ಕಾಬೂಲ್ (ಪಿಟಿಐ): ತಾಲಿಬಾನ್ ಉಗ್ರರು ಇಲ್ಲಿನ ಸಂಸತ್ ಭವನ, ರಾಯಭಾರ ಕಚೇರಿಗಳು, ಸರ್ಕಾರಿ ಕಚೇರಿಗಳು, ವಿಮಾನ ನಿಲ್ದಾಣವನ್ನು ಗುರಿಯಾಗಿರಿಸಿಕೊಂಡು ಭಾನುವಾರ ಏಕಾಏಕಿ ನಡೆಸಿದ ಸಂಯೋಜಿತ ದಾಳಿಗಳಿಂದ ಕಾಬೂಲ್ ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿದೆ.

ಭಾರತೀಯರು ಸುರಕ್ಷಿತ
ಆಫ್ಘಾನಿಸ್ತಾನದಲ್ಲಿ ಭಾರತೀಯರೆಲ್ಲರೂ ಸುರಕ್ಷಿತರಾಗಿದ್ದು, ಅವರನ್ನು ಗುರಿಯಾಗಿರಿಸಿ ನಡೆಸಿದ ದಾಳಿ ಇದಲ್ಲ ಎಂದು ಭಾರತೀಯ ರಾಯಭಾರಿ ಗೌತಮ್ ಮುಖ್ಯೋಪಾಧ್ಯಾಯ ತಿಳಿಸಿದ್ದಾರೆ.
ದಾಳಿ ನಡೆದ ಸ್ಥಳದಿಂದ ಭಾರತೀಯ ರಾಯಭಾರ ಕಚೇರಿಯು 2-3 ಕಿ.ಮೀ ದೂರದಲ್ಲಿದ್ದು, ಅದಕ್ಕೆ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಐಟಿಬಿಪಿ ಪ್ರಧಾನ ನಿರ್ದೇಶಕ ಜನರಲ್ ರಂಜಿತ್ ಸಿನ್ಹಾ ತಿಳಿಸಿದ್ದಾರೆ.

ಘಟನೆಯಲ್ಲಿ 7 ಉಗ್ರರು ಸಾವಿಗೀಡಾಗಿದ್ದಾರೆ. ಜೊತೆಗೆ ನಾಗರಿಕರು ಸೇರಿದಂತೆ ಇತರ ಹಲವರು ಸತ್ತಿರಬಹುದು ಎಂದು ಶಂಕಿಸಲಾಗಿದೆ. 11 ಪೊಲೀಸರು ಗಾಯಗೊಂಡಿದ್ದಾರೆ. ಆದರೆ ಸಾವು ನೋವಿನ ನಿಖರ ಸಂಖ್ಯೆ ಲಭ್ಯವಾಗಿಲ್ಲ ಎಂದು ಒಳಾಡಳಿತ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಕೈಬಾಂಬ್ಗಳನ್ನು ಹೊಂದಿದ್ದ ಉಗ್ರರು ವಜೀರ್ ಅಕ್ಬರ್ ಖಾನ್ ಪ್ರದೇಶದಲ್ಲಿನ ನೂತನ ಐಶಾರಾಮಿ ಹೋಟೆಲ್ `ಕಾಬೂಲ್ ಸ್ಟಾರ್~ ಮೇಲೆ ಆತ್ಮಾಹುತಿ ದಾಳಿ ನಡೆಸಿ ಅದನ್ನು ವಶಕ್ಕೆ ತೆಗೆದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.