ಕಾರಿನ ಬೆಲೆ ಮತ್ತಷ್ಟು ತುಟ್ಟಿ

7

ಕಾರಿನ ಬೆಲೆ ಮತ್ತಷ್ಟು ತುಟ್ಟಿ

Published:
Updated:

ನವದೆಹಲಿ (ಪಿಟಿಐ): ತಯಾರಿಕಾ ವೆಚ್ಚ ಹೆಚ್ಚಿರುವ ಹಿನ್ನೆಲೆಯಲ್ಲಿ, ಪ್ರಮುಖ ವಾಹನ ತಯಾರಿಕಾ ಕಂಪೆನಿಗಳಾದ ಮಾರುತಿ ಸುಜುಕಿ, ಹುಂಡೈ ಮೋಟಾರ್ ಮತ್ತು ಜನರಲ್ ಮೋಟಾರ್ಸ್ ಕಾರುಗಳ ಬೆಲೆಯನ್ನು ಹೆಚ್ಚಿಸಿವೆ.

ಇತ್ತೀಚೆಗೆ ಮಾರುಕಟ್ಟೆಗೆ ಬಿಡುಗಡೆಮಾಡಿರುವ ‘ಆಲ್ಟೋ ಕೆ-10’ ಹೊರತುಪಡಿಸಿ, ಇತರೆ ಎಲ್ಲ ಮಾದರಿಕಾರುಗಳ ಬೆಲೆಯನ್ನು ರೂ. 1000 ದಿಂದ ರೂ. 8,000 ವರೆಗೆ ಹೆಚ್ಚಿಸುವುದಾಗಿ ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ) ಹೇಳಿದೆ. ಜನವರಿ 17ರಿಂದಲೇ ಈ ಪರಿಷ್ಕೃತ ದರಗಳು ಜಾರಿಗೆ ಬಂದಿದ್ದು, ಶೇಕಡ 0.5ರಿಂದ ಶೇ 2.2ರಷ್ಟು ಬೆಲೆ ಹೆಚ್ಚಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry