ಕಾಫಿ: ರಫ್ತು ಹೆಚ್ಚಳ
ನವದೆಹಲಿ (ಪಿಟಿಐ): ಜಾಗತಿಕ ಮಾರುಕಟ್ಟೆಯಲ್ಲಿನ ಬೇಡಿಕೆ ಹೆಚ್ಚಳದ ಕಾರಣಕ್ಕೆ ದೇಶಿ ಕಾಫಿ ರಫ್ತು ಪ್ರಮಾಣವು 2010-11ರ ಕಾಫಿ ವರ್ಷದಲ್ಲಿ ಶೇ 34ರಷ್ಟು ಹೆಚ್ಚಳ ದಾಖಲಿಸಿದೆ.
ಈ ಹಿಂದಿನ ಕಾಫಿ ವರ್ಷದಲ್ಲಿ (2009ರ ಅಕ್ಟೋಬರ್ನಿಂದ 2010ರ ಸೆಪ್ಟೆಂಬರ್) 2.68 ಲಕ್ಷ ಟನ್ಗಳಷ್ಟು ಕಾಫಿ ರಫ್ತಾಗಿದ್ದರೆ, 2010-11ರಲ್ಲಿ 3.54 ಲಕ್ಷ ಟನ್ಗಳಷ್ಟು ರಫ್ತು ದಾಖಲಾಗಿದೆ ಎಂದು ಕಾಫಿ ಮಂಡಳಿ ತಿಳಿಸಿದೆ. ಕಾಫಿ ರಫ್ತು ಹೆಚ್ಚಳದಿಂದಾಗಿ ವರಮಾನವು ಶೇ 74ರಷ್ಟು ಏರಿಕೆಯಾಗಿದೆ.
ಹಿಂದಿನ ವರ್ಷದ ್ಙ 2,754 ಕೋಟಿಗಳಿಗೆ ಹೋಲಿಸಿದರೆ ್ಙ 4,793 ಕೋಟಿಗಳಿಗೆ ಹೆಚ್ಚಳಗೊಂಡಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ 9 ತಿಂಗಳಲ್ಲಿ ಕಾಫಿ ರಫ್ತು ಪ್ರಮಾಣವು ಶೇ 30ರಷ್ಟು ಹೆಚ್ಚಳಗೊಂಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.