ಶನಿವಾರ, ಏಪ್ರಿಲ್ 17, 2021
27 °C

ಕಾರ್ಕಳ: 86 ಮಲೇರಿಯ ಪ್ರಕರಣ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರ್ಕಳ: ತಾಲ್ಲೂಕಿನ ಮುಡಾರು ಗ್ರಾಮದ ಬಜಗೋಳಿ ಪೇಟೆಯಲ್ಲಿರುವ ಹೋಟೆಲ್‌ಗಳ ತ್ಯಾಜ್ಯವು ಪಟ್ಟಣದ ಜನವಸತಿ ಪ್ರದೇಶದಲ್ಲಿ ಹರಿಯುತ್ತಿದ್ದು, ಇದರಿಂದ ದುರ್ನಾತ ಹಾಗೂ ಸೊಳ್ಳೆಗಳ ಕಾಟದಿಂದ ಪರಿಸರದಲ್ಲಿ ಸಾಂಕ್ರಾಮಿಕ ರೋಗಭೀತಿ ಉಂಟಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಯರಾಮ ಸಾಲ್ಯಾನ್ ಹೇಳಿದರು.ತಾಲ್ಲೂಕು ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ತ್ರೈಮಾಸಿಕ ಸಭೆಯಲ್ಲಿ ಅವರು ಮಾತನಾಡಿದರು.

ಈ ವಿಷಯಕ್ಕೆ ದನಿಗೂಡಿಸಿದ ಕೆಲವರು ಬಜಗೋಳಿಯಲ್ಲಿ ಒಳಚರಂಡಿ ಕಾಮಗಾರಿ ಅಪೂರ್ಣವಾಗಿದೆ ಎಂದರು. ಶಾಸಕ ಗೋಪಾಲ ಭಂಡಾರಿ ಇದಕ್ಕೆ ಪ್ರತಿಕ್ರಿಯಿಸಿ ಡ್ರೈನೇಜ್ ವ್ಯವಸ್ಥೆಯಿಲ್ಲದ ಎಷ್ಟೋ ಊರುಗಳಲ್ಲಿ ತ್ಯಾಜ್ಯವನ್ನು ಹರಿಯಬಿಡುವುದಿಲ್ಲ ಬಜಗೋಳಿಯಲ್ಲಿ ಮಾತ್ರ ಏಕೆ ಹೀಗಾಗುತ್ತಿದೆ ಎಂದು ಪ್ರಶ್ನಿಸಿದರು.ಆಹಾರ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ತ್ಯಾಜ್ಯ ನಿರ್ವಹಿಸ ಲಾಗದ ಹೋಟೆಲ್‌ಗಳ ಪರವಾನಗಿ ರದ್ದು ಪಡಿಸಿ ಸಾರ್ವಜನಿಕರ ಹಿತದೃಷ್ಟಿ ಯನ್ನು ಕಾಪಾಡಿಕೊಳ್ಳಿ ಎಂದು ಅವರು ಸಲಹೆ ನೀಡಿದರು.ವರಂಗ ಗ್ರಾಮದ ತಲೆಮನೆಯಲ್ಲಿ ವೆಂಟೆಂಡ್ ಡ್ಯಾಂನ ಹಲಗೆಯನ್ನು ತೆಗೆಯದಿರುವುದರಿಂದ ಅಲ್ಲಿ ಕೃತಕ ನೆರೆ ಸೃಷ್ಟಿಯಾಗಿದೆ. ಅದನ್ನು ಸರಿಪಡಿಸಲು ತಹಶೀಲ್ದಾರರ ಮೂಲಕ   ಸಂಬಂಧಪಟ್ಟ ಇಲಾಖೆಗೆ ತಿಳಿಸಲು                    ಸಭೆಯಲ್ಲಿ ನಿರ್ಣಯಿಸಲಾಯಿತು.ತಾಲ್ಲೂಕಿನಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಿರುವ ಏಳು ಶಾಲೆಗಳನ್ನು ಮುಚ್ಚಲಾಗುತ್ತಿದೆ ಆದರೆ ಶಾಲಾ ಕಟ್ಟಡಗಳನ್ನು ಉಳಿಸಿಕೊಳ್ಳಬೇಕಾಗಿದೆ. ಚೆನ್ನಾಗಿ ನಿರ್ವಹಿಸದಿದ್ದರೆ ಅವು ಹಾಳು ಬೀಳುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.ಇದಕ್ಕೆ ಪ್ರತಿಕ್ರಿಯೆಸಿದ ಶಿಕ್ಷಣಾಧಿಕಾರಿ ರವಿಶಂಕರ್‌ರಾವ್ ಇಲಾಖೆ ಅವುಗಳನ್ನು ಉಳಿಸಿಕೊಳ್ಳುವ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.ಪಶುವೈದ್ಯಕೀಯ ಆಸ್ಪತ್ರೆಯಲ್ಲಿ 88 ಮಂದಿ ಸಿಬ್ಬಂದಿ ಅವಶ್ಯಕತೆಯಿದೆ. ಆದರೆ ಅಲ್ಲಿ ಕೇವಲ 21 ಮಂದಿ ಮಾತ್ರ ಇದ್ದು, ಸಿಬ್ಬಂದಿ ಕೊರತೆ ನೀಗಿಸಲು ಕ್ರಮ ಕೈಗೊಳ್ಳಲು ನಿರ್ಣಯಿಸಲಾಯಿತು.ತಾಲ್ಲೂಕಿನಲ್ಲಿ ಒಟ್ಟು 86 ಮಲೇರಿಯ ಪ್ರಕರಣಗಳು ಪತ್ತೆಯಾಗಿವೆ. ಅವುಗಳಲ್ಲಿ ಪುರಸಭಾ ವ್ಯಾಪ್ತಿಯಲ್ಲಿ 23 ಪ್ರಕರಣಗಳು ಕಂಡು ಬಂದಿವೆ.ಇದು ದೂರದ ಊರಿನಿಂದ ಪಟ್ಟಣಕ್ಕೆ ಬಂದವರಿಂದ ಹರಡುತ್ತಿದೆ ಎಂದು  ತಾಲ್ಲೂಕು ಆರೋಗ್ಯ ಇಲಾಖೆಯವರು ಮಾಹಿತಿ ನೀಡಿದರು.ಬೆಳ್ಮಣ್ -ಕಾರ್ಕಳ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನಡೆದು ತುಂಬಾ ಸಮಯವಾಗಿದೆ. ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಕನಿಷ್ಠ ರಸ್ತೆ ಹೊಂಡಗಳನ್ನು ಮುಚ್ಚುವ ಕೆಲಸ ಆರಂಭಿಸಬೇಕು ಎಂದು ಶಾಸಕ ಗೋಪಾಲ ಭಂಡಾರಿ ತಿಳಿಸಿದರು.ನಂತರ ತಾಲ್ಲೂಕಿನ ನಿರ್ಮಿತಿ ಕೇಂದ್ರಗಳ ಕಾರ್ಯ ನಿರ್ವಹಣೆ, ಕೃಷಿ ನಷ್ಟ, ಮೆಸ್ಕಾಂ ಬಗ್ಗೆ, ದಾರಿ ದೀಪ, ಪಡಿತರ ಚೀಟಿ ಬಗ್ಗೆ ಅಸಮಾಧಾನಗಳು ಸಭೆಯಲ್ಲಿ ಕೇಳಿ ಬಂದವು.  ಉಪಾಧ್ಯಕ್ಷ ರವೀಂದ್ರ ಕುಮಾರ್ ಕುಕ್ಕುಂದೂರು, ಪುರಸಭಾಧ್ಯಕ್ಷೆ ಪ್ರತಿಮಾ ಮೋಹನ್, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ರಾಜೇಂದ್ರ ಬೇಕಲ್ ಇತರರು ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.