ಹುಳಿಯಾರು: ಸಾರ್ವಜನಿಕರ, ಸಂಘ ಸಂಸ್ಥೆಗಳ ಹಾಗೂ ರೈತರ ಬಹು ದಿನದ ಒತ್ತಾಯದ ಮೇರೆಗೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮೊದಲ ಗೋಶಾಲೆಯು ಹೋಬಳಿಯ ಕಾರೇಹಳ್ಳಿ ರಂಗನಾಥಸ್ವಾಮಿ ದೇಗುಲದ ಆವರಣದಲ್ಲಿ ಶುಕ್ರವಾರ ಆರಂಭವಾಯಿತು.

ಗೋವೊಂದಕ್ಕೆ ಮೇವು ನೀಡುವ ಮೂಲಕ ಗೋಶಾಲೆ ಉದ್ಘಾಟಿಸಿದ ಶಾಸಕ ಸಿ.ಬಿ.ಸುರೇಶ್ಬಾಬು, ರೈತರು ಎಂಥ ಕಠಿಣ ಪರಿಸ್ಥಿತಿ ಎದುರಾದರೂ ಜಾನುವಾರುಗಳನ್ನು ಕಸಾಯಿಖಾನೆಗಳಿಗೆ ಮಾರಬಾರದು. ಆತ್ಮಹತ್ಯೆಯ ಬಗ್ಗೆ ಎಂದಿಗೂ ಆಲೋಚಿಸಬಾರದು ಎಂದು ಮನವಿ ಮಾಡಿದರು.

ಮೇವಿನ ಅಭಾವದಿಂದ ತಾಲ್ಲೂಕಿನಲ್ಲಿ ಗೋಶಾಲೆ ತೆರೆಯುವುದು ತಡವಾಯಿತು. ಗೋಶಾಲೆಗಾಗಿ ಜಿಲ್ಲಾಧಿಕಾರಿ ರೂ.10 ಲಕ್ಷ ಮಂಜೂರು ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.ತಾಲ್ಲೂಕು ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ ಬಿ.ಎನ್.ಲೋಕೇಶ್ ಮಾತನಾಡಿ, ಕಳೆದ ಮೂರು ತಿಂಗಳ ಹಿಂದೆಯೇ ಗೋಶಾಲೆ ಆರಂಭಿಸಬೇಕಿತ್ತು. ಬೋರನಕಣಿವೆ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ಮೇವು ಸಂಗ್ರಹ ಮಾಡಿದ್ದರೆ ರೈತರಿಗೆ ಅನುಕೂಲವಾಗುತ್ತಿತ್ತು ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ನಿಂಗಮ್ಮ ರಾಮಯ್ಯ, ಮಂಜುಳಮ್ಮ, ಶಿರಸ್ತೇದಾರ್ ಬೊಮ್ಮಣ್ಣ, ಕೃಷಿಕ ಸಮಾಜದ ನಿರ್ದೇಶಕ ಬಿ.ಎಲ್.ರೇಣುಕಪ್ರಸಾದ್. ಕಾರೇಹಳ್ಳಿ ರಂಗನಾಥಸ್ವಾಮಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಂಗಸ್ವಾಮಿ, ಬಿಇಒ ಸಾ.ಚಿ.ನಾಗೇಶ್, ಕೃಷಿ ಸಹಾಯಕ ನಿರ್ದೇಶಕ ಕೃಷ್ಣಪ್ಪ, ಚಿಕ್ಕನಾಯಕನಹಳ್ಳಿ ಪುರಸಭೆಯ

ಅಧ್ಯಕ್ಷ ದೊರೆಮುದ್ದಯ್ಯ, ಸದಸ್ಯ ಇಟ್ಟಿಗೆ ರಂಗಸ್ವಾಮಿ, ರೈತಸಂಘದ ಕೆಂಕೆರೆ ಸತೀಶ್, ತಿಪಟೂರು ಅರಣ್ಯ ಉಪ ವಿಭಾಗಾಧಿಕಾರಿ ನಾಗೇಂದ್ರ, ಗಾಣಧಾಳು ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೇತ್ರಾವತಿ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಎಸ್.ಸಿದ್ದರಾಮಯ್ಯ, ಕಾರೇಹಳ್ಳಿ ರಂಗನಾಥಸ್ವಾಮಿ ದೇವಾಲಯ ಸಮಿತಿಯ ಮುದ್ದರಂಗಪ್ಪ, ಕರಿಯಪ್ಪ, ದೊಡ್ಡಯ್ಯ, ಪಶು ಸಂಗೋಪನಾ ಇಲಾಖೆಯ ಎಂ.ಆರ್.ರಾಮಸ್ವಾಮಿ, ಡಾ.ಜೆ.ಸಿ.ಮಂಜುನಾಥ್ ಉಪಸ್ಥಿತರಿದ್ದರು.

7 ಗೋಶಾಲೆ ತೆರೆಯಲು 35 ಲಕ್ಷ ಬಿಡುಗಡೆ
ಮಧುಗಿರಿ: ಮಳೆ ವೈಫಲ್ಯದ ಹಿನ್ನೆಲೆಯಲ್ಲಿ ತಾಲ್ಲೂಕಿನಲ್ಲಿ ಬರ ಪರಿಸ್ಥಿತಿ ಕಾಣಿಸಿಕೊಂಡಿದೆ. ತಾಲ್ಲೂಕಿನ 68,402 ಜಾನುವಾರುಗಳ ರಕ್ಷಣೆಗಾಗಿ ಒಟ್ಟು 7 ಗೋಶಾಲೆಗಳನ್ನು ತೆರೆಯಲಾಗುವುದು. ಗೋಶಾಲೆಗಾಗಿ ಸರ್ಕಾರ ರೂ. 5 ಲಕ್ಷ ಅನುದಾನ ಬಿಡುಗಡೆ ಮಾಡಿದೆ ಎಂದು ತಹಶೀಲ್ದಾರ್ ತಬಸ್ಸಮ್ ಜಹೇರಾ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರೈತರ ಮನವಿಯ ಮೇರೆಗೆ ಸರ್ಕಾರ ದೊಡ್ಡೇರಿ ಹೋಬಳಿಯ ಗೂಬಲಗುಟ್ಟೆ ಮತ್ತು ಕೊಡಿಗೇನಹಳ್ಳಿ ಹೋಬಳಿ ದೇವರತೋಪಿನಲ್ಲಿ ಗೋಶಾಲೆ ಪ್ರಾರಂಭಿಸಿತ್ತು. ಜೂನ್ 5ರಿಂದ ಮುಂಗಾರು ಪ್ರಾರಂಭವಾಗುವುದೆಂಬ ಹವಾಮಾನ ಇಲಾಖೆಯ ವರದಿ ಹಿನ್ನೆಲೆಯಲ್ಲಿ ಈ ಎರಡೂ ಗೋಶಾಲೆಗಳನ್ನು ನಂತರದ ದಿನಗಳಲ್ಲಿ ಸ್ಥಗಿತಗೊಳಿಸಲಾಗಿತ್ತು. ಆದರೆ ಮಳೆ ವೈಫಲ್ಯದಿಂದ ತಾಲ್ಲೂಕಿನೆಲ್ಲೆಡೆ ಬರ ಪರಿಸ್ಥಿತಿ ತೀವ್ರಗೊಂಡಿದೆ ಎಂದು ವಿವರಿಸಿದರು.

ಸ್ಥಗಿತಗೊಂಡಿದ್ದ 2 ಗೋಶಾಲೆಯೊಂದಿಗೆ ಹೊಸದಾಗಿ ಐದು ಗೋಶಾಲೆಗಳನ್ನು ತೆರೆಯಲು ಸರ್ಕಾರ ಅನುಮೋದನೆ ನೀಡಿದೆ. ಪ್ರತಿ ಗೋಶಾಲೆಗೆ ತಲಾ ರೂ.5 ಲಕ್ಷದಂತೆ ಅನುದಾನ ಬಿಡುಗಡೆ ಮಾಡಿದೆ. ಮುಂದಿನ ದಿನಗಳಲ್ಲಿ ಪುರವರ ಹೋಬಳಿಯ ದೊಡ್ಡಹೊಸಹಳ್ಳಿ, ಐ.ಡಿ.ಹಳ್ಳಿ ಹೋಬಳಿಯ ಚನ್ನಮಲ್ಲನಹಳ್ಳಿ ಮತ್ತು ಗರಣಿ, ಕಸಬಾ ಹೋಬಳಿಯ ಮರುವೇಕೆರೆ ಹಾಗೂ ಕೊಡಿಗೇನಹಳ್ಳಿ ಹೋಬಳಿಯ ತೆರಿಯೂರಿನಲ್ಲಿ ಹಂತಹಂತವಾಗಿ ಗೋಶಾಲೆ ತೆರೆಯಲಾಗುವುದು ಎಂದು ನುಡಿದರು.

ಮೇವನ್ನು ಆಂಧ್ರದಿಂದ ತರಿಸಿಕೊಳ್ಳಲಾಗುತ್ತಿದೆ. ರೈತರು ತಮ್ಮ ಜಾನುವಾರುಗಳನ್ನು ಗೋಶಾಲೆಗೆ ಬಿಡಬಹುದು ಎಂದು ತಿಳಿಸಿದರು.ಮುಂಗಾರು ಹಂಗಾಮಿನ ವಾಡಿಕೆ ಮಳೆ ಬಾರದಿದ್ದರಿಂದ ಕಾಡಿಗೆ ಮೇವಿಗಾಗಿ ಹೋಗುವ ಹಾಗೂ ಒಣ ಭೂಮಿಯಲ್ಲಿ ಕೃಷಿ ಅವಲಂಬಿತ ರೈತರಲ್ಲಿರುವ ಜಾನುವಾರುಗಳಿಗೆ ಮೇವಿನ ಅವಶ್ಯಕತೆ ಇದೆ ಎಂದು ತಾಲ್ಲೂಕು ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಬಿ.ಸಂಜೀವರಾಯಪ್ಪ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.