ಮಂಗಳವಾರ, ಮೇ 24, 2022
31 °C

ಕಾಫಿ ಬಳಕೆ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): 2009-10ನೇ ಸಾಲಿನಲ್ಲಿ ದೇಶದ ಒಟ್ಟು ಕಾಫಿ ಬಳಕೆ ಶೇ 7ರಷ್ಟು ಹೆಚ್ಚಿದ್ದು, 1,03,500 ಟನ್‌ಗಳಷ್ಟಾಗಿದೆ ಎಂದು ಅಂತರರಾಷ್ಟ್ರೀಯ ಕಾಫಿ ಒಕ್ಕೂಟ (ಐಸಿಒ) ಹೇಳಿದೆ.2009ರಲ್ಲಿ ದೇಶದಲ್ಲಿ 96,300 ಟನ್‌ಗಳಷ್ಟು ಕಾಫಿ ಬಳಕೆ ದಾಖಲಾಗಿತ್ತು. ಭಾರತೀಯ ಕಾಫಿ ಮಂಡಳಿ 2010ನೇ ಸಾಲಿನಲ್ಲಿ 1,08,000 ಟನ್‌ಗಳಷ್ಟು ಕಾಫಿ ಬಳಕೆ ಅಂದಾಜಿಸಿದೆ.ಏಷ್ಯಾದ 3ನೇ ಅತಿ ದೊಡ್ಡ ಕಾಫಿ ಉತ್ಪಾದಕ ದೇಶ ಭಾರತವಾಗಿದ್ದು, ಒಟ್ಟು ಉತ್ಪಾದನೆಯೂ ವರ್ಷದಿಂದ ವರ್ಷಕ್ಕೆ ಶೇ 6ರಷ್ಟು ಹೆಚ್ಚಿದೆ. ಅಂತರರಾಷ್ಟ್ರೀಯ ಕಾಫಿ ಒಕ್ಕೂಟದ ಪ್ರಕಾರ, 2010ರಲ್ಲಿ ಜಾಗತಿಕವಾಗಿ ಕಾಫಿ ಬಳಕೆ ಶೇ 2ರಷ್ಟು ಹೆಚ್ಚಿದ್ದು, 135 ದಶಲಕ್ಷ ಚೀಲಗಳಷ್ಟಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.