ಶನಿವಾರ, ಮೇ 15, 2021
22 °C

ಕಾಬೂಲ್: ಸೈನಿಕನ ಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಬೂಲ್ (ಪಿಟಿಐ): ಆಫ್ಘನ್ ರಾಷ್ಟ್ರೀಯ ಸೇನೆಯ ಸೈನಿಕನೊಬ್ಬ ಐಎಸ್‌ಎಎಫ್ ಯೋಧನ ಮೇಲೆ ಗುಂಡು ಹಾರಿಸಿದ ನಂತರ ನಡೆದ ಗುಂಡಿನ ದಾಳಿಯಲ್ಲಿ ಸತ್ತಿದ್ದಾನೆ.ಕಂದಹಾರ್‌ದಲ್ಲಿ ಸೇನಾ ಶಿಬಿರದಲ್ಲಿ ಫೈಸಲ್ ಎಂಬ ಸೈನಿಕ ಐಎಸ್‌ಎಎಫ್ ಯೋಧನ ಮೇಲೆ ಗುಂಡು ಹಾರಿಸಿದ್ದರಿಂದ ಪ್ರತಿಯಾಗಿ ಗುಂಡಿನ ದಾಳಿ ನಡೆಸಲಾಯಿತು. ಫೈಸಲ್ ಹಾರಿಸಿದ ಗುಂಡು ಅದೃಷ್ಟವಶಾತ್ ಐಎಸ್‌ಎಎಫ್ ಯೋಧನಿಗೆ ತಗುಲಲಿಲ್ಲ. ಆತ ಪ್ರತಿಯಾಗಿ ಗುಂಡಿನ ದಾಳಿ ನಡೆಸಿದ್ದರಿಂದ ಫೈಸಲ್ ಸ್ಥಳದಲ್ಲಿಯೇ ಸತ್ತಿದ್ದಾನೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.ಈ ಸೇನಾ ಶಿಬಿರವು ಆಫ್ಘಾನಿಸ್ತಾನ ಸೇನೆಗೆ ಸೇರಿದ್ದಾದರೂ ಅಲ್ಲಿ ವಿದೇಶಿ ಸೈನಿಕರು ಸಲಹೆಗಾರರಾಗಿ ಮತ್ತು ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.