ಭಾನುವಾರ, ಏಪ್ರಿಲ್ 11, 2021
29 °C

ಕಾನೂನು ಅರಿವಿನಿಂದ ಮಹಿಳೆ ಸಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುರಪುರ: ಭಾರತ ಪುರುಷ ಪ್ರಧಾನ ದೇಶ. ಈಗೀಗ ಮಹಿಳೆಯರೂ ಎಲ್ಲಾ ರಂಗಗಳಲ್ಲಿ ಮುಂದೆ ಬರುತ್ತಿದಾರೆ. ಮಹಿಳೆ ನಾಲ್ಕು ಗೋಡೆಗಳ ಹೊರಗೆ ಕೆಲಸ ಮಾಡಲು ಸಾಧ್ಯ ಎಂದು ನಿರೂಪಿಸುತ್ತಿದ್ದಾಳೆ. ಆದರೆ ಮಹಿಳೆಯರ ಮೇಲೆ ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಲೆ ಇವೆ. ಇದನ್ನು ತಡೆ ಗಟ್ಟಲು ಮಹಿಳೆಯರು ಕಾನೂನು ತಿಳಿವಳಿಕೆ ಪಡೆಯುವುದು ಅವಶ್ಯವಾಗಿದೆ. ಕಾನೂನಿನ ಅರಿವಿನಿಂದ ಮಹಿಳೆಯರು ಸಬಲರಾಗುತ್ತಾರೆ ಎಂದು ಹಿರಿಯ ಶ್ರೇಣಿಯ ನ್ಯಾಯಾಧೀಶ ಲೋಕಪ್ಪ ಎನ್.ಆರ್. ಪ್ರತಿಪಾದಿಸಿದರು.ರಂಗಂಪೇಟೆಯ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಮಹಿಳೆಯರಿಗಾಗಿ ಏರ್ಪಡಿಸಿದ್ದ ಕಾನೂನು ಅರಿವು ಮತ್ತು ನೆರವು ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.ಮುಖ್ಯ ಅತಿಥಿಯಾಗಿದ್ದ ಕಿರಿಯ ಶ್ರೇಣಿಯ ನ್ಯಾಯಾಧೀಶೆ ಮಂಜುಳಾ ಉಂಡಿ ಮಾತನಾಡಿ, ಕಟ್ಟುನಿಟ್ಟಿನ ಕಾನೂನು ಕ್ರಮ ಮತ್ತು ಪೊಲೀಸರ ನೆರವು ಇದ್ದರೂ ಮಹಿಳೆ ಶೋಷಣೆಗೆ ಒಳಗಾಗುತ್ತಿರುವುದು ದೊಡ್ಡ ದುರಂತ. ಪ್ರತಿಯೊಬ್ಬ ಮಹಿಳೆ ಸಾಕ್ಷರಳಾಗಿ, ಕಾನೂನಿನ ಬಗ್ಗೆ ತಿಳಿದುಕೊಂಡು, ಸ್ವಾವಲಂಬನೆ ಜೀವನ ನಡೆಸಿದಾಗ ಶೋಷಣೆಯಿಂದ ಮುಕ್ತಳಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.‘ಜನನ ಮತ್ತು ಮರಣ ದಾಖಲಾತಿ’ ಕಾನೂನಿನ ಬಗ್ಗೆ ನ್ಯಾಯವಾದಿ ಶಿವಾನಂದ ಅವಂಟಿ, ‘ಮಹಿಳಾ ದೌರ್ಜನ್ಯ, ಬಾಲ್ಯ ವಿವಾಹ, ಬಾಲಕಾರ್ಮಿಕ ತಡೆ ಕಾಯ್ದೆಯ ಬಗ್ಗೆ ನ್ಯಾಯವಾದಿ ಬಿ.ಕೆ. ದೇಸಾಯಿ ವಿಶೇಷ ಉಪನ್ಯಾಸ ನೀಡಿದರು.ನ್ಯಾಯವಾದಿಗಳಾದ ಜಿ. ಎಸ್. ಪಾಟೀಲ, ರಮಾನಂದ ಕವಲಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಭೀಮಣ್ಣ ಅವಂಟಿ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿಗಳಾದ ದೇವಿಂದ್ರಪ್ಪ ಬೇವಿನಕಟ್ಟಿ, ಎಸ್. ಎಂ. ಕನಕರೆಡ್ಡಿ ವೇದಿಕೆಯಲ್ಲಿದ್ದರು.ಶಿಕ್ಷಕ ಈರಣ್ಣ ಉಕ್ಕಲಿ ಸ್ವಾಗತಿಸಿದರು. ವಕೀಲರ ಸಂಘದ ಕಾರ್ಯದರ್ಶಿ ವೆಂಕಾರೆಡ್ಡಿ ಬೋನ್ಹಾಳ ನಿರೂಪಿಸಿದರು. ಶಿಕ್ಷಕ ಅಯುಬ ಪಾಶಾ ವಂದಿಸಿದರು.ಸಂಸ್ಥೆಯ ಕಾರ್ಯದರ್ಶಿ ಬಸವರಾಜ ಚಟ್ಟಿ, ಉಪಾಧ್ಯಕ್ಷ ವೆಂಕಣ್ಣಯ್ಯ ಕಡಬೂರ್, ರಾಮಾಂಜನೇಯ ಪೋಲಂಪಲ್ಲಿ, –ಯಜ್ಞೇಶ್ವರಭಟ್, ಮುಖ್ಯ ಗುರು ಶಿವಶರಣಪ್ಪ ದೊಡ್ಡಮನಿ, ಶಿಕ್ಷಕರಾದ ಕಮಲಾಕರ ಕುಲಕರ್ಣಿ, ನಾಗಭೂಷಣ ದೇಸಾಯಿ, ಪದ್ಮಾಕ್ಷಿ ಶಹಾಪುರಕರ್, ಸಿದ್ದಮ್ಮ ಗೋಲಗೇರಿ ಇತರರು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.