲ. ಮೊದಲೆಲ್ಲಾ ಮಾಡುತ್ತಿದ್ದೆ. ಮನುಷ್ಯ ಮನುಷ್ಯನ ನಡುವೆ ಪ್ರೀತಿ, ಸ್ನೇಹ ಬೆಳೆಯಬೇಕು ಇದೇ ಧರ್ಮ ಹೇಳುವ ಮಾತು.

ನಾನು ಮುಂಬೈಯಲ್ಲಿದ್ದಾಗ ರಂಜಾನ್ ಆಚರಣೆ ತುಂಬಾ ಚೆನ್ನಾಗಿತ್ತು. ಸಂಜೆ ಉಪವಾಸ ಬಿಡುವ ಸಮಯ ಇಡೀ ರಸ್ತೆಯೆಲ್ಲಾ ಮೌನವಾಗಿರುತ್ತಿತ್ತು. ಯಾವುದೇ ಮತಬೇಧವಿಲ್ಲದೇ ಜನರೆಲ್ಲರೂ ಒಟ್ಟಿಗೆ ಕುಳಿತು ಹಂಚಿ ತಿನ್ನುತ್ತಿದ್ದರು. ಗುರುತು ಪರಿಚಯವಿಲ್ಲದವರನ್ನು ಕರೆದು ತಿನ್ನುವುದಕ್ಕೆ ಕೊಡುತ್ತಿದ್ದರು. ಬಾಂಧವ್ಯ ಇದರಿಂದ ಗಟ್ಟಿಯಾಗುತ್ತಿತ್ತು. ಆ ಕ್ಷಣದ ನೆನಪುಗಳು ಇನ್ನೂ ಮರೆಯುವುದಕ್ಕೆ ಆಗುತ್ತಿಲ್ಲ.
-ಇಮ್ರಾನ್ ಸರ್ದಾರಿಯಾ, ನೃತ್ಯ ಸಂಯೋಜಕ

ಕಲೆಯೇ ದೇವರು

ಹೈಸ್ಕೂಲ್ವರೆಗೆ ಉಪವಾಸ ಮಾಡುತ್ತಿದ್ದೆ. ಈಗ ಉಪವಾಸ ಮಾಡುವುದಿಲ್ಲ ಆದರೆ ಹಬ್ಬದ ಆಚರಣೆ ಮಾಡುತ್ತೇವೆ. ನನ್ನ ಹೆಂಡತಿ ಸಾರಾ ಚೆನ್ನಾಗಿ ಬಿರಿಯಾನಿ ಮಾಡುತ್ತಾಳೆ. ರಂಜಾನ್ ಅಂದ್ರೆ ಸಾರಾಳ ಬಿರಿಯಾನಿ ಬಾಯಲ್ಲಿ ನೀರೂರಿಸುತ್ತದೆ.

ಉಪವಾಸ ಆಚರಿಸುವುದರಿಂದ ದೇಹದ ಜತೆಗೆ ಮನಸ್ಸು ಶುದ್ಧವಾಗುತ್ತದೆ. ಬಾಲ್ಯದಲ್ಲಿ ಆಚರಿಸುತ್ತಿದ್ದ ಉಪವಾಸಗಳು ಈಗಲೂ ಮನಸ್ಸಿನಲ್ಲಿ ಹಸಿರಾಗಿದೆ. ಎಲ್ಲಾ ಮಕ್ಕಳು ಒಟ್ಟಿಗೆ ಸೇರಿ ಆಚರಿಸುವ ಆ ಖುಷಿ ಈಗ ಕಾಣಿಸುತ್ತಿಲ್ಲ.
ನನ್ನ ಪಾಲಿಗೆ ನನ್ನ ಕಲೆಯೇ ದೇವರು. ಸ್ಟುಡಿಯೊವೇ ಮಸೀದಿ.
-ಯೂಸುಫ್ ಅರಕ್ಕಲ್, ಕಲಾವಿದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.