ಸೋಮವಾರ, ಜನವರಿ 20, 2020
18 °C

ಕಾರವಾರಕ್ಕೆ ರಾತ್ರಿ ರೈಲು ಬೇಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರಿನಿಂದ ಕಾರವಾರಕ್ಕೆ ಈಗ ವಾರದಲ್ಲಿ ಮೂರು ದಿನ ಹಗಲು ರೈಲು (ಬೆಳಿಗ್ಗೆ 7.30ಕ್ಕೆ) ಸಂಚರಿಸುತ್ತಿದೆ. ಆದರೆ ಅದು ಕುಂದಾಪುರಕ್ಕೆ ಬರುವಾಗ ರಾತ್ರಿ 8.45 ಆಗಿರುತ್ತದೆ. ಅಲ್ಲಿಂದ ಬೈಂದೂರು, ಭಟ್ಕಳ ಮೂಲಕ  ಕಾರವಾರಕ್ಕೆ ಬರುವ ವೇಳೆಗೆ ರಾತ್ರಿ 10 ಗಂಟೆ ದಾಟಿರುತ್ತದೆ. ಅಲ್ಲಿಂದ ಸುತ್ತಮುತ್ತಲ ಊರುಗಳಿಗೆ ಹೋಗುವ ಪ್ರಯಾಣಿಕರಿಗೆ ಬಸ್ಸಿನ ಅನುಕೂಲತೆಗಳಿಲ್ಲ. ಹೀಗಾಗಿ ಹಗಲು ರೈಲಿನಲ್ಲಿ ಸಂಚರಿಸಲು ಜನರು ಹಿಂಜರಿಯುತ್ತಾರೆ.ಆದರೆ ಬೆಂಗಳೂರಿನಿಂದ ರಾತ್ರಿ ರೈಲು ಆರಂಭವಾದರೆ ಬೆಳಗಿನ ವೇಳೆಗೆ ಕುಂದಾಪುರ, ಬೈಂದೂರು, ಭಟ್ಕಳ, ಕಾರವಾರಗಳಲ್ಲಿ ಇಳಿದು ತಂತಮ್ಮ ಊರುಗಳಿಗೆ ಹೋಗುವ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ. ರೈಲ್ವೆ ಇಲಾಖೆಯ  ಅಧಿಕಾರಿಗಳು ಜನ ಪ್ರತಿನಿಧಿಗಳು ಹಾಗೂ ಸಂಘ ಸಂಸ್ಥೆಗಳು ಇದರ ಬಗ್ಗೆ ಗಮನಹರಿಸಿ ರಾತ್ರಿ ರೈಲು ಸಂಚಾರಕ್ಕೆ ಅವಕಾಶ ಮಾಡಿಕೊಡಲಿ.

 

ಪ್ರತಿಕ್ರಿಯಿಸಿ (+)