ಶನಿವಾರ, ಮೇ 28, 2022
31 °C

ಕಾಲಿನ ಶಕ್ತಿ ಕಳೆದುಕೊಂಡ ಯಜಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರ್ಕಳ: ಇಲ್ಲಿನ ದಾನಶಾಲೆಯ ಬಾಡಿಗೆ ಮನೆಯಲ್ಲಿ ವಾಸಿಸುವ ಜಯರಾಮ್ ಕಳೆದ ಎರಡೂವರೆ ವರ್ಷಗಳಿಂದ ಕಾಲಿನ ಬಲ ಕಳೆದುಕೊಂಡು ಹಾಸಿಗೆ ಹಿಡಿದಿದ್ದಾರೆ. ದುಡಿದು ಸಂಪಾದನೆ ಮಾಡುತ್ತಿದ್ದ ಜಯರಾಮ್‌ಗೆ ಆಕಸ್ಮಿಕವಾಗಿ ಆರೋಗ್ಯ ಕೈಕೊಟ್ಟಿದೆ. ಕುಟುಂಬವನ್ನು ನಿರ್ವಹಿಸುವ ಯಜಮಾನನಿಗೆ ಬಂದ ಕಾಯಿಲೆಯಿಂದ ಪತ್ನಿ, ಮಕ್ಕಳು ಕಂಗಾಲಾಗಿದ್ದಾರೆ.ಸ್ಥಳೀಯ ಚಿತ್ರಮಂದಿರವೊಂದರಲ್ಲಿ ತಂತ್ರಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದ 50 ವರ್ಷದ ಜಯರಾಮ್ ಅವರಿಗೆ ಇದ್ದಕ್ಕಿದ್ದಂತೆ ಸೊಂಟದಿಂದ ಮೊಣಕಾಲಿನವರೆಗಿನ ಭಾಗದಲ್ಲಿ ಬಲಕಡಿಮೆಯಾಗಲು ಆರಂಭವಾಯಿತು. ತಕ್ಷಣ ಅವರು ಮಂಗಳೂರಿನ ವೈದ್ಯರಿಗೆ ತೋರಿಸಿದಾಗ ನರ ದೌರ್ಬಲ್ಯವಿದೆ ಎಂದು ಔಷಧ ಕೊಟ್ಟರು.

 

ಆದರೆ ಫಲಕಾಣಲಿಲ್ಲ. ನಂತರ ಕಾರ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ತೋರಿಸಿದಾಗ ತೊಡೆಯ ಭಾಗದಲ್ಲಿ ಶಸ್ತ್ರಚಿಕಿತ್ಸೆ ಮಾಡಿದರೆ ಸರಿಗೋಗುತ್ತದೆ ಎಂದು ತಿಳಿಸಿ ತೊಡೆಯ ಭಾಗದಲ್ಲಿ ಶಸ್ತ್ರ ಚಿಕಿತ್ಸೆ ನಡೆಸಿದರು. ಆದರೂ ಪೂರ್ಣಗುಣವಿಲ್ಲ. `ಕಾಲಿನಲ್ಲಿ ನೋವು ಕಾಣಿಸಿಕೊಳ್ಳುತ್ತಿದೆ. ಇದರಿಂದ ನಡೆದಾಡಲು ಸಾಧ್ಯವಾಗುತ್ತಿಲ್ಲ. ಆಗಾಗ ಕೆಮ್ಮು ಕೂಡಾ ಕಾಣಿಸಿಕೊಳ್ಳುತ್ತದೆ~ ಎನ್ನುತ್ತಾರೆ ಜಯರಾಮ್.ಕಳೆದ ವರ್ಷದಿಂದ ಉಡುಪಿ ಉದ್ಯಾವರ ಕುತ್ಪಾಡಿಯ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆಯಲ್ಲಿ ಔಷಧೋಪಚಾರ ನಡೆಯುತ್ತಿದೆ. ಅಲ್ಲಿ ಕಷಾಯ, ಎರಡು ಬಗೆಯ ಮಾತ್ರೆ ನೀಡಿ ತಿಂಗಳಿಗೊಮ್ಮೆ ಪರೀಕ್ಷೆಗೆ ಬರಲು ತಿಳಿಸಿದ್ದಾರೆ. ಇದರಿಂದ ಸ್ವಲ್ಪ ಗುಣಮುಖರಾಗುತ್ತಿದ್ದಾರೆ. ಜಯರಾಮ್ ಅವರಿಗೆ ಮನೆಯಲ್ಲಿ ಸಮತಟ್ಟಾದ ನೆಲದಲ್ಲಿ ನಡೆದಾಡಲು ಮಾತ್ರ ಸಾಧ್ಯ.ಆದರೆ ಕಾಲು ಮೇಲೆತ್ತಿ ಮೆಟ್ಟಲು ಹತ್ತಿ ಇಳಿದು ಮುಂದೆ ಕಾಲಿಡಲು ಕಷ್ಟವಾಗುತ್ತಿದೆ. ಅವರ ಪತ್ನಿ ಉಮಾ ಬೀಡಿ ಕಟ್ಟಿ ಸಂಸಾರ  ನಿಭಾಯಿಸುತ್ತಿದ್ದಾರೆ. ಇವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದು, ಹಿರಿಯವಳು ಭಾರ್ಗವಿ (8) ಸ್ಥಳೀಯ ಶಾಲೆಯಲ್ಲಿ ಎರಡನೇ ತರಗತಿಯಲ್ಲಿ ಓದುತ್ತಿದ್ದಾಳೆ. ಪಲ್ಲವಿಗೆ ಐದು ವರ್ಷ. ಜಯರಾ ಉದ್ಯೋಗ ನಡೆಸುತ್ತಿದ್ದ ಚಿತ್ರಮಂದಿರದ ಯಜಮಾನರು ಅಲ್ಪಸ್ವಲ್ಪ ಸಹಾಯ ನೀಡುತ್ತಿದ್ದರು.

 

ಯಾವಾಗಲೂ ಅದನ್ನು ನಿರೀಕ್ಷಿಸವಂತಿಲ್ಲ ಎನ್ನುವಂತಾಗಿದೆ. ಈ ಪುಟ್ಟ ಅಸಹಾಯಕ ಸಂಸಾರಕ್ಕೆ ಸಾರ್ವಜನಿಕರ, ಉದಾರಿಗಳ ನೆರವಿನ ಅವಶ್ಯವಿದೆ. ಜಯರಾಮ್ ಅವರ ಔಷಧಿಗೆ ತಿಂಗಳಿಗೆ ಸಾವಿರ ರೂಪಾಯಿ ಅಗತ್ಯವಿದೆ. ಮನೆ ನಿರ್ವಹಣೆ, ಮಕ್ಕಳ ಶಾಲಾ ಖರ್ಚು ಇವೆಲ್ಲವನ್ನು ಅವರ ಪತ್ನಿ ಉಮಾ ಅವರ ಬೀಡಿ ಕಟ್ಟುವ ಕೂಲಿಯಿಂದ ಪೂರೈಸಲಾಗುತ್ತಿಲ್ಲ. ಉದಾರಿಗಳು, ಜಯರಾ ಕುಟುಂಬಕ್ಕೆ ಸಹಾಯ ಮಾಡಬಹುದು. ಅವರ ಕಾರ್ಕಳ ಕೆನರಾ ಬ್ಯಾಂಕಿನ ಉಳಿತಾಯ ಖಾತೆ  ಸಂಖ್ಯೆ : 0609101559144ಗೆ ಸಂದಾಯ ಮಾಡಬಹುದು           .

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.