ದಾವಣಗೆರೆ: ಅಲ್ಲಿ ನೂರಾರು ಕೈದಿಗಳು ಪ್ರಾಥಮಿಕ ಶಾಲಾ ಮಕ್ಕಳಂತೆ ಕುಳಿತಿದ್ದರು. ಹಲವು ಪೊಲೀಸರು, ಆಧ್ಯಾತಿಕ ವ್ಯಕ್ತಿಗಳು ಅಲ್ಲಿದ್ದರು. ಅವರೆಲ್ಲರೂ ಮಾಜಿ ಡಕಾಯಿತ ಜೀವನ ಪಯಣ ಕೇಳಿ ಅಚ್ಚರಿಗೊಂಡರು.

– ಈ ದೃಶ್ಯಾವಳಿ ಕಂಡು ಬಂದಿದ್ದು ಭಾನುವಾರ ಜಿಲ್ಲಾ ಉಪ ಕಾರಾಗೃಹದಲ್ಲಿ. ನೀತಿಬೋಧಿಸಿದ್ದು ಚಂಬಲ್ ಕಣಿವೆಯ ಭಯಾನಕ ಡಕಾಯಿತನಾಗಿದ್ದ ಪಂಚಮ್ ಸಿಂಗ್!

ಮಹಾಶಿವರಾತ್ರಿಯ ಪ್ರಯುಕ್ತ ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯ ಜಿಲ್ಲಾ ಉಪ ಕಾರಾಗೃಹದಲ್ಲಿ ಕೈದಿಗಳಿಗೆ ಹಮ್ಮಿಕೊಂಡಿದ್ದ ಮನಃ ಪರಿವರ್ತನಾ ಕುರಿತ ಕಾರ್ಯಕ್ರಮದಲ್ಲಿ ಅವರು ತಮ್ಮ ಜೀವನ ವೃತ್ತಾಂತಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

‘ನಾನು ಒಳ್ಳೆಯ ಮಾರ್ಗ ಬಿಟ್ಟು 14 ವರ್ಷಗಳ ಕಾಲ ಡಕಾಯಿತಿ ನಡೆಸಿದ್ದೇನೆ. ನಮ್ಮ ತಂಡದಲ್ಲಿ 550 ಜನರಿದ್ದರೂ ನಮ್ಮಲ್ಲಿ ಏಕತೆಯಿತ್ತು. ಶ್ರೀಮಂತರ ಹಣ ಲೂಟಿ ಮಾಡಿ ಬಡವರಿಗೆ ಹಂಚಿದ್ದೇವೆ. ಶಾಲೆ ನಿರ್ಮಿಸಿದ್ದೇವೆ. ಯಾವುದೇ ಹೆಣ್ಣು ಮಕ್ಕಳನ್ನು ಕೆಟ್ಟ ದೃಷ್ಟಿಯಿಂದ ನೋಡಲಿಲ್ಲ. ರೈತನ ಮಗಳ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಯನ್ನು ಮರಕ್ಕೆ ಕಟ್ಟಿ ಹಾಕಿ ಸುಟ್ಟು ಹಾಕಿದ್ದೇವೆ. ಸಿನಿಮಾದಲ್ಲಿನ ಡಕಾಯಿತರ ರೀತಿ ನಮ್ಮ ಜೀವನ ಇರಲ್ಲಿಲ್ಲ’ ಎಂದು ಅವರು ತಿಳಿಸಿದರು.

‘ಆ ಜೀವನದಲ್ಲಿ ಅಶಾಂತಿಯಿತ್ತು; ನೆಮ್ಮದಿ ಇರಲಿಲ್ಲ. ಪೊಲೀಸರ ಭಯವಿತ್ತು. ನಮ್ಮ ಗುಂಪು ಹಾಗೂ ಪೊಲೀಸರ ಗುಂಪು ಎದುರಾದಾಗ ಕಾದಾಟದಲ್ಲಿ ಸಾವು– ನೋವುಗಳು ಸಂಭವಿಸುತ್ತಿದ್ದವು. ಪರಿವಾರ ಬಿಟ್ಟು ಕಾಡಿನಲ್ಲಿ ಜೀವನ ಸಾಗಿಸಬೇಕಾಗಿತ್ತು’ ಎಂದು ಡಕಾಯಿತಿ ಬದುಕಿನ ನೋವುಗಳ ಅನುಭವ ಹಂಚಿಕೊಂಡರು.

‘ಪ್ರತಿಯೊಬ್ಬರ ಅಂತರಾಳದಲ್ಲೂ ಪರಮಾತ್ಮನ ಪ್ರಕಾಶತೆ ಇರುತ್ತದೆ. ಅದನ್ನು ಮರೆತಾಗ ವ್ಯಕ್ತಿ ಉತ್ತಮ ಹಾದಿ ಬಿಟ್ಟು ಕೆಟ್ಟ ಹಾದಿಯಲ್ಲಿ ಸಾಗುತ್ತಾನೆ. ಕೆಟ್ಟ ಪರಿಸ್ಥಿತಿಯಲ್ಲೂ ಸತ್ಯತೆಯಿಂದ ನಡೆದವರು ಮುಂದೆ ಪೂಜೆಗೆ ಅರ್ಹರಾಗುತ್ತಾರೆ. ವಿಚಾರಗಳಿಂದಲೇ ಮನುಷ್ಯ ಮಾನವ, ದಾನವ, ದೇವ ಮಾನವ ಆಗುವುದು’ ಎಂದು ಅಭಿಪ್ರಾಯಪಟ್ಟರು.

‘100 ಕೊಲೆ, 200 ಡಕಾಯಿತಿ ನಡೆಸಿದ್ದಕ್ಕೆ ಗಲ್ಲು ಶಿಕ್ಷೆ ವಿಧಿಸಿದ್ದರು. ನಮ್ಮನ್ನು ಪರಿವರ್ತಿಸಿಕೊಂಡಿದ್ದರಿಂದ ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿದರು. ಪರಿಸ್ಥಿತಿಯೇ ನಮ್ಮನ್ನು ಕೆಟ್ಟವರನ್ನಾಗಿಸುತ್ತದೆ. ಇಲ್ಲಿ ಇರುವಾಗಲೇ ಮನಃ ಪರಿವರ್ತನೆ ಮಾಡಿಕೊಳ್ಳಿ. ನೀವೂ ಇಲ್ಲಿ ಸುಧಾರಣೆ ಆಗಲು ಬಂದಿರುವುದು. ಇದು ಕಾರಾಗೃಹವಲ್ಲ. ಮಂದಿರ ಅಂಥ ತಿಳಿದುಕೊಳ್ಳಿ. ಉತ್ತಮ ನಡತೆ ಇದ್ದರೆ ಶಿಕ್ಷೆ ಕಡಿಮೆ ಮಾಡುತ್ತಾರೆ. ಸರ್ಕಾರವು ನಿಮ್ಮ ಸುಧಾರಣೆಗೆ ಸಹಾಯ ಮಾಡುತ್ತದೆ’ ಎಂದು ಕೈದಿಗಳಿಗೆ ಸೂಚಿಸಿದರು.

ಬ್ರಹ್ಮಕುಮಾರಿ ಲೀಲಾಜಿ ಪಂಚಮ್ ಸಿಂಗ್, ಕಾರಾಗೃಹ ಅಧೀಕ್ಷಕ ಶಿವಕುಮಾರ್ ಮಾತನಾಡಿದರು. ಬಿ.ಕೆ.ಸುರೇಶ್, ಬಿ.ಕೆ.ವಿಶ್ವಾಸ್, ರಾಜೇಶ್, ಯುಬಿಡಿಟಿ ಪ್ರಾಂಶುಪಾಲ ಪ್ರಕಾಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.