ಕಾರವಾರ: ಕರಾವಳಿಯಲ್ಲಿ ಮಂಗಳವಾರ ಬಿಡುವು ನೀಡಿದ ಮಳೆ, ಘಟ್ಟ ಮತ್ತು ಅರೆಬಯಲು ಸೀಮೆ ತಾಲ್ಲೂಕುಗಳಲ್ಲಿ ದಿನವಿಡೀ ಸುರಿದಿದೆ. ಆದರೆ, ಆಸ್ತಿಪಾಸ್ತಿಗೆ ಹಾನಿ ಆಗಿರುವ ಬಗ್ಗೆ ವರದಿಯಾಗಿಲ್ಲ.

ಘಟ್ಟದ ಮೇಲಿನ ತಾಲ್ಲೂಕುಗಳ ಪೈಕಿ ಶಿರಸಿ, ಯಲ್ಲಾಪುರ ತಾಲ್ಲೂಕುಗಳಲ್ಲಿ ಮಳೆ ಸುರಿದಿದೆ. ಮಂಗಳವಾರ 8.30ಕ್ಕೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಾದ್ಯಂತ ಒಟ್ಟು 640.8 ಮಿ.ಮೀ. ಮಳೆಯಾಗಿದೆ.
ಭಟ್ಕಳ ತಾಲ್ಲೂಕು 112, ಹೊನ್ನಾವರ 100, ಅಂಕೋಲಾ 85, ಜೋಯಿಡಾ 68, ಯಲ್ಲಾಪುರ 56.4, ಕುಮಟಾ 55, ಕಾರವಾರ ತಾಲ್ಲೂಕಿನಲ್ಲಿ 56.2 ಮಿ.ಮೀ. ಮಳೆಯಾಗಿದೆ.

ಜಿಟಿಜಿಟಿ ಮಳೆ: ಬೆಳಗಾವಿ, ಧಾರ ವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲಿಯೂ ಇಡೀ ದಿನ ಜಿಟಿಜಿಟಿ ಮಳೆಯಾಗಿದೆ. ಬಳ್ಳಾರಿ, ಬಾಗಲಕೋಟೆ ಮತ್ತು ವಿಜಾಪುರದಲ್ಲಿ ಮಳೆಯಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.