ಇಸ್ಲಾಮಾಬಾದ್ (ಐಎಎನ್ ಎಸ್): ಪಾಕಿಸ್ತಾನಿ ನಟಿ ಸನಾ ಖಾನ್ ಅವರು ಹೈದರಾಬಾದ್ ನಿಂದ 30 ಕಿ. ಮೀ ದೂರದ ಲೂನಿಕೋಟ್ ಎಂಬಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಮೃತರಾಗಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಶುಕ್ರವಾರ ಸನಾ ತನ್ನ ಪತಿ, ನಟ ಬಾಬರ್ ಖಾನ್ ಅವರೊಂದಿಗೆ ಕರಾಚಿಯಿಂದ ಹೈದರಾಬಾದ್ ಗೆ ತೆರಳುತ್ತಿದ್ದ ಸಂದರ್ಭದಲ್ಲಿ
ಕಾರು ಚಲಾಯಿಸುತ್ತಿದ್ದ ಬಾಬರ್ ನಿಯಂತ್ರಣ ತಪ್ಪಿ, ಕಾರು ಮಗುಚಿ ಈ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದರು. ಘಟನೆಯ ವಿಷಯ ತಿಳಿದ ತಕ್ಷಣ ಪೊಲೀಸರು ಮತ್ತು ಆ್ಯಂಬುಲೆನ್ಸ್ ಸಹಿತ ಸ್ಥಳಕ್ಕೆ ಧಾವಿಸಿ ಲಿಯಾಖತ್ ಯೂನಿರ್ವಸಿಟಿಯ ಆಸ್ಪತ್ರೆಗೆ ದಾಖಲಿಸಿದರು.

ಸನಾ ಪ್ರಥಮ ಚಿಕಿತ್ಸೆ ಪಡೆಯುವ ಮೊದಲೇ ಮೃತರಾಗಿದ್ದು ಬಾಬರ್ ಅವರನ್ನು ಯೂನಿರ್ವಸಿಟಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿಸೆಂಬರ್ 2013ರಂದು ಸನಾ ಅವರನ್ನು ಬಾಬರ್ ವಿವಾಹವಾಗಿದ್ದರು. ಆವರ ಸ್ಥಿತಿ ಗಂಭೀರವಾಗಿದೆಯೆಂದು ತಿಳಿದು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.